For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 9 ಸಿನಿಮಾ ಹೊಡೆದುರುಳಿಸಿದ 'ಕಾಂತಾರ': ಲಿಸ್ಟ್ ಇಲ್ಲಿದೆ!

  |

  'ಕಾಂತಾರ' ರಿಲೀಸ್ ಆಗಿ ಮೂರು ವಾರಗಳು ಕಳೆದಿವೆ. ಆದರೆ, ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾದ ಕಲೆಕ್ಷನ್ ಇನ್ನೂ ಕುಗ್ಗುತ್ತಲೇ ಇಲ್ಲ. ದಿನದಿಂದ ದಿನಕ್ಕೆ ಈ ಸಿನಿಮಾ ರೆಕಾರ್ಡ್ ಮಾಡುತ್ತಲೇ ಮುನ್ನುಗ್ಗುತ್ತಿದೆ. ಪ್ರತಿ ಹಂತದಲ್ಲಿಯೂ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಲೇ ಇದೆ.

  ಆರಂಭದಲ್ಲಿ 'ಕಾಂತಾರ' ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ಮೌತ್ ಪಬ್ಲಿಸಿಟಿಯಿಂದ ಸಿನಿಮಾದ ಗಳಿಕೆ ದೇಶದ ಮೂಲೆ ಮೂಲೆಯನ್ನು ತಲುಪುವಂತಾಗಿದೆ. ಈಗಾಗಲೇ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ.

  ಬಸ್‌ನಲ್ಲಿ ಬಂದು 'ಕಾಂತಾರ' ವೀಕ್ಷಿಸಿದ ಕಾಸರಗೋಡಿನ ಒಂದೇ ಗ್ರಾಮದ 69 ಮಂದಿ!ಬಸ್‌ನಲ್ಲಿ ಬಂದು 'ಕಾಂತಾರ' ವೀಕ್ಷಿಸಿದ ಕಾಸರಗೋಡಿನ ಒಂದೇ ಗ್ರಾಮದ 69 ಮಂದಿ!

  ಕೆಲವು ದಿನಗಳ ಹಿಂದಷ್ಟೇ ಬಾಕ್ಸಾಫೀಸ್ ಕಲೆಕ್ಷನ್ ಸುಮಾರು 100 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಈಗ 150 ಕೋಟಿ ರೂ. ಗಡಿದಾಡಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಸಾಧನೆ ಮಾಡುವುದಕ್ಕೆ 'ಕಾಂತಾರ' ದೊಡ್ಡ ಯುದ್ಧವನ್ನೇ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 9 ಸಿನಿಮಾಗಳನ್ನು ಹೊಡೆದುರುಳಿಸಿದೆ. ಆ 9 ಸಿನಿಮಾಗಳ ಪಟ್ಟಿ ಇಲ್ಲಿದೆ.

  'ಗುರು ಶಿಷ್ಯರು','ತೋತಾಪುರಿ'

  'ಗುರು ಶಿಷ್ಯರು','ತೋತಾಪುರಿ'

  'ಕಾಂತಾರ' ರಿಲೀಸ್‌ ಆಗುವುದಕ್ಕಿಂತ ಒಂದು ವಾರ ಮುನ್ನವಷ್ಟೇ ಶರಣ್ ಸಿನಿಮಾ 'ಗುರು ಶಿಷ್ಯರು' ರಿಲೀಸ್ ಆಗಿತ್ತು. ಭಾರತದ ದೇಸಿ ಆಟ ಖೋ ಖೋವನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಗುರುಶಿಷ್ಯರ ನಡುವಿನ ಬಾಂಧವ್ಯವನ್ನು ಹೆಣೆಯಲಾಗಿತ್ತು. ಈ ಸಿನಿಮಾಗೆ ಪಾಸಿಟಿವ್ ರಿವ್ಯೂ ಕೂಡ ಸಿಕ್ಕಿತ್ತು. ಆದರೆ, ವಾರದ ಬಳಿಕ 'ಕಾಂತಾರ' ರಿಲೀಸ್ ಆಗುತ್ತಿದ್ದಂತೆ 'ಗುರುಶಿಷ್ಯ' ಹವಾ ತಣ್ಣಗಾಯಿತು. ಇನ್ನು 'ಕಾಂತಾರ' ಜೊತೆನೇ ನವರಸ ನಾಯಕ ಜಗ್ಗೇಶ್ ಅಭಿನಯದ ಸಿನಿಮಾ 'ತೋತಾಪುರಿ 1'ರಿಲೀಸ್ ಆಗಿತ್ತು. ಈ ಸಿನಿಮಾಗೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ, 'ಕಾಂತಾರ' ಮುಂದೆ ಸದ್ದು ಮಾಡಲೇ ಇಲ್ಲ.

  'ಗುಡ್‌ಬೈ', 'ಡಾಕ್ಟರ್ ಜಿ' ಸೋಲು

  'ಗುಡ್‌ಬೈ', 'ಡಾಕ್ಟರ್ ಜಿ' ಸೋಲು

  ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳೂ ಸದ್ದು ಮಾಡುತ್ತವೆ. ಕೆಲವೊಮ್ಮೆ ಕನ್ನಡ ಸಿನಿಮಾಗಳಿಗೇ ಟಕ್ಕರ್ ಕೊಡುತ್ತವೆ. ಆದರೆ, 'ಕಾಂತಾರ' ರಿಲೀಸ್ ಆದ ಮೂರು ವಾರದ ಬಳಿಕವೂ ಬೇರೆ ಭಾಷೆಯ ಸಿನಿಮಾಗಳಿಗೆ ಎದುರೇಟು ನೀಡುತ್ತಿದೆ. ಎರಡು ವಾರಗಳ ಹಿಂದಷ್ಟೇ (ಅಕ್ಟೋಬರ್ 7) ರಶ್ಮಿಕಾ ಮಂದಣ್ಣ ಅಭಿನಯದ 'ಗುಡ್‌ಬೈ' ರಿಲೀಸ್ ಆಗಿತ್ತು. ಈ ಸಿನಿಮಾ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ ಹಿಂದಿ ಬೆಲ್ಟ್‌ನಲ್ಲೂ ಟಕ್ಕರ್ ಕೊಡುತ್ತಿಲ್ಲ. ಹಾಗೇ ಕಳೆದ ವಾರ ರಿಲೀಸ್ ಆಗಿದ್ದ ಆಯುಷ್ಮಾನ್ ಖುರಾನಾ ಸಿನಿಮಾ 'ಡಾಕ್ಟರ್ ಜಿ' ಹಾಗೂ 'ಕೋಡ್ ನೇಮ್ ತಿರಂಗ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡುತ್ತಿಲ್ಲ.

  'ಕಾಂತಾರ' Vs 'ವಿಕ್ರಂ ವೇದ'

  'ಕಾಂತಾರ' Vs 'ವಿಕ್ರಂ ವೇದ'

  ಸೆಪ್ಟೆಂಬರ್ 30 ರಂದು 'ಕಾಂತಾರ' ರಿಲೀಸ್ ಆದಾಗಲೇ ಹೃತಿಕ್ ರೋಷನ್ ಸಿನಿಮಾ 'ವಿಕ್ರಂ ವೇದ' ಬಿಡುಗಡೆಯಾಗಿತ್ತು. ಆದರೆ, 'ಕಾಂತಾರ' ಮುಂದೆ 'ವಿಕ್ರಂ ವೇದ' ಸೋತು ಸುಣ್ಣವಾಗಿದೆ. ಹೃತಿಕ್ ರೋಷನ್ 'ವಿಕ್ರಂ ವೇದ' ವಿಶ್ವದಾದ್ಯಂತ ಲೈಫ್‌ ಟೈಮ್ ಕಲೆಕ್ಷನ್ 127.06 ಕೋಟಿ ರೂ. ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಅದೇ 'ಕಾಂತಾರ' ಬಾಕ್ಸಾಫೀಸ್ ಕಲೆಕ್ಷನ್ 150 ಕೋಟಿ ರೂ. ಕ್ಲಬ್ ಸಮೀಪದಲ್ಲಿದೆ. ಈ ಲೆಕ್ಕಾಚಾರದ ಪ್ರಕಾರ, 'ವಿಕ್ರಂ ವೇದ'ವನ್ನು 'ಕಾಂತಾರ' ಕಲೆಕ್ಷನ್ ವಿಚಾರದಲ್ಲಿ ಹೊಡೆದುರುಳಿಸಿದೆ.

  ತೆಲುಗು-ತಮಿಳು ಸಿನಿಮಾಗಳಿಗೂ ಟಕ್ಕರ್

  ತೆಲುಗು-ತಮಿಳು ಸಿನಿಮಾಗಳಿಗೂ ಟಕ್ಕರ್

  ಇಷ್ಟೇ ಅಲ್ಲ ತೆಲುಗು-ತಮಿಳಿನ ದುಬಾರಿ ಸಿನಿಮಾಗಳಿಗೂ 'ಕಾಂತಾರ' ಟಕ್ಕರ್ ಕೊಟ್ಟಿದೆ. 'ಕಾಂತಾರ' ರಿಲೀಸ್ ಆದ ದಿನವೇ 'ಪೊನ್ನಿಯಿನ್ ಸೆಲ್ವನ್' ರಿಲೀಸ್ ಆಗಿತ್ತು. ಮೊದಲ ದಿನ ಬೆಂಗಳೂರಿನಲ್ಲಿ 'ಕಾಂತಾರ'ಕ್ಕಿಂತ ಹೆಚ್ಚು ಶೋ ಸಿಕ್ಕಿತ್ತು. ಆದರೂ, ಕರ್ನಾಟಕದಲ್ಲಿ 'ಕಾಂತಾರ' ಸೋಲಿಸಲು ಸಾಧ್ಯವಾಗಲಿಲ್ಲ. ಹಾಗೇ ಧನುಷ್ ಸಿನಿಮಾ 'ನಾನೇ ವರುವೇನ್' ಕೂಡ 'ಕಾಂತಾರ' ಮಂಡಿಯೂರಿದೆ. ಇನ್ನೊಂದು ಕಡೆ ಒಂದು ವಾರದ ಬಳಿಕ ರಿಲೀಸ್ ಆಗಿದ್ದ ತೆಲುಗು ಸಿನಿಮಾ 'ಗಾಡ್ ಫಾದರ್' ಆರಂಭದಲ್ಲಿ ಅಬ್ಬರಿಸಿದ್ದರೂ, ಬಳಿಕ ಸದ್ದೇ ಕೇಳಿಸುತ್ತಿಲ್ಲ.

  100 ಕೋಟಿ ಕ್ಲಬ್‌ಗೆ 'ಕಾಂತಾರ' ಎಂಟ್ರಿ: ಎಲ್ಲೆಲ್ಲಿ ಹೇಗಿದೆ ಬಾಕ್ಸಾಫೀಸ್ ಕಲೆಕ್ಷನ್?100 ಕೋಟಿ ಕ್ಲಬ್‌ಗೆ 'ಕಾಂತಾರ' ಎಂಟ್ರಿ: ಎಲ್ಲೆಲ್ಲಿ ಹೇಗಿದೆ ಬಾಕ್ಸಾಫೀಸ್ ಕಲೆಕ್ಷನ್?

  English summary
  Guru Shishyaru Totapuri Goodbye God Father Failed At Box Office Infront Of Kantara, Know More.
  Tuesday, October 18, 2022, 17:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X