»   » ಮಾಜಿ ಸಂಸದೆ ರಮ್ಯಾ ಎಲ್ಲಿದ್ದರೂ ನೀವೇ ಹುಡುಕಿ ಕೊಡಿ

ಮಾಜಿ ಸಂಸದೆ ರಮ್ಯಾ ಎಲ್ಲಿದ್ದರೂ ನೀವೇ ಹುಡುಕಿ ಕೊಡಿ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದ ಲಕ್ಕಿಸ್ಟಾರ್ ಮತ್ತು ಮಂಡ್ಯದ ಮಾಜಿ ಸಂಸದೆ ರಮ್ಯಾ ಎಲ್ಲಿ? ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ರಮ್ಯಾ ಇಳಿದೇ ಬಿಟ್ಟರು ಎಂದು ಏಪ್ರಿಲ್ 17ರಂದು ಸುದ್ದಿಯಾಗಿತ್ತು.

ಆದರೆ, ದಿನ ಇಪ್ಪತ್ತಾದರೂ ರಮ್ಯಾ ಎಲ್ಲಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಮುಖಂಡರಿಗಾಗಲಿ, ಮಂಡ್ಯದ ಧುರೀಣರಿಗಾಗಲಿ, ವಸತಿ ಸಚಿವರಿಗಾಗಲಿ ಗೊತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿರುವ ಸತ್ಯ. (ಬ್ರೇಕಿಂಗ್ : ತಾಯ್ನಾಡಿಗೆ ಮರಳಿದ ರಮ್ಯಾ)

ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಮರಳಿದ ಬೆನ್ನಲ್ಲೇ, ರಮ್ಯಾ ಕೂಡಾ ಕಾಕತಾಳೀಯವಾಗಿ ವಾಪಸ್ಸಾಗಿರುವ ಸುದ್ದಿ ಸ್ಫೋಟಗೊಂಡು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ರಮ್ಯಾ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾಗ ಆಕೆಯ ಕಷ್ಟಸುಖದಲ್ಲಿ ಜೊತೆಯಾಗಿ ನಿಂತದ್ದು ರೆಬೆಲ್ ಸ್ಟಾರ್ ಅಂಬರೀಶ್. ಆದರೆ ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಅದೇನಾಯಿತೋ, ಅಂಬಿ ಮತ್ತು ರಮ್ಯಾ ನಡುವೆ ಅಷ್ಟಕಷ್ಟೇ ಎನ್ನುವ ಸುದ್ದಿ ಹರಿದಾಡಲಾರಂಭಿಸಿತು. ಅಂಬರೀಶ್ ಚುನಾವಣೆಯ ವೇಳೆ ರಮ್ಯಾ ಪರ ಸರಿಯಾದ ಪ್ರಚಾರ ನಡೆಸಲಿಲ್ಲ ಎನ್ನಲಾಗುತ್ತಿತ್ತು.

ರಮ್ಯಾ ಎಲ್ಲಿ ಎನ್ನುವ ಮಾಧ್ಯಮವರ ಪ್ರಶ್ನೆಗೆ ರೆಬೆಲ್ ಸ್ಟಾರ್ ಕಮ್ ವಸತಿ ಸಚಿವ ಅಂಬರೀಶ್ ವ್ಯಂಗ್ಯ ಮಿಶ್ರಿತವಾಗಿ ಉತ್ತರ ನೀಡಿದ್ದಾರೆ. ಮುಂದೆ ಓದಿ..

ನಿಮ್ಮ ಪಕ್ಷದ ಮಾಜಿ ಸಂಸದೆ ಎಲ್ಲಿ?

ಮಂಡ್ಯದ ಮಾಜಿ ಸಂಸದೆ ರಮ್ಯಾ ಎಲ್ಲಿ? ಭಾರತಕ್ಕೆ ವಾಪಸಾಗಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ ಇಷ್ಟು ದಿನವಾದರೂ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಮಾಧ್ಯಮವವರು ವಸತಿ ಸಚಿವ ಅಂಬರೀಶ್ ಅವರನ್ನು ಪ್ರಶ್ನಿಸಿದ್ದಾರೆ.

ಅಂಬರೀಶ್ ಕೊಟ್ಟ ಉತ್ತರ

ಮಾಜಿ ಸಂಸದೆ ರಮ್ಯಾ ಎಲ್ಲಿದ್ದಾರೆ ಎನ್ನುವ ಬಗ್ಗೆ ನಮಗೆ ಮಾಹಿತಿಯಿಲ್ಲ. ಅವರು ನಮ್ಮ ಜೊತೆ ಸಂಪರ್ಕದಲ್ಲೂ ಇಲ್ಲ, ಹಾಗಾಗಿ ಆಕೆ ಎಲ್ಲಿ ಇದ್ದಾರೆಂದು ನೀವೇ ಪತ್ತೆ ಮಾಡಬೇಕೆಂದು ಅಂಬರೀಶ್ ವ್ಯಂಗ್ಯವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಚುನಾವಣೆ ಸೋತಿದ್ದಕ್ಕೆ ಬೇಸರವಿರಬಹುದು

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಿದ್ದ ಅಂಬರೀಶ್, ರಮ್ಯಾ ಚುನಾವಣೆ ಗೆದ್ದು ಆರು ತಿಂಗಳು ಸಂಸದೆಯಾಗಿದ್ದರು. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಣ್ಣ ಅಂತರದಿಂದ ಸೋತಿದ್ದಾರೆ. ಹಾಗಾಗಿ ಅವರಿಗೆ ಬೇಸರವಿರಬಹುದು. ಈಗ ಎಲ್ಲಿದ್ದಾರೆ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ಲಂಡನ್ ನಲ್ಲಿದ್ದ ರಮ್ಯಾ

ಚುನಾವಣೆ ಸೋಲಿನ ನಂತರ ರಮ್ಯಾ ವಿದೇಶಕ್ಕೆ ತೆರಳಿದ್ದರು. ಅವರು ಎಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ಯಾರಿಗೂ ಇಲ್ಲ. ಹಾಗಾಗಿ, ಮಾಧ್ಯಮದವರು ಅಂಬರೀಶ್ ಅವರನ್ನು ರಮ್ಯಾ ಎಲ್ಲಿ ಎನ್ನುವ ಪ್ರಶ್ನೆಯನ್ನು ಕೇಳಿದ್ದರು.

ಭಾರತಕ್ಕೆ ವಾಪಸ್ ಆಗುತ್ತೇನೆ

ಕಳೆದ ಒಂದು ವರ್ಷದಿಂದ ವಿದೇಶದಲ್ಲಿ ನೆಲೆಸಿದ್ದ ನಟಿ ರಮ್ಯಾ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಏರ್ ಪೋರ್ಟ್ ನಿಂದ ಲ್ಯಾಂಡ್ ಆದ ತಕ್ಷಣ ತಮ್ಮ ನೆಚ್ಚಿನ ತಾಜ್ ವೆಸ್ಟ್ ಎಂಡ್ ಗೆ ರಮ್ಯಾ ತೆರಳಿದ್ದಾರೆ. ಮಿಡಿಯಾದಿಂದ ಕೊಂಚ ದೂರ ಇರಲು ಬಯಸಿರುವ ರಮ್ಯಾ ಹೊರಗೆಲ್ಲೂ ಕಾಣಿಸಿಕೊಳ್ಳುವುದಕ್ಕೆ ಇಚ್ಛಿಸುತ್ತಿಲ್ಲ ಎಂದು ಏಪ್ರಿಲ್ 17ರಂದು ವರದಿಯಾಗಿತ್ತು.

English summary
Housing minister cum Sandalwood Rebel Star Ambarish not aware where is former MP from Mandya cum actress Ramya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada