»   » ಚಿತ್ರಗಳು: ಗಣೇಶ್ ಮನೆಯಲ್ಲಿ ತಾರೆಯರ ಹೊಸ ವರ್ಷ ಸಂಭ್ರಮ

ಚಿತ್ರಗಳು: ಗಣೇಶ್ ಮನೆಯಲ್ಲಿ ತಾರೆಯರ ಹೊಸ ವರ್ಷ ಸಂಭ್ರಮ

Posted By:
Subscribe to Filmibeat Kannada

ಸೆಲೆಬ್ರಿಟಿಗಳು ಅಂದಮೇಲೆ ಹೊಸ ವರ್ಷದ ಸಂಭ್ರಮ ಆಚರಣೆ ದೊಡ್ಡ ಮಟ್ಟದಲ್ಲೇ ಇರುತ್ತದೆ. ಪಬ್‌ ಅಥವಾ ದೊಡ್ಡ ರೆಸ್ಟೋರೆಂಟ್‌ಗಳಲ್ಲಿ ನಡೆಯುತ್ತದೆ ಎಂದು ಎಲ್ಲರೂ ಥಿಂಕ್ ಮಾಡುತ್ತಾರೆ. ಆದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ವರ್ಷ ಆಚರಣೆ ಮಾಡಿರುವುದನ್ನು ನೋಡಿದರೆ ಸಿನಿಮಾ ತಾರೆಯರ ಬಗ್ಗೆ ಆ ರೀತಿ ಯಾರು ಥಿಂಕ್ ಮಾಡುವುದೇ ಇಲ್ಲಾ..[ಚಿನ್ನದ ಹುಡುಗ ಗಣೇಶ್ ಅದೃಷ್ಟವಂತ.! ಯಾಕೆ ಗೊತ್ತಾ?]

ಗಣೇಶ್ ರವರು ಹೊಸ ವರ್ಷವನ್ನು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಜನರು ಥಿಂಕ್ ಮಾಡುವುದಕ್ಕಿಂತ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. "ನಾ ಹಾಡಲು ನೀವು ಹಾಡಬೇಕು ಕೂಗಾಡುತ ತಾಳ ಹಾಕಬೇಕು... ಎಲ್ಲರೂ ಒಂದಾಗುತ ನಕ್ಕು ನಲಿಯಬೇಕು..." ಎನ್ನುವ ವಿಷ್ಟು ದಾದಾ ರವರ ಹಾಡಿಗೆ ಹೆಜ್ಜೆ ಹಾಕಿಕೊಂಡು ಸ್ಯಾಂಡಲ್ ವುಡ್ ತಾರೆಯರೆಲ್ಲಾ ಗಣೇಶ್ ಮನೆಯಲ್ಲಿ ಹೊಸ ವರ್ಷ 2017 ಅನ್ನು ಬರಮಾಡಿಕೊಂಡರು. ಗಣೇಶ್ ಮನೆಯಲ್ಲಿ ಹೊಸ ವರ್ಷ ಆಚರಣೆ ಮಾಡಲು ಯಾರೆಲ್ಲಾ ಬಂದಿದ್ದರು ಇಲ್ಲಿ ನೋಡಿ.

ಗೋಲ್ಡನ್ ಸ್ಟಾರ್ ಮನೆಯಲ್ಲಿ ಸ್ಟಾರ್ ನಟರು

2017 ಹೊಸ ವರ್ಷ ಬರಮಾಡಿಕೊಳ್ಳಲು ರಾಜರಾಜೇಶ್ವರಿ ನಗರದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ನಿವಾಸಕ್ಕೆ ಸ್ಟೈಲಿಶ್ ಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್‌ ಭೇಟಿ ಕೊಟ್ಟಿದ್ದರು. ಅವರು ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಫೋಟೋ ಇದು.[ಈ 'ಚಿನ್ನ'ದಂಥ ಬಂಗಲೆ ಯಾರದ್ದು ಅಂತ ಗೊತ್ತಾದ್ರೆ ಸರ್ಪ್ರೈಸ್ ಆಗ್ತೀರಾ.!]

ಸೆಲ್ಫಿಯಲ್ಲಿ ಗಣೇಶ್ ಮತ್ತು ಪ್ರಜ್ವಲ್‌

ನ್ಯೂ ಇಯರ್ ಸೆಲೆಬ್ರೇಷನ್‌ ಗೆ ಬಂದಿದ್ದ ಪ್ರಜ್ವಲ್, ಗಣೇಶ್ ಜೊತೆ ಸೆಲ್ಫಿಗೆ ಪೋಸ್ ಕೊಟ್ಟಿದ್ದು ಹೀಗೆ.

ಸೆಲೆಬ್ರೇಷನ್‌ ಗೆ ಬಂದಿದ್ದ ಸ್ಯಾಂಡಲ್‌ ವುಡ್ ನಟಿ ಮಣಿಯರು

ಹೊಸ ವರ್ಷದ ಸಂಭ್ರಮ ಆಚರಣೆಗೆ ಗೋಲ್ಡೆನ್‌ ಸ್ಟಾರ್ 'ಗಣಪ' ನಿವಾಸಕ್ಕೆ ಸ್ಟಾರ್ ನಟರು ಮಾತ್ರವಲ್ಲದೇ ನಟಿ ಮಣಿಯರು ಬಂದಿದ್ದರು. ಪಾರ್ಟಿ ಮೂಡ್‌ ನಲ್ಲಿ ತೆಗೆದ ಈ ಫೋಟೋದಲ್ಲಿ ಗಣೇಶ್, ಶಿಲ್ಪಾ ಗಣೇಶ್, ನಟಿ ಹರ್ಷಿಕ ಪೂಣಚ್ಚ, ನಟಿ ಸಂಯುಕ್ತ ಹೊರನಾಡು, ಸ್ಟೈಲಿಶ್‌ ಸ್ಟಾರ್ ಪ್ರೇಮ್ ಪತ್ನಿ, ರವಿಶಂಕರ್ ಗೌಡ ಪತ್ನಿ, ಪ್ರಜ್ವಲ್ ದೇವರಾಜ್ ಹೆಂಡತಿ ರಾಗಿಣಿ ಚಂದ್ರನ್ ಇದ್ದಾರೆ.

ನಟಿ ಪ್ರಿಯಾಂಕ ಉಪೇಂದ್ರ ಜೊತೆ ಸೆಲ್ಫಿಯಲ್ಲಿ ನಟಿಯರು

ನ್ಯೂ ಇಯರ್ ಸೆಲೆಬ್ರೇಷನ್‌ ಗೆ ನಟಿ ಪ್ರಿಯಾಂಕ ಉಪೇಂದ್ರ ಸಹ ಗಣೇಶ್ ಮನೆಗೆ ಬಂದಿದ್ದರು. ನ್ಯೂ ಇಯರ್ ಸೆಲೆಬ್ರೇಷನ್‌ ವೇಳೆ ಪ್ರಿಯಾಂಕ ಉಪೇಂದ್ರ, ನಟಿ ಐಂದ್ರಿತಾ ರೈ, ಪ್ರಜ್ವಲ್ ದೇವರಾಜ್, ಶಿಲ್ಪಾ ಗಣೇಶ್, ಸಂಯುಕ್ತ ಹೊರನಾಡು ಮತ್ತು ಇತರರು ಇರುವುದು.

ಅವಿನಾಶ್ ಮತ್ತು ಶೋಭರಾಜ್‌ ಆಚರಣೆಯಲ್ಲಿ ಭಾಗಿ

ಸ್ಟಾರ್ ನಟರು ಮತ್ತು ನಟಿ ಮಣಿಯರ ಜೊತೆಗೆ ಹಿರಿಯ ನಟರಾದ ಅವಿನಾಶ್, ಶೋಭರಾಜ್‌, ರವಿಶಂಕರ್ ಗೌಡ, ರಂಗಾಯಣ ರಘು ರವರು ಗೋಲ್ಡನ್ ಸ್ಟಾರ್ ಗಣೇಶ್ ರವರ 'ಗಣಪ' ನಿವಾಸದಲ್ಲಿ 2017 ಹೊಸ ವರ್ಷ ಬರಮಾಡಿಕೊಳ್ಳಲು ಒಟ್ಟಿಗೆ ಸೇರಿದ್ದರು.[ಗಣೇಶ್ ಮನೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಬರ್ತ್ ಡೇ ಪಾರ್ಟಿ]

ವಿಷ್ಣು ದಾದ ಹಾಡಿಗೆ ಹೆಜ್ಜೆ

ಹೊಸ ವರ್ಷ ಸಂಭ್ರಮಾಚರಣೆಗೆ ಗಣೇಶ್‌ ಮನೆಯಲ್ಲಿ ಸೇರಿದ್ದ ಹಲವು ಸ್ಯಾಂಡಲ್‌ ವುಡ್ ನಟರು ವಿಷ್ಟು ದಾದ ರವರ "ನಾ ಹಾಡಲು ನೀವು ಹಾಡಬೇಕು ಕೂಗಾಡುತ ತಾಳ ಹಾಕಬೇಕು... ಎಲ್ಲರೂ ಒಂದಾಗುತ ನಕ್ಕು ನಲಿಯಬೇಕು..." ಹಾಡಿಗೆ ಹೆಜ್ಜೆ ಹಾಕಿದರು. ವಿಡಿಯೋ ನೋಡಿ.

English summary
Golden Star Ganesh Celebrated New Year With Sandalwood Stars and Actress in his 'Ganapa' House. Prajwal Devraj, Prem, Harshika Poonaccha, Priyanka Upendra, Avinash, Shobharaj and another acters joined to celebrate news year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada