For Quick Alerts
  ALLOW NOTIFICATIONS  
  For Daily Alerts

  ಅಪ್ಪು ಪುಣ್ಯಭೂಮಿಯಲ್ಲಿ 'ಗಂಧದ ಗುಡಿ' ಸೆಲೆಬ್ರೆಷನ್: 24 ಗಂಟೆ ಸಾಧು ಕೋಕಿಲಾ ಮನರಂಜನೆ!

  |

  'ಗಂಧದ ಗುಡಿ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇನ್ನೊಂದು ಕಡೆ ಅಪ್ಪು ಕೊನೆಯ ಸಿನಿಮಾದ ಪ್ರೀಮಿಯರ್‌ ಶುರುವಾಗುತ್ತಿದೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಪವರ್‌ಸ್ಟಾರ್ ಕನಸನ್ನು ಕಣ್ತುಂಬಿಕೊಳ್ಳಲು ಕಾದು ಕೂತಿದ್ದಾರೆ.

  ಪುನೀತ್‌ ರಾಜ್‌ಕುಮಾರ್ ಕೊನೆಯ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಕಂಠೀರವ ಸ್ಟುಡಿಯೋ ಸಿಂಗಾರಗೊಳ್ಳುತ್ತಿದೆ. ಪುನೀತ್ ಪುಣ್ಯಭೂಮಿ ಮುಂದೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಅಭಿಮಾನಿಗಳು ಸಂಭ್ರಮ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

  ಪತ್ನಿ ಜೊತೆ ಮಾತಾಡಲು ಬೆಟ್ಟ ಹತ್ತಿದ್ದ ಅಪ್ಪು: 'ಗಂಧದ ಗುಡಿ'ಯಲ್ಲಿ ಅಶ್ವಿನಿ ಸರ್ಪ್ರೈಸ್ ಎಂಟ್ರಿ!ಪತ್ನಿ ಜೊತೆ ಮಾತಾಡಲು ಬೆಟ್ಟ ಹತ್ತಿದ್ದ ಅಪ್ಪು: 'ಗಂಧದ ಗುಡಿ'ಯಲ್ಲಿ ಅಶ್ವಿನಿ ಸರ್ಪ್ರೈಸ್ ಎಂಟ್ರಿ!

  'ಗಂಧದ ಗುಡಿ' ಬಿಡುಗಡೆಯಾಗುತ್ತಿರುವುದರಿಂದ ರಾಜ್ಯದ ಮೂಲೆ ಮೂಲೆಯಲ್ಲೂ ಸಂಭ್ರಮವಿರುತ್ತೆ. ಈಗಾಗಲೇ ಕಟೌಟ್‌ಗಳು, ಮನರಂಜನಾ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

  ಅಪ್ಪು ಕೊನೆಯ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್: 'ಗಂಧದ ಗುಡಿ' ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್!ಅಪ್ಪು ಕೊನೆಯ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್: 'ಗಂಧದ ಗುಡಿ' ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್!

  ಪುಣ್ಯಭೂಮಿ ಮುಂದೆ ಅಪ್ಪು ಕಟೌಟ್

  ಪುಣ್ಯಭೂಮಿ ಮುಂದೆ ಅಪ್ಪು ಕಟೌಟ್

  ಪವರ್‌ಸ್ಟಾರ್ ಪುನೀತ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಮುಂದೆ ಸುಮಾರು 75 ಕಟೌಟ್‌ಗಳು ಎದ್ದು ನಿಲ್ಲಲಿವೆ. ಈಗಾಗಲೇ ಕಟೌಟ್‌ಗಳು ನಿಲ್ಲಿಸಿವ ಕೆಲಸ ಭರದಿಂದ ಸಾಗಿದೆ. ಪವರ್‌ಸ್ಟಾರ್ ಅಭಿನಯದ ಸಿನಿಮಾಗಳ ಕಟೌಟ್ ದೂರದೂರುಗಳಿಂದ ಬರುವ ಅಭಿಮಾನಿಗಳನ್ನು ಸ್ವಾಗತ ಮಾಡಲಿದೆ. ಅಷ್ಟಕ್ಕೂ ಪುಣ್ಯಭೂಮಿ ಮುಂದೆ 75 ಕಟೌಟ್‌ಗಳನ್ನು ನಿಲ್ಲಿಸುವುದಕ್ಕೊಂದು ಕಾರಣವಿದೆ. ಪುನೀತ್ ರಾಜ್‌ಕುಮಾರ್ 1975ರಲ್ಲಿ ಜನಿಸಿದ್ದರಿಂದ ಪುಣ್ಯಭೂಮಿಯ ಮುಂದೆ ಸುಮಾರು 75 ಕಟೌಟ್‌ಗಳನ್ನು ನಿಲ್ಲಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ.

  24 ಗಂಟೆ ಸಾಧು ನಿರಂತರ ಆರ್ಕೆಸ್ಟ್ರಾ

  24 ಗಂಟೆ ಸಾಧು ನಿರಂತರ ಆರ್ಕೆಸ್ಟ್ರಾ

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿಯ ಮುಂದೆ ಮನರಂಜನಾ ಕಾರ್ಯಕ್ರಮ ಜರುಗಲಿದೆ. ಹಾಸ್ಯ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಹಾಗೂ ಅವರ ತಂಡ 24 ಗಂಟೆಗಳ ಕಾಲ ನಿರಂತರ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಅಕ್ಟೋಬರ್ 28ರ ರಾತ್ರಿ 12 ಗಂಟೆಯಿಂದ ಈ ಸಂಗೀತ ಕಾರ್ಯಕ್ರಮ ಆರಂಭ ಆಗಲಿದ್ದು, ಮರುದಿನ ಮಧ್ಯ ರಾತ್ರಿ (ಅಕ್ಟೋಬರ್ 29) 12 ಗಂಟೆವರೆಗೆ ಸಂಗೀತ ಕಾರ್ಯಕ್ರಮ ಜರುಗಲಿದೆ. ಪುನೀತ್ ರಾಜ್‌ಕುಮಾರ್‌ ಗೌರವಾರ್ಥ ಈ ಕಾರ್ಯಕ್ರಮವನ್ನು ಸಾಧು ಹಮ್ಮಿಕೊಂಡಿದ್ದಾರೆ.

  ಪುಣ್ಯಭೂಮಿಗೆ ಸೀರಿಯಲ್ ಸೆಟ್

  ಪುಣ್ಯಭೂಮಿಗೆ ಸೀರಿಯಲ್ ಸೆಟ್

  'ಗಂಧದ ಗುಡಿ' ರಿಲೀಸ್ ಹಾಗೂ ಪುನೀತ್ ರಾಜ್‌ಕುಮಾರ್ ಮೊದಲನೇ ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಡುಡಿಯೋ ಸಿಂಗಾರಗೊಳ್ಳಲಿದೆ. ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸಮಾಧಿಯನ್ನು ಸೀರಿಯಲ್ ಸೆಟ್‌ಗಳಿಂದ ಸಿಂಗಾರ ಮಾಡಲಿದ್ದಾರೆ. ಕಲರ್‌ಫುಲ್ ಬೆಳಕುಗಳಿಂದ ಮೂವರ ಪುಣ್ಯಭೂಮಿಯನ್ನು ಅಲಂಕಾರ ಮಾಡಲಾಗುತ್ತಿದೆ.

  2 ಸಾವಿರಕ್ಕೂ ಅಧಿಕ ಬಾವುಟ

  2 ಸಾವಿರಕ್ಕೂ ಅಧಿಕ ಬಾವುಟ

  ಅಕ್ಟೋಬರ್ 28 ಹಾಗೂ 29 ಈ ಎರಡೂ ದಿನಗಳು ರಾಜ್ಯ ದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಕಂಠೀರವ ಸ್ಟುಡಿಯೋದ ಮುಂಭಾಗದ ರಸ್ತೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬಾವುಟಗಳು ರಾರಾಜಿಸಲಿವೆ. ಅಪ್ಪು ಭಾವಚಿತ್ರವಿರುವ ಈ ಬಾವುಟಗಳು ಪವರ್‌ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಸ್ವಾಗತವನ್ನು ಕೊರಲಿವೆ. ಹೀಗಾಗಿ ಅಕ್ಟೋಬರ್ 28 ಹಾಗೂ ಅಕ್ಟೋಬರ್ 29ರಂದು ಈ ಎರಡೂ ದಿನಗಳೂ ಕೂಡ 'ಗಂಧದ ಗುಡಿ' ಜಾತ್ರೆ ನಡೆಯಲಿದೆ.

  English summary
  Gandhada Gudi Movie Release Celebration In Puneeth Rajkumar Memorial, Know More.
  Thursday, October 27, 2022, 17:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X