»   » ಸೀಕ್ರೆಟ್ ಆಗಿ ಭಟ್ಟರು ಸಿಎಂ ಭೇಟಿ ಮಾಡಲು ಕಾರಣ ಇದೇ..!

ಸೀಕ್ರೆಟ್ ಆಗಿ ಭಟ್ಟರು ಸಿಎಂ ಭೇಟಿ ಮಾಡಲು ಕಾರಣ ಇದೇ..!

Posted By:
Subscribe to Filmibeat Kannada

ಹೊಸ ಯೋಜನೆಗಳು, ಎಲೆಕ್ಷನ್‌ ಗಳು, ರಾಜಕೀಯದಲ್ಲಾದ ಬದಲಾವಣೆಗಳು, ಮಂತ್ರಿಗಳ ಎಡವಟ್ಟುಗಳು ಹೀಗೆ ಹಲವು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ರಾಜಕಾರಣಿಗಳು ಮತ್ತು ರಾಜಕೀಯ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ಆಗಾಗ ಹಾಡುಗಳ ಮೂಲಕ ಎಲ್ಲರ ಕಾಲೆಳೆಯುವ ಯೋಗರಾಜ್‌ ಭಟ್ ಇತ್ತೀಚೆಗೆ ಕುದ್ದಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಸುದ್ದಿ ಈಗ ಗಾಂಧಿನಗರದ ಜನತೆಗೆ ಎಲ್ಲಿಲ್ಲದ ಪ್ರಶ್ನೆಗಳು ಮತ್ತು ಕುತೂಹಲ ಎರಡನ್ನು ಹುಟ್ಟುಹಾಕಿದೆ.[ಗಣೇಶ್ 'ಮುಗುಳುನಗೆ'ಗೆ ಟಿಕೆಟ್ ಪಡೆದ 4 ನಟಿಯರು ಇವರೆ!]

ಇದೇನಪ್ಪಾ ಸಡೆನ್‌ ಆಗಿ ಏನಾದ್ರು ರಾಜಕೀಯಕ್ಕೆ ಸೇರಲು ತೀರ್ಮಾನಿಸಿ ಬಿಟ್ರಾ.. ಮುಂದಿನ ಚುನಾವಣೆಯಲ್ಲಿ ಸೀಟು ಕೇಳಲು ಏನಾದ್ರು ಹೋಗಿದ್ರಾ.. ಎನ್ನುವ ಪ್ರಶ್ನೆಗಳನ್ನು ಹಲವರು ತಾವೇ ಹಾಕಿಕೊಳ್ಳುತ್ತಿದ್ದಾರೆ. ಆದ್ರೆ ಭಟ್ಟರು ಮಾತ್ರ ಈ ಯಾವುದೇ ವಿಷಯಕ್ಕಾಗಿ ಸಿಎಂ ಭೇಟಿ ಮಾಡಿಲ್ಲಾ. ಅಸಲಿ ಅವರು ಸಿಎಂ ಕಚೇರಿಗೆ ಭೇಟಿ ನೀಡಿದ್ದು ಏಕೆ? ಉತ್ತರ ಇಲ್ಲಿದೆ ಓದಿ...

ಸಿಎಂ ಭೇಟಿ ಮಾಡಿದ್ದು 'ಮುಗುಳುನಗೆ' ಗೆ

ಹೌದು, ಯೋಗರಾಜ್‌ ಭಟ್ ತಾವು ನಿರ್ದೇಶನ ಮಾಡುತ್ತಿರುವ ಗಣೇಶ್ ನಟನೆಯ 'ಮುಗುಳುನಗೆ' ಚಿತ್ರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು. ಚಿತ್ರಕ್ಕೂ, ಸಿಎಂ ಬೇಟಿಗೂ ಕಾರಣವೇನು? ಮುಂದೆ ಓದಿ..[ಮುಗುಳುನಗೆ ಸೆಟ್‌ ನಲ್ಲಿ 'ಮುಂಗಾರು ಮಳೆ' ದಶಕದ ಸೆಲೆಬ್ರೇಷನ್]

'ಮುಗುಳುನಗೆ' ಚಿತ್ರೀಕರಣಕ್ಕೆ ಸಿಎಂ ಪರ್ಮಿಷನ್ ಬೇಕಂತೆ!

ಅಂದಹಾಗೆ ಯೋಗರಾಜ್ ಭಟ್ಟರು 'ಮುಗುಳು ನಗೆ' ಸಿನಿಮಾವನ್ನು ಮೈಸೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಶೂಟಿಂಗ್ ಮಾಡುತ್ತಿದ್ದಾರಂತೆ. ವಿಶೇಷವಾಗಿ ಮೈಸೂರಿನ 'ಗವರ್ನಮೆಂಟ್ ಹೌಸ್' ಬಿಲ್ಡಿಂಗ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಇಲ್ಲಿ ಶೂಟ್ ಮಾಡಲು ಸಿಎಂ ಪರ್ಮಿಷನ್ ಕೇಳಲು ಹೋಗಿದ್ದರು.

'ಗವರ್ನಮೆಂಟ್ ಹೌಸ್' ಬಾಡಿಗೆ ಕೊಡುವ ಅಧಿಕಾರ ಸಿಎಂ ಗೆ ಮಾತ್ರ

ಭಟ್ಟರು ಸಿನಿಮಾ ಶೂಟ್ ಮಾಡಬೇಕು ಎಂದುಕೊಂಡಿರುವ 'ಗವರ್ನಮೆಂಟ್ ಹೌಸ್' ಪಾರಂಪರಿಕ ಕಟ್ಟಡವಾಗಿದ್ದು, ಅಲ್ಲಿನ ಕಲಾಕೃತಿಗಳು ಮತ್ತು ವಸ್ತುಗಳು 200 ವರ್ಷದಷ್ಟು ಹಳೆಯವು. ಶೂಟಿಂಗ್ ಸಮಯದಲ್ಲಿ ಎನಾದರೂ ಎಡವಟ್ಟು ಆಗುತ್ತದೆ ಎಂಬ ಕಾರಣಕ್ಕೆ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ. ಸಿಎಂ ಹೊರತು ಪಡಿಸಿ 'ಗವರ್ನಮೆಂಟ್ ಹೌಸ್' ಅನ್ನು ಬಾಡಿಗೆ ಕೊಡುವ ಅಧಿಕಾರ ಯಾರಿಗೂ ಇಲ್ಲವಾದ್ದರಿಂದ ಯೋಗರಾಜ್‌ ಭಟ್ ಸಿಎಂ ಬಳಿ ಅನುಮಿತಿ ಕೇಳಲು ಹೋಗಿದ್ದರಂತೆ.

'ಗವರ್ನಮೆಂಟ್ ಹೌಸ್' ನಲ್ಲಿ ಶೂಟ್ ಆದ ಚಿತ್ರಗಳು

ಅಂದಹಾಗೆ ಈವರೆಗೂ ಹೆಚ್ಚಾಗಿ ರಜನೀಕಾಂತ್ ಅಭಿನಯದ ಸಿನಿಮಾಗಳನ್ನು ಶೂಟ್ ಮಾಡಲಾಗಿದೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರನ 'ಜಾಗ್ವಾರ್' ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು.

ಪರ್ಮಿಷನ್‌ ಸಿಕ್ಕಿದೆ!

ಯೋಗರಾಜ್‌ ಭಟ್‌ ರಿಗೆ 'ಗವರ್ನಮೆಂಟ್ ಹೌಸ್' ನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕದ್ದು, ಗಣೇಶ್ ನಟನೆಯ 'ಮುಗುಳುನಗೆ' ಚಿತ್ರೀಕರಣ ಮಾಡಲಿದ್ದಾರೆ.

English summary
Last weekend, chief minister Siddaramaiah had a surprise visitor. Those present at the CM’s office were also surprised to see director Yograj Bhat walking in to meet the CM. It turns out that Bhat was there to seek permission to shoot at the ‘Government House’ building in Mysuru for his film Mugulnage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada