For Quick Alerts
  ALLOW NOTIFICATIONS  
  For Daily Alerts

  'ಫ್ಯಾಂಟಮ್' ಮೊದಲ ದೃಶ್ಯದಲ್ಲಿ ಕಿಚ್ಚ ಸುದೀಪ್ ಅಭಿನಯ ಹೇಗಿತ್ತು?

  |

  ಕಿಚ್ಚ ಸುದೀಪ್ ನಟನೆಯ ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷೆಯ ಸಿನಿಮಾ 'ಫ್ಯಾಂಟಮ್' ಚಿತ್ರದ ಚಿತ್ರೀಕರಣದ ಮೊದಲ ದೃಶ್ಯ ಹೇಗಿತ್ತು? ಅದರಲ್ಲಿ ಸುದೀಪ್ ಹೇಗೆ ಅಭಿನಯಿಸಿದ್ದಾರೆ?

  'ರಂಗಿತರಂಗ' ದಂತಹ ಸೂಪರ್ ಹಿಟ್ ಚಿತ್ರ ನೀಡಿದ ಅನೂಪ್ ಭಂಡಾರಿ ಹಾಗೂ ಅಭಿನಯ ಚಕ್ರವರ್ತಿ ಎಂದೇ ಹೆಸರಾಗಿರುವ ಸುದೀಪ್ ಕಾಂಬಿನೇಷನ್‌ನ ಮೊದಲ ಸಿನಿಮಾದ ಚಿತ್ರೀಕರಣ ಸೋಮವಾರ ಆರಂಭವಾಗಿದೆ. ಅನೂಪ್ ಭಂಡಾರಿ ಅವರ ಹುಟ್ಟುಹಬ್ಬದ ದಿನದಂದೇ ಚಿತ್ರೀಕರಣ ಶುರುವಾಗಿರುವುದು ವಿಶೇಷ.

  'ಫ್ಯಾಂಟಮ್’ಗಾಗಿ ಹೈದರಾಬಾದ್ ಗೆ ಹೊರಟ ಸುದೀಪ್: ಕಿಚ್ಚನಿಗೆ ಜೊತೆಯಾಗ್ತಾರಾ ತೆಲುಗು ಸುಂದರಿ 'ಫ್ಯಾಂಟಮ್’ಗಾಗಿ ಹೈದರಾಬಾದ್ ಗೆ ಹೊರಟ ಸುದೀಪ್: ಕಿಚ್ಚನಿಗೆ ಜೊತೆಯಾಗ್ತಾರಾ ತೆಲುಗು ಸುಂದರಿ

  ಹೈದರಾಬಾದ್‌ನಲ್ಲಿ ಚಿತ್ರೀಕರಣ ಆರಂಭವಾಗುವುದಕ್ಕೂ ಮುಂದೆ ಮೊದಲ ಸನ್ನಿವೇಶದ ಬಗ್ಗೆ ಸುದೀಪ್ ಜತೆ ಚರ್ಚಿಸುತ್ತಾ, ದೃಶ್ಯವನ್ನು ಸಿದ್ಧಪಡಿಸುತ್ತಿರುವ ಚಿತ್ರವನ್ನು ಅನೂಪ್ ಭಂಡಾರಿ ಹಂಚಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ಮುಗಿಸಿದ ಬಳಿಕ ಉಳಿದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.

  ಸುದೀಪ್ ಅಭಿನಯ ಅದ್ಭುತ

  ಸುದೀಪ್ ಅಭಿನಯ ಅದ್ಭುತ

  'ಸುದೀಪ್ ಸರ್ ಜತೆಗೆ ಮೊದಲ ದೃಶ್ಯ ಚಿತ್ರೀಕರಿಸಲು ಸಿದ್ಧತೆ ನಡೆಸುತ್ತಿದ್ದೇನೆ. 'ಫ್ಯಾಂಟಮ್' ಚಿತ್ರೀಕರಣ ಶುರುವಾಗಿದೆ' ಎಂದಿರುವ ಅನೂಪ್, ಸುದೀಪ್ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಅನೂಪ್ ಭಂಡಾರಿ ಮಾಹಿತಿ ನೀಡಿದ್ದಾರೆ. ಸುದೀಪ್ ಅಭಿನಯವನ್ನು ಅವರು 'ಹಿ ನೈಲ್ಡ್ ಇಟ್' ಎಂದು ಒಂದೇ ಪದದಲ್ಲಿ ವರ್ಣಿಸಿದ್ದಾರೆ.

  ಎಕ್ಸೈಟ್ ಆಗಿದ್ದೇನೆ ಎಂದ ಸುದೀಪ್

  ಕಂಠೀರವ ಸ್ಟುಡಿಯೋದಲ್ಲಿ ಭಾನುವಾರ ಚಿತ್ರತಂಡ ಫೋಟೊ ಹಾಗೂ ಪ್ರೋಮೋ ಚಿತ್ರೀಕರಣ ನಡೆಸಿತ್ತು. ಇದರ ಬಗ್ಗೆ ಅಪ್‌ಡೇಟ್ ನೀಡಿದ್ದ ಸುದೀಪ್, 'ಕಂಠೀರವ ಸ್ಟುಡಿಯೋದಲ್ಲಿ ಫ್ಯಾಂಟಮ್‌ಗಾಗಿ ಅದ್ಭುತವಾದ ಫೋಟೊ ಮತ್ತು ಪ್ರೋಮೋ ಶೂಟ್ ನಡೆದಿದೆ. ನಾಳೆಯಿಂದ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ತಂಡ ಸಕತ್ ಎಕ್ಸೈಟ್ ಆಗಿದೆ. ನಾನೂ ಕೂಡ. ಎಲ್ಲ ಕಲಾವಿದರಿಗೂ, ತಾಂತ್ರಿಕ ತಂಡಕ್ಕೂ ಮತ್ತು ನಿರ್ಮಾಣ ಸಂಸ್ಥೆಗೂ ಶುಭಾಶಯ ಹೇಳುತ್ತೇನೆ' ಎಂದು ಟ್ವೀಟ್ ಮಾಡಿದ್ದರು.

  ಸುದೀಪ್ 'ಫ್ಯಾಂಟಮ್' ಸಿನಿಮಾಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಖ್ಯಾತ ನಟಸುದೀಪ್ 'ಫ್ಯಾಂಟಮ್' ಸಿನಿಮಾಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಖ್ಯಾತ ನಟ

  ವಿಭಿನ್ನ, ಆಕರ್ಷಕ ಪೋಸ್ಟರ್

  ವಿಭಿನ್ನ, ಆಕರ್ಷಕ ಪೋಸ್ಟರ್

  ಫ್ಯಾಂಟಮ್‌ನ ಮೊದಲ ಆಕರ್ಷಕ ಪೋಸ್ಟರ್‌ಗೆ ಸುದೀಪ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೈಯಲ್ಲಿ ಗನ್ ಹಿಡಿದು ನಿಂತ ಸುದೀಪ್ ಅವರ ನೆರಳಿನ ಚಿತ್ರ, ಹಾಗೂ ಹಿನ್ನೆಲೆಯಲ್ಲಿ ಬೆಳಕು ಪ್ರಕಾಶಿಸುವ ವಿನ್ಯಾಸದ ಪೋಸ್ಟರ್‌ನಲ್ಲಿ, 'ಚಿತ್ರೀಕರಣ ಆರಂಭವಾಗಿದೆ' ಎಂದು ತಿಳಿಸಲಾಗಿತ್ತು. ಪೋಸ್ಟರ್ ತುಂಬಾ ಚೆನ್ನಾಗಿದೆ ಎಂಬ ಹೊಗಳಿಕೆಗಳು ವ್ಯಕ್ತವಾಗಿವೆ.

  ಫ್ಯಾಂಟಮ್ ಹೊಸ ಅವತಾರ

  ಫ್ಯಾಂಟಮ್ ಹೊಸ ಅವತಾರ

  'ಕೋಟಿಗೊಬ್ಬ 3' ಚಿತ್ರೀಕರಣ ಮುಗಿಸಿರುವ ಸುದೀಪ್, 'ಫ್ಯಾಂಟಮ್' ಚಿತ್ರಕ್ಕಾಗಿ ತಮ್ಮ ಅವತಾರ ಬದಲಿಸಿದ್ದಾರೆ. ಚಿತ್ರದಲ್ಲಿ ಅವರ ಹೇರ್‌ ಸ್ಟೈಲ್ ವಿಭಿನ್ನವಾಗಿರಲಿದೆಯಂತೆ. ಫ್ಯಾಂಟಮ್ ಮುಂಚೆಗೂ ಅನೂಪ್ ಮತ್ತ ಸುದೀಪ್ ಜೋಡಿಯಿಂದ 'ಬಿಲ್ಲ ರಂಗ ಬಾಷಾ' ಚಿತ್ರ ಬರಲಿದೆ ಎನ್ನಲಾಗಿತ್ತು. ಎರಡು 2018ರಲ್ಲಿಯೇ ಅನೂಪ್ ಭಂಡಾರಿ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಈಗ ಜಾಕ್ ಮಂಜು ನಿರ್ಮಾಣದಲ್ಲಿ 'ಫ್ಯಾಂಟಮ್' ಆರಂಭವಾಗಿದೆ.

  English summary
  Director Anup Bhandari shared first photo with Sudeep before the firt shot of Phantom movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X