For Quick Alerts
  ALLOW NOTIFICATIONS  
  For Daily Alerts

  'ಶಕುಂತ್ಲೆ' ಜೊತೆಯಲ್ಲಿ 'ದೇಸಿ ದೊರೆ' ಹಂಸಲೇಖ ಹೊಸ ಸಾಹಸ!

  By Suneel
  |

  ನಾದಬ್ರಹ್ಮ ಹಂಸಲೇಖ ರವರು ಗೀತೆ ರಚನಾಕಾರರಾಗಿ, ಸಂಗೀತ ನಿರ್ದೇಶಕರಾಗಿ, ಕಥೆ-ಚಿತ್ರಕಥೆ-ಸಂಭಾಷಣೆ ಬರಹಗಾರರಾಗಿ ಕನ್ನಡ ಸಿನಿ ಜಗತ್ತಿಗೆ ನೀಡಿದ ಕೊಡುಗೆ ಅಪಾರ. ಅಲ್ಲದೇ ಇಂದು ಚಂದನವನದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿರುವ ವಿ, ಮನೋಹರ್, ವಿ.ಹರಿಕೃಷ್ಣ, ಗೀತೆ ರಚನಾಕಾರರಾದ ವಿ.ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಮತ್ತು ಮುಂತಾದವರಿಗೆ ಮಾರ್ಗದರ್ಶನ ನೀಡಿದ್ದಾರೆ.[ಕುತೂಹಲ, ತಾರ್ಕಿಕ ಅಂಶ ಇದ್ದರೆ ಫಿಲಂಗೆ ಬೆಲೆ: ಹಂಸಲೇಖ]

  ಈ ಹಿಂದೆ ತಮ್ಮ ಮಗನ ಚಿತ್ರವೊಂದಕ್ಕೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಹಂಸಲೇಖ ರವರು ಈಗ ದೀರ್ಘಕಾಲದ ನಂತರ ಮತ್ತೆ ನಿರ್ದೇಶಕರಾಗಿ ಸಾಲು ಸಾಲು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ದೇಸಿ ದೊರೆ ಹಂಸಲೇಖ ರವರು ನಿರ್ದೇಶನ ಮಾಡಲು ಮುಂದಾಗಿರುವ ಆ ಸಿನಿಮಾಗಳು ಯಾವುವು ತಿಳಿಯಲು ಮುಂದೆ ಓದಿರಿ..

  ಮತ್ತೆ ನಿರ್ದೇಶನಕ್ಕೆ ಮುಂದಾದ ಹಂಸಲೇಖ

  ಮತ್ತೆ ನಿರ್ದೇಶನಕ್ಕೆ ಮುಂದಾದ ಹಂಸಲೇಖ

  ಈ ಹಿಂದೆ ತಮ್ಮ ಮಗನ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದ ಹಂಸಲೇಖ ರವರು ಈಗ ಮತ್ತೆ ದೀರ್ಘಕಾಲದ ನಂತರ ಡೈರೆಕ್ಟರ್ ಕ್ಯಾಪ್ ತೊಡಲು ಸಿದ್ದರಾಗಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಒಂದಲ್ಲಾ ಎರಡಲ್ಲ ಅವರು ಮೂರು ಸಾಲು ಸಾಲು ಚಿತ್ರಗಳಿಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

  ಇಂಟರೆಸ್ಟಿಂಗ್ ಆಗಿದೆ ಮೊದಲನೇ ಚಿತ್ರ

  ಇಂಟರೆಸ್ಟಿಂಗ್ ಆಗಿದೆ ಮೊದಲನೇ ಚಿತ್ರ

  ಸದ್ಯದಲ್ಲೇ ಹಂಸಲೇಖರವರು ಆಕ್ಷನ್ ಹೇಳಲಿರುವ ಮೊದಲ ಸಿನಿಮಾ ಹೆಸರು 'ಶಕುಂತ್ಲೆ'. 'ಪ್ರೇಮಲೋಕ' ಚಿತ್ರದ ಹಾಡಿಗೆ ಗೀತೆ ರಚಿಸಿದ್ದ ಹಂಸಲೇಖ ರವರು ಹಾಡೊಂದರಲ್ಲಿ 'ನೀನೇನಾ ಶಂಕುತಲಾ' ಎಂದು ಬರೆದಿದ್ದರು. ಇಂದು ಅದೇ ಹೆಸರನ್ನು ಟೈಟಲ್ ಆಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ.

  'ಶಕುಂತ್ಲೆ' ಚಿತ್ರೀಕರಣ ಯಾವಾಗ?

  'ಶಕುಂತ್ಲೆ' ಚಿತ್ರೀಕರಣ ಯಾವಾಗ?

  ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿರುವ ಹಂಸಲೇಖ ರವರು 'ಶಕುಂತ್ಲೆ' ಚಿತ್ರವನ್ನು ನಾಳೆ(ಜೂನ್ 23) ಇಂದಲೇ ಚಿತ್ರೀಕರಣ ಶುರು ಮಾಡುತ್ತಿದ್ದಾರೆ. ಅಲ್ಲದೇ ಈ ವಾರದಲ್ಲಿಯೇ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಲಿದ್ದಾರಂತೆ.

  ಇತರೆ ಎರಡು ಸಿನಿಮಾಗಳ ಹೆಸರೇನು?

  ಇತರೆ ಎರಡು ಸಿನಿಮಾಗಳ ಹೆಸರೇನು?

  ನಾದಬ್ರಹ್ಮ ರವರು 'ಶಕುಂತ್ಲೆ' ನಂತರ 'ಐಯೋರಾ' ಮತ್ತು 'ಗಿಟಾರ್' ಎಂಬ ಮತ್ತೆರಡು ಚಿತ್ರಗಳನ್ನು ನಿರ್ದೇಶನ ಮಾಡಲಿದ್ದಾರಂತೆ.

  'ಐಯೋರಾ' ಚಿತ್ರದ ವಿಶೇಷತೆ

  'ಐಯೋರಾ' ಚಿತ್ರದ ವಿಶೇಷತೆ

  'ಐಯೋರಾ' ಚಿತ್ರದಲ್ಲಿ ಐದು ಕತೆಗಳಿರಲಿದ್ದು, ಎರಡು ಕತೆಗಳನ್ನು ಹಂಸಲೇಖ ರವರೇ ಬರೆಯುತ್ತಾರಂತೆ. ಉಳಿದ ಮೂರು ಕಥೆಗಳನ್ನು ಇತರರು ಬರೆಯಲಿದ್ದಾರಂತೆ.

  'ಗಿಟಾರ್' ಸಂಗೀತ ಪ್ರಧಾನ ಚಿತ್ರ

  'ಗಿಟಾರ್' ಸಂಗೀತ ಪ್ರಧಾನ ಚಿತ್ರ

  ಹಂಸಲೇಖ ಆಕ್ಷನ್ ಕಟ್ ಹೇಳಲಿರುವ 'ಗಿಟಾರ್' ಸಿನಿಮಾ ಸಂಗೀತ ಪ್ರದಾನ ಚಿತ್ರವಾಗಿರಲಿದ್ದು, ವಿಶ್ವ ಮಟ್ಟದಲ್ಲಿ ಗಮನಸೆಳೆಯಲಿದೆಯಂತೆ. ಈ ಚಿತ್ರದ ಸಂಗೀತಕ್ಕಾಗಿ ನಾದಬ್ರಹ್ಮ ಒಂಬತ್ತು ತಿಂಗಳಿನಿಂದ ವರ್ಕ್ ಮಾಡಿದ್ದಾರಂತೆ. ಅಲ್ಲದೇ ಹೊಸ ರೀತಿಯ ವಾದ್ಯಗಳನ್ನು ಈ ಚಿತ್ರದಲ್ಲಿ ಬಳಕೆ ಮಾಡಲಾಗುತ್ತದೆಯಂತೆ.

  ನಿರ್ಮಾಪಕರು ಯಾರು?

  ನಿರ್ಮಾಪಕರು ಯಾರು?

  ಹಂಸಲೇಖ ರವರು ನಿರ್ದೇಶನ ಮಾಡಲು ಮುಂದಾಗಿರುವ ಮೂರು ಚಿತ್ರಗಳನ್ನು ನಿರ್ಮಾಣ ಮಾಡುವವರು ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ. ಅಲ್ಲದೇ ಚಿತ್ರದ ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರಂತೆ.

  English summary
  The pride of Karnataka in music, lyrics and forming the Desi music school and college Nadabrahma Hamsalekha has come up with three projects – Shakuntle, Aiyora and Guitar Kannada films. He will direct all these three movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X