Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಕ್ಷಿತ್, ಧ್ರುವ, ರಿಷಬ್, ಧನಂಜಯ್‌ರಿಂದ ಹಾಸ್ಟಲ್ ಹುಡುಗರ ಮೊದಲ ಹಾಡು ರಿಲೀಸ್!
ಮೊನ್ನೆ ಮೊನ್ನೆಯಷ್ಟೇ 'ಹಾಸ್ಟೆಲ್ ಹುಡುಗರು' ಗ್ಯಾಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ರನ್ನು ಅಪಹರಣ ಮಾಡಿದ್ದು ಗೊತ್ತೇ ಇದೆ. ಸಿನಿಮಾ ಹಾಡು ಬಿಡುಗಡೆ ಮಾಡುವಂತೆ ಕಾಟ ಕೊಟ್ಟಿದ್ದನ್ನೂ ನೋಡಿದ್ದೀರಿ. ಆ ಕಾಟ ತಾಳಲಾರದೆ ಕೊನೆಗೂ ಮೊದಲ ಹಾಡು ಕೊಟ್ಟಿದ್ದಾರೆ.
ಇದೀಗ ಇಂದು (ಜನವರಿ 5) 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗುತ್ತಿದೆ. ಬಿಸಿ ಬಿಸಿ ಬಿಸಿಲಿನಲ್ಲಿ ಮಧ್ಯಾಹ್ನ 12.05ಕ್ಕೆ ಈ ಸಿನಿಮಾದ ಮೊದಲು ರಿಲೀಸ್ ಮಾಡಲು ಹುಡುಗರು ರೆಡಿಯಾಗಿ ನಿಂತಿದ್ದಾರೆ.
ಗೆಳೆಯ
ರಕ್ಷಿತ್
ಶೆಟ್ಟಿ
ಪಾರ್ಟಿಗೆ
ಹೋಗಲ್ವಾ
ರಿಷಬ್
ಶೆಟ್ಟಿ?
ಕಿರಿಕ್
ಪಾರ್ಟಿಗೆ
ಶಾಕ್!
ವಿಶೇಷ ಅಂದ್ರೆ, 'ಹಾಸ್ಟೆಲ್ ಹುಡುಗರ' ಈ ಪ್ರೊಟೆಸ್ಟ್ ಸಾಂಗ್ ಅನ್ನು ಸ್ಯಾಂಡಲ್‌ವುಡ್ ತಾರೆಯರು ಏಕಕಾಲಕ್ಕೆ ರಿಲೀಸ್ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಪ್ರೊಟೆಸ್ಟ್ ಸಾಂಗ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಡಾಲಿ ಧನಂಜಯ್ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಮೊದಲ ಹಾಡೇ ಧೂಳೆಬ್ಬಿಸುವ ಸಾಧ್ಯತೆಯಿದೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡ ಈಗಾಗಲೇ ವಿಭಿನ್ನ ರೀತಿಯಲ್ಲಿ ಸಿನಿಮಾದ ಪ್ರಚಾರ ಮಾಡುತ್ತಿದೆ. ಅದು ಪ್ರೇಕ್ಷಕರಿಗೂ ಇಷ್ಟ ಆಗುತ್ತಿದೆ. ಮೊದಲಿನಿಂದಲೂ ಈ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಸೆಲೆಬ್ರೆಟಿಗಳು ಬೆಂಬಲ ನೀಡುತ್ತಲೇ ಇದ್ದಾರೆ. ಈಗ ಮೊದಲ ಹಾಡು ಬಿಡುಗಡೆಗೂ ನಾಲ್ಕು ಮಂದಿ ಸ್ಟಾರ್‌ಗಳು ಸಾಥ್ ಕೊಟ್ಟಿದ್ದಾರೆ.
'ರಿಷಬ್
ಶೆಟ್ಟಿ
ಕಂಡ್ರೆ
ನನಗೆ
ಅಸೂಯೆ':
ಬಾಲಿವುಡ್
ನಟ
ನವಾಜುದ್ದೀನ್
ಸಿದ್ದಿಕಿ
ಹೀಗಂದಿದ್ಯಾಕೆ?
ಎಲ್ಲಕ್ಕಿಂತ ಹೆಚ್ಚಾಗಿ ಮುಂದಿನ ತಿಂಗಳು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. 'ಕಿರಿಕ್ ಪಾರ್ಟಿ' ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈ ಕಾರಣಕ್ಕೆ ಹೊಸಬರ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಈ ಸಿನಿಮಾದಲ್ಲಿ ಮೋಹಕತಾರೆ ರಮ್ಯಾ ನಟಿಸಿದ್ದಾರೆ. ಹಾಗೆಯೇ 'ಕಾಂತಾರ' ಸಿನಿಮಾ ಮೂಲಕ ಸದ್ದು ಮಾಡುತ್ತಿರೋ ರಿಷಬ್ ಶೆಟ್ಟಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಥಿಯೇಟರ್‌ನಲ್ಲೂ ಮೋಡಿ ಮಾಡುತ್ತೆ ಅನ್ನೋ ನಿರೀಕ್ಷೆಯಲ್ಲಿದೆ ಚಿತ್ರತಂಡ.