For Quick Alerts
  ALLOW NOTIFICATIONS  
  For Daily Alerts

  ಮುಂಗಾರುಮಳೆ ಹುಡುಗನ ವಯಸ್ಸೆಷ್ಟು? ಏನು ವಿಶೇಷ?

  By ಜೀವನರಸಿಕ
  |

  ಅವನು ಬಾಂದಳದ ಹುಣ್ಣಿಮೆಯ `ಚಂದ'ಮಾಮ. ನಗುವನ್ನೇ ಬಂಧಿಸಿದ ಬಟ್ಟಲುಗಣ್ಣುಗಳು, ಖುಷ್ ಖುಷಿಯಾದ ನಗು ಮಿನುಗುವ ನಗುವಿನ ದೀಪ. ನಗುವನ್ನೇ ನಾಚಿಸುವ ಮೊಗ. ಹೀಗೆ ಅಂದ ಚಂದವನ್ನ ಚಂದನವನದಲ್ಲಿ ಹೊಗಳೋಕೆ ಸಾಧ್ಯವಿರೋ ಏಕೈಕ ನಟ ಗೋಲ್ಡನ್ಸ್ಟಾರ್ ಗಣೇಶ್.

  ಕನ್ನಡದ ಕಾಲೇಜು ಕನ್ಯೆಯರ ಮುಖದಲ್ಲಿ ಮಂದಹಾಸ ಮೂಡಿಸೋ ಸದಾ ನಗುವನ್ನೇ ಹೊದ್ದ ಮುದ್ದಿನ ಹುಡುಗ ಅವನು. ಮುಂಗಾರು ಮಳೆಯ ಪ್ರೀತಮ್, ಚೆಲುವಿನ ಚಿತ್ತಾರದ ಮಾದೇಸ, ಕಾಮಿಡಿ ಟೈಂ ಗಣೇಶ್ ಗೋಲ್ಡನ್ಸ್ಟಾರ್ ಆಗಿದ್ದು ರಾತ್ರೋರಾತ್ರಿಯಲ್ಲ. ['ಇಟಲಿ' ದಿನಪತ್ರಿಕೆಯಲ್ಲಿ ಗಣೇಶ್-ರಾಧಿಕಾ ಪಂಡಿತ್ ಸುದ್ದಿ!]

  ಗಣೇಶ್ ಮಾದೇಸನಾಗಿ ಗೋಲ್ಡನ್ಸ್ಟಾರ್ ಆಗಿದ್ದರ ಹಿಂದೆ ದೊಡ್ಡ ಕಥೆಯಿದೆ. ಅನುಮಾನ, ಅವಮಾನ, ಸನ್ಮಾನಗಳ ಮರೆಯಲಾಗದ ದೂರದ ಹಾದಿಯಿದೆ. ಗಣೇಶ್ ಅದ್ಯಾವುದನ್ನೂ ಮರೆತಿಲ್ಲ. ಹಾಗಂತ ನಡೆದ ಬಂದ ಹಾದಿಯಲ್ಲೆಲ್ಲೂ ಸುಸ್ತಾಗಿ ಕುಳಿತಿಲ್ಲ. 25ನೇ ಸಿನಿಮಾದತ್ತ ಸಾಗಿದ ಕನ್ನಡದ ಚಿನ್ನದ ನಟನ ಮೂವತ್ತೆಂಟನೇ ಹುಟ್ಟುಹಬ್ಬದ ಸಂಭ್ರಮದ ದಿನ ಗಣೇಶ್ ಮುಂದಿನ ಸಿನಿಮಾಗಳು ಮತ್ತು ನಿಮ್ಗೆ ಗೊತ್ತಿಲ್ಲದ ಒಂದಷ್ಟು ವಿಷ್ಯಗಳನ್ನ ನಿಮ್ಮ ಮುಂದಿಡ್ತಿದ್ದೀವಿ. ['ಪಟಾಕಿ' ಹಚ್ಚಲಿದ್ದಾರೆ ಗಣೇಶ್ ಮತ್ತು ರನ್ಯ]

  ಎಲ್ಲಕ್ಕಿಂತ ಹೆಚ್ಚಾಗಿ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಂದ ಮುಂಗಾರುಮಳೆ, ಚೆಲುವಿನ ಚಿತ್ತಾರ ಮೀರಿಸುವಂಥ ಇನ್ನಷ್ಟು ಅದ್ಭುತ ಕನ್ನಡ ಚಿತ್ರಗಳು ಬರಲಿ ಎಂದು ಹಾರೈಸೋಣ.

  ಗಣೇಶ್ ಹೊಸ ಮನೆ

  ಗಣೇಶ್ ಹೊಸ ಮನೆ

  ಗೋಲ್ಡನ್ಸ್ಟಾರ್ ಗಣೇಶ್ ಜೆಪಿ ನಗರದಲ್ಲಿ ಹೊಸ ಮನೆ ಕಟ್ಟಿಸಿದ್ದಾರೆ. ಸ್ಯಾಂಡಲ್ವುಡ್ನ ಸೂಪರ್ಸ್ಟಾರ್ಗಳು ಒಂದ್ಸಾರಿ ಹುಬ್ಬೆರಿಸಿ ನೋಡುವಂತಹಾ ಅದ್ಧೂರಿ ಮನೆಗೆ ಸದ್ಯದಲ್ಲೇ ಗಣೇಶ್ ದಂಪತಿ ಎಂಟ್ರಿಕೊಟಲಿದ್ದಾರೆ.

  ಪತ್ನಿ ಶಿಲ್ಪಾ ಪ್ಲಾನ್

  ಪತ್ನಿ ಶಿಲ್ಪಾ ಪ್ಲಾನ್

  ಗೋಲ್ಡನ್ಸ್ಟಾರ್ ಗಣೇಶ್ ಪತ್ನಿಯ ಕನಸಿನಂತೆ ಈ ಮನೆ ತಯಾರಾಗಿದೆ. ವಿದೇಶದಿಂದಲೇ ಹೆಚ್ಚಿನ ಡಿಸೈನ್ಗಳನ್ನ ತರಿಸಿ ಹತ್ತಾರು ಕೋಟಿ ವೆಚ್ಚದಲ್ಲಿ ಸ್ವತಃ ಗಣೇಶ್ ಪತ್ನಿ ಈ ಮನೆಯನ್ನ ಪ್ರೀತಿಯ ಗಂಡನ ಬರ್ತಡೇ ಗಿಫ್ಟಾಗಿ ಕಟ್ಟಿಸ್ತಿದ್ದಾರೆ.

  ಎರಡನೆ ಮಗು

  ಎರಡನೆ ಮಗು

  ಸದ್ಯ ಗೋಲ್ಡನ್ಸ್ಟಾರ್ ಪತ್ನಿ 7 ತಿಂಗಳ ಗರ್ಭಿಣಿ ಇನ್ನೆರಡು ತಿಂಗಳಲ್ಲಿ ಗಣೇಶ್ ಮತ್ತೊಂದು ಮಗುವಿನ ತಂದೆಯಾಗಲಿದ್ದಾರೆ. ಇದು ಪತ್ನಿ ಶಿಲ್ಪಾ ಗಂಡನಿಗೆ ನೀಡ್ತಿರೋ ಎರಡನೇ ಗಿಫ್ಟ್ ಅಂದ್ರೂ ತಪ್ಪಾಗಲಾರದು. ಹೊಸಮನೆಗೆ ಹೊಸ ಮಗುವಿನೊಂದಿಗೆ ಗಣೇಶ್-ಶಿಲ್ಪಾ ದಂಪತಿ ಎಂಟಿಯಾಗಲಿದ್ದಾರೆ.

  ಚಾರಿತ್ರ್ಯ ಅಂದ್ರೆ ಅತೀವ ಪ್ರೀತಿ

  ಚಾರಿತ್ರ್ಯ ಅಂದ್ರೆ ಅತೀವ ಪ್ರೀತಿ

  ಗಣೇಶ್ಗೆ ಮಗಳು ಚಾರಿತ್ರ್ಯ ಅಂದ್ರೆ ತುಂಬಾನೇ ಪ್ರೀತಿ. ಮಗಳ ಹುಟ್ಟುಹಬ್ಬಕ್ಕಾಗಿ ಗಣೇಶ್ ತಾನೂ ಮಗುವಾಗ್ತಾರೆ. ಶೂಟಿಂಗ್ ಇಲ್ಲದಿದ್ರೆ ಮಗಳ ಜೊತೆ ಕಾಲಕಳೆಯೋದೇ ಗಣೇಶ್ ಹವ್ಯಾಸ.

  ಚೆಲುವಿನ ಚಿತ್ತಾರ ಇಷ್ಟ

  ಚೆಲುವಿನ ಚಿತ್ತಾರ ಇಷ್ಟ

  ಗಣೇಶ್ ಸ್ಟಾರ್ ಆದ್ರೂ ಸಿಂಪಲ್ಲಾಗಿರೋ ನಟ. ಅದ್ಭುತ ಅನ್ನಿಸೋ ಮುಂಗಾರುಮಳೆ ಚಿತ್ರವನ್ನ ಕೊಟ್ರೂ ಇವತ್ತಿಗೂ ಗಣೇಶ್ ಹೆಚ್ಚು ಮಾತ್ನಾಡೋದೂ ಚೆಲುವಿನ ಚಿತ್ತಾರದ ಬಗ್ಗೆ. ಅದು ತನ್ನ ಮೊದಲ ಚಿತ್ರ ಅನ್ನೋ ಪ್ರೀತಿ ಗಣೇಶ್ಗೆ ಅದನ್ನ ಮುಂಗಾರುಮಳೆಗಿಂತ ದೊಡ್ಡದಾಗಿಸುತ್ತೆ.

  ನಿರ್ದೇಶಕರ ನಟ

  ನಿರ್ದೇಶಕರ ನಟ

  ದೊಡ್ಡಸ್ಟಾರ್ ಆಗಿ ಬೆಳೆದ್ರೂ ಗಣೇಶ್ ನಿರ್ದೇಶಕರ ಮುಂದೆ ಶರಣಾಗಿಬಿಡೋ ನಟ. ಗಣೇಶ್ಗೆ ನಿರ್ದೇಶನ ಮಾಡೋದು ಅಂದ್ರೆ ನೀರು ಕುಡಿದಷ್ಟೇ ಸುಲಭ ಅಂತಾರೆ ನಿದರ್ೇಶಕರು

  English summary
  Golden Star Ganesh turns 38 on 2nd July. Wish you very Happy Birthday Ganesh. He has traversed through difficult path to become the Golden Star. The ever smiling, handsome actor has not forgotten it too. Wish he gives many more hits like Mungaru Male, Cheluvina Chittara.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X