»   » ಕಮಲ್ ಹಾಸನ್ ಮೇಲೆ ಗಂಭೀರ ಆರೋಪ ಮಾಡಿದ ನಟಿ ಗೌತಮಿ

ಕಮಲ್ ಹಾಸನ್ ಮೇಲೆ ಗಂಭೀರ ಆರೋಪ ಮಾಡಿದ ನಟಿ ಗೌತಮಿ

Posted By:
Subscribe to Filmibeat Kannada

ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತು ನಟಿ ಗೌತಮಿ ಅವರ ಸಂಬಂಧ ಮುರಿದುಬಿದ್ದಿದೆ. ಸ್ವತಃ ಈ ವಿಚಾರವನ್ನ ಗೌತಮಿ ಅವರೇ 2016ರ ಅಕ್ಟೋಬರ್ ತಿಂಗಳಲ್ಲಿ ಸ್ಪಷ್ಟಪಡಿಸಿದ್ದರು. ಆದ್ರೆ, ಯಾವ ಕಾರಣಗಳನ್ನ ಹೇಳದ ನಟಿ ಗೌತಮಿ ''ನಮ್ಮ ದಾರಿಗಳು ಸರಿಪಡಿಸಲಾಗದಷ್ಟು ಕವಲೊಡೆದಿದೆ. ನನ್ನ ಮತ್ತು ಕಮಲ್ ಹಾಸನ್ ಮಧ್ಯೆ ಯಾವುದೇ ಮುನಿಸಿಲ್ಲ. ಬೇರೆಯಾಗುವುದೊಂದೆ ಅನಿವಾರ್ಯ'' ಎಂದು ಸಂಬಂಧಕ್ಕೆ ಬ್ರೇಕ್ ಹಾಕಿದ್ದರು.

ಮಗಳು-ಪ್ರಿಯತಮೆಯ ಜಗಳದಿಂದ ಹೈರಾಣಾದ ಕಮಲ್ ಹಾಸನ್

ಇದೀಗ, ಕಮಲ್ ಹಾಸನ್ ಮತ್ತು ಗೌತಮಿ ಮತ್ತೆ ಒಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ಮಧ್ಯೆ ಮನಸ್ಥಾಪ ಬಗೆಹರಿಸಿಕೊಂಡಿದ್ದು ಮತ್ತೆ ಒಟ್ಟಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದ್ರೆ, ಈ ಸುದ್ದಿಯನ್ನ ತಳ್ಳಿ ಹಾಕಿರುವ ಗೌತಮಿ, ನಟ ಕಮಲ್ ಹಾಸನ್ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ. ಏನದು.? ಮುಂದೆ ಓದಿ.....

ಮತ್ತೆ ಒಂದಾಗಲ್ಲ

''ಕಮಲ್ ಹಾಸನ್ ಮತ್ತು ನನ್ನ ಮಧ್ಯೆ ಯಾವುದೇ ಸಂಬಂಧ ಮುಂದುವರೆದಿಲ್ಲ. ನನ್ನ ಗಳ ಭವಿಷ್ಯದಿಂದ ನಾನು ಸ್ವತಂತ್ರವಾಗಿ ಜೀವಿಸುತ್ತಿದ್ದೇನೆ. ಕಮಲ್ ಮತ್ತು ನನ್ನ ಅಂತರವನ್ನ ಹೀಗೆಯೇ ಮುಂದುವರೆಸುಲಿದ್ದೇನೆ'' ಎಂದು ಗೌತಮಿ ತಮ್ಮ ಬ್ಲ್ಯಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಯಾವುದೇ ವ್ಯಹಾರಿಕ ಸಂಬಂಧವೂ ಇಲ್ಲ

ಕಮಲ್ ಹಾಸನ್ ಮತ್ತು ರಾಜ್ ಕಮಲ್ ಇಂಟರ್ ನ್ಯಾಷನಲ್ ಸಂಸ್ಥೆಯ ಅಡಿ ನಿರ್ಮಿಸಿರುವ ಚಿತ್ರಗಳಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದೇನೆ. 2010ರಲ್ಲಿ ಸಾಹಿತ್ಯ ವಿಚಾರ ಪ್ರಸಾರಕ್ಕಾಗಿ ಆರಂಭವಾದ ಆನ್ ಲೈನ್ ಪೋರ್ಟಲ್ ನಲ್ಲಿ ನಿರ್ದೇಶಕಿ ಆಗಿ ಕೆಲಸ ಮಾಡಿದ್ದೆ. ಈಗ ಅದೆಲ್ಲದಕ್ಕೂ ರಾಜಿನಾಮೆ ನೀಡಿದ್ದೇನೆ. ಯಾವುದು ವ್ಯವಹಾರಿಕ ಸಂಬಂಧವೂ ಮುಂದುವರೆದಿಲ್ಲ.

ಸಂಭಾವನೆ ಕೊಡಿ

ಕಮಲ್ ಸಿನಿಮಾಗಳಲ್ಲಿ ವಸ್ತ್ರವಿನ್ಯಾಸಕಿ ಆಗಿ ಕೆಲಸ ಮಾಡಿದ್ದರ ಪ್ರತಿಫಲವಾಗಿ ನನಗೆ ಯಾವುದೇ ಸಂಭಾವನೆ ನೀಡಿಲ್ಲ. ಹಳಿ ತಪ್ಪಿರುವ ನನ್ನ ಬದುಕನ್ನ ಸಾಗಿಸಲು ಈಗ ಬಾಕಿ ಹಣದ ಅವಶ್ಯಕತೆ ಇದೆ. ನನಗೆ ಬಾಕಿ ಹಣ ಕೊಡಿ ಎಂದು ಕಮಲ್ ಹಾಸನ್ ಅವರ ಬಳಿ ಮನವಿ ಮಾಡಿದ್ದೇನೆ. ಅದರ ಹೊರತು ಬೇರೆ ಯಾವ ಸಂಬಂಧವೂ ಇಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಕಮಲ್ ಮತ್ತು ಗೌತಮಿ ಬಗ್ಗೆ

ಕಮಲ್ ಹಾಸನ್ ಮೊದಲನೇ ಭಾರಿಗೆ 1978ರಲ್ಲಿ ವಾಣಿ ಗಣಪತಿ ಅವರೊಂದಿಗೆ ವಿವಾಹವಾಗಿದ್ದರು. ನಂತರ ಅವರಿಂದ ವಿಚ್ಛೇದನ ಪಡೆದ ಕಮಲ್ 1988ರಲ್ಲಿ ಸಾರಿಕ ಅವರ ಜೊತೆ ಎರಡನೇ ಮದುವೆಯಾದರು. ಈ ದಂಪತಿಗೆ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್ ಇಬ್ಬರು ಮಕ್ಕಳು. ನಂತರ ಇವರಿಂದಲೂ ವಿಚ್ಛೇದನ ಪಡೆದ ಕಮಲ್ ಗೌತಮಿ ಅವರೊಂದಿಗೆ ಲಿವಿಂಗ್ ಟು ಗೆದರ್ ಸಂಬಂಧ ಹೊಂದಿದರು. 13 ವರ್ಷಗಳ ಕಾಲ ಒಟ್ಟಿಗೆ ಸಹ ಜೀವನ ನಡೆಸಿದರು. 2016 ರಲ್ಲಿ ಈ ಸಂಬಂಧ ಮುರಿದು ಬಿತ್ತು.

ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಗೌತಮಿ

1988ರಲ್ಲಿ ಉದ್ಯಮಿ ಸಂದಿಪ್ ಭಾಟಿಯಾ ಅವರ ಜೊತೆ ವಿವಾಹವಾದ ಗೌತಮಿ ಒಂದೇ ವರ್ಷದ ನಂತರ ಅವರಿಂದ ವಿಚ್ಛೇದನ ಪಡೆಯುತ್ತಾರೆ. ಈ ದಂಪತಿಗೆ ಒಂದು ಹೆಣ್ಣು ಮಗು ಇರುತ್ತೆ. ನಂತರ 2005 ರಿಂದ ಕಮಲ್ ಹಾಸನ್ ಜೊತೆಯಲ್ಲಿ ಲಿವಿಂಗ್ ಟು ಗೆದರ್ ಸಂಬಂಧ ಮುಂದುವರೆಸುತ್ತಾರೆ. 2016 ರಲ್ಲಿ ಈ ಸಂಬಂಧವೂ ಮುರಿದುಬಿತ್ತು.

English summary
In a blog posted on Saturday, Kamal Haasan’s former partner Gautami denied any continued personal or professional association with the actor and filmmaker. The couple ended their 13-year relationship in October 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada