»   » ಸುದೀಪ್ ಬಂದ್ರು ಲೇಟು: ಜನ ತಿಂದ್ರು ಲಾಠಿ ಏಟು

ಸುದೀಪ್ ಬಂದ್ರು ಲೇಟು: ಜನ ತಿಂದ್ರು ಲಾಠಿ ಏಟು

Written By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ 'ಹೆಬ್ಬುಲಿ' ಆಡಿಯೋ ಲಾಂಚ್ ನೆನ್ನೆ ತಾನೆ ದಾವಣಗೆರೆಯಲ್ಲಿ ನಡೆಯಿತು. ಆಡಿಯೋ ಲಾಂಚ್ ವೇಳೆ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ದರ್ಶನಕ್ಕಿಂತ ಮೊದಲು ಸಿಕ್ಕಿದ್ದು ಮಾತ್ರ ಲಾಠಿ ಏಟಿನ ರುಚಿ.['ಹೆಬ್ಬುಲಿ'ಯಲ್ಲಿ ಸುದೀಪ್ ಗೆ ಎದುರಾಗಲಿರುವ ವಿಲನ್ ಇವರೇ]

ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಸಂಜೆ ಮೊದಲೇ ನಿಶ್ಚಯಿಸಿದಂತೆ ಸಮಾರಂಭ ಸಂಜೆ 6 ಕ್ಕೆ ನಿಗದಿಯಾಗಿತ್ತು. ಅಭಿಮಾನಿಗಳು ಹೈಸ್ಕೂಲ್ ಮೈದಾನದ ತುಂಬ ಸುದೀಪ್‌ ಅಣ್ಣನನ್ನು ನೋಡಲು 6 ಗಂಟೆಯಿಂದಲೇ ಕಾಯುತ್ತಿದ್ದರು. ಕಿಚ್ಚ ಸುದೀಪ್ ರವರು ಮಾತ್ರ ರಾತ್ರಿ 9 ಗಂಟೆ ಆದರೂ ಸಹ ವೇದಿಕೆಗೆ ಬರಲೇ ಇಲ್ಲಾ. ಸಿಟ್ಟಿಗೆದ್ದ ಅಭಿಮಾನಿಗಳು ವೇದಿಕೆಯತ್ತ ನುಗ್ಗಲು ಯತ್ನಿಸಿದಾಗ ಪೊಲೀಸರು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಲೇಬೇಕಾಯ್ತು. 'ಹೆಬ್ಬುಲಿ' ಆಡಿಯೋ ಲಾಂಚ್ ಕಾರ್ಯಕ್ರಮದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ಓದಿ.[ಚಿತ್ರಗಳು: ಆರ್ಮಿ ಲುಕ್ ನಲ್ಲಿ 'ಹೆಬ್ಬುಲಿ' ಸುದೀಪ್ ಗತ್ತು]

ಅಭಿಮಾನಿಗಳಿಗೆ ಲಾಠಿ ಏಟಿನ ರುಚಿ

ಆಡಿಯೋ ಲಾಂಚ್ ಸಮಾರಂಭ 6 ಕ್ಕೆ ನಿಗದಿಯಾಗಿ ಸುದೀಪ್ ರಾತ್ರಿ 9 ಗಂಟೆ ಆದರೂ ಬರದ ಕಾರಣ, ತಾಳ್ಮೆ ಕಳೆದುಕೊಂಡ ಜನರು ಪ್ಲಾಸ್ಟಿಕ್ ಕುರ್ಚಿಗಳನ್ನು ಹಾಗೂ ಚಪ್ಪಲಿಗಳನ್ನು ವೇದಿಕೆಯತ್ತ ಎಸೆಯಲು ಆರಂಭಿಸಿ, ಬ್ಯಾರಿಕೇಡರ್ ಮುರಿದು ವೇದಿಕೆ ಕಡೆಗೆ ನುಗ್ಗಲು ಯತ್ನಿಸಿದರು. ಇದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರಿಂದ, ಹಲವರ ಕೈ-ಕಾಲುಗಳಿಗೆ ಪೆಟ್ಟು ಬಿದ್ದವು.

ತಾತ್ಕಾಲಿಕವಾಗಿ ಕಾರ್ಯಕ್ರಮ ಸ್ಥಗಿತ

ಅಭಿಮಾನಿಗಳು ಹೆಚ್ಚು ಸಮಯದಿಂದ ಕಾದು ಕುಳಿತರು ಸುದೀಪ್‌ ರವರು ಬರದ ಕಾರಣ ಖುರ್ಚಿಗಳನ್ನು ಎಸೆಯಲು ಆರಂಭಿಸಿದರು. ಇದರಿಂದ ಮುಂದಿ ಸಾಲಿನಲ್ಲಿ ಕುಳಿತಿದ್ದ ಹಲವು ಮಹಿಳೆಯರು ಗಾಯಗೊಂಡರು. ನೂರಾರು ಖುರ್ಚಿಗಳು ಪುಡಿಯಾದವು. ಕೊನೆಗೆ ಜನರ ಗದ್ದಲದ ಕಾರಣ ತಾತ್ಕಾಲಿಕವಾಗಿ ಕಾರ್ಯಕ್ರಮ ಸ್ಥಗಿತವಾಗಿತ್ತು.

ಜೀ ದಕ್ಷಿಣ ಕಂಪನಿಗೆ ಆಡಿಯೋ ಹಕ್ಕು

ಸುದೀಪ್‌ ಅಭಿನಯದ 'ಹೆಬ್ಬುಲಿ' ಸಿನಿಮಾ ಆಡಿಯೋ ಹಕ್ಕನ್ನು ಜೀ ಮ್ಯೂಸಿಕ್ ಖರೀದಿಸಿದೆ. ಹೆಬ್ಬುಲಿ ಸಿನಿಮಾಗೆ ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ ಮಾಡಿದ್ದಾರೆ.

ದಾವಣಗೆರೆ ಸುತ್ತಾ ಮುತ್ತಾ ಕಿಚ್ಚನ ಫ್ಲೆಕ್ಸ್

ದಾವಣಗೆರೆ ಅಂದ್ರೆ ಕಿಚ್ಚ ಸುದೀಪ್‌ ಅವರಿಗೆ ತುಂಬಾ ಇಷ್ಟ. ಈ ಕಾರಣದಿಂದ ದಾವಣಗೆರೆಯ ಯುವಕರು 'ಹೆಬ್ಬುಲಿ' ಆಡಿಯೋ ಲಾಂಚ್‌ ಹಿನ್ನೆಲೆಯಲ್ಲಿ 'ದಾವಣಗೆರೆ ಜಿಲ್ಲಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ (ರಿ)' ಸಂಘದ ವತಿಯಿಂದ ನಗರದ ಸುತ್ತ ಕಿಚ್ಚನ ಫೋಟೋ ಜೊತೆ ತಮ್ಮ ಫೋಟೋಗಳನ್ನು ಸೇರಿಸಿ ಬ್ಯಾನರ್ ಹಾಕಿಸಿದ್ದರು.

ಬೇಸರಗೊಂಡ ಕಿಚ್ಚ

ಆಡಿಯೋ ಲಾಂಚ್ ವೇಳೆ ಕಿಚ್ಚ ಸ್ವಲ್ಪ ಬೇಸರಗೊಂಡಿದ್ದರು. ಯಾಕೆ? ಅಂತ ತಿಳಿದಾಗ ಗೊತ್ತಾಗಿದ್ದು, 'ಹೆಬ್ಬುಲಿ' ಚಿತ್ರದ ಹಾಡುಗಳು ಬಿಡುಗಡೆಗೆ ಮುನ್ನವೇ ಲೀಕ್ ಆಗಿತ್ತು. ಚಿತ್ರದ ಹಾಡುಗಳನ್ನು ಲೀಕ್ ಮಾಡಿದ ಪುಣ್ಯಾತ್ಮನು ಒಂದಿಷ್ಟು ಕಾಸು ಮಾಡಿಕೊಳ್ಳಲಿ ಎಂದು ಬೇಸರದಿಂದಲೇ ಹೇಳಿದ್ದಾರೆ.

ಆಂಡಿಯೋ ಲಾಂಚ್‌ ನಲ್ಲಿ ವಿ.ರವಿಚಂದ್ರನ್

'ಹೆಬ್ಬುಲಿ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ವಿ. ರವಿಚಂದ್ರನ್, "ದಾವಣಗೆರೆಗೆ 14 ವರ್ಷಗಳ ನಂತರ ಸ್ಟೇಜ್ ಪ್ರೋಗ್ರಾಮ್‌ಗೆ ಇಲ್ಲಿಗೆ ಬಂದಿದ್ದೇನೆ. ನನ್ನ ಹಿರಿಯ ಮಗ ಕಿಚ್ಚ ಸುದೀಪ್‌ ನೊಂದಿಗೆ ಬಂದಿದ್ದೇನೆ" ಎಂದು ಆಡಿಯೋ ಲಾಂಚ್ ವೇಳೆ ಹೇಳಿರುವುದನ್ನು ಹೆಬ್ಬುಲಿ ಅಫೀಸಿಯಲ್ ಟ್ವಿಟರ್ ಪೇಜ್‌ನಲ್ಲಿ ಟ್ವೀಟ್ ಮಾಡಲಾಗಿದೆ.

ಹೆಬ್ಬುಲಿ ಆಡಿಯೋ ಲಾಂಚ್‌ನಲ್ಲಿ ನಿರ್ಮಾಪಕರು

ಎಸ್‌ ಕೃಷ್ಣ ನಿರ್ದೇಶಿಸುತ್ತಿರುವ 'ಹೆಬ್ಬುಲಿ' ಸಿನಿಮಾ ಆಡಿಯೋ ಲಾಂಚ್‌ ಸಮಾರಂಭದಲ್ಲಿ ನಿರ್ಮಾಪಕರಾದ ರಘುನಾಥ್ ಮತ್ತು ಉಮಾಪತಿ ಶ್ರೀನಿವಾಸ್ ಹಾಜರಿದ್ದರು.

 

English summary
Abhinaya Chakravarthy Sudeep acted Most Awaited 'Hebbuli' Audio Release leaves to Police lathi charge at Kichcha Fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada