»   » 'ಪೊರ್ಕಿ ಹುಚ್ಚ ವೆಂಕಟ್' ತೆರೆಮೇಲೆ ಬರಲು ರೆಡಿ: ರಿಲೀಸ್ ಯಾವಾಗ?

'ಪೊರ್ಕಿ ಹುಚ್ಚ ವೆಂಕಟ್' ತೆರೆಮೇಲೆ ಬರಲು ರೆಡಿ: ರಿಲೀಸ್ ಯಾವಾಗ?

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯ 'ಸೂಪರ್ ಜೋಡಿ' ಸೀಸನ್ 2 ರಿಯಾಲಿಟಿ ಶೋನಲ್ಲಿ ಬಿಜಿಯಾಗಿದ್ದ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಸಡೆನ್ ಆಗಿ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.[ಹುಚ್ಚ ವೆಂಕಟ್ ಚಿತ್ರಕ್ಕೆ 'ಬಿಗ್ ಬಾಸ್' ಗೌತಮಿ ಹೀರೋಯಿನ್!]

ಹುಚ್ಚ ವೆಂಕಟ್ ತಮ್ಮದೇ ಅಭಿನಯದಲ್ಲಿ, ನಿರ್ಮಾಣ ಮಾಡಿರುವ 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಿದ್ದಾರೆ. ಮುಂದೆ ಓದಿ...

'ಪೊರ್ಕಿ ಹುಚ್ಚ ವೆಂಕಟ್' ಬಿಡುಗಡೆ ಯಾವಾಗ?

ಹುಚ್ಚ ವೆಂಕಟ್ ಅಭಿನಯದ ಜೊತೆಗೆ ನಿರ್ದೇಶನ ಮಾಡಿರುವ 'ಪೊರ್ಕಿ ಹುಚ್ಚ ವೆಂಕಟ್' ಇದೇ ತಿಂಗಳ 28 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.[ಹುಡುಗಿ ಹುಡುಕಿಕೊಂಡು ಮಡಿಕೇರಿಗೆ ಹೋಗಿದ್ದ ಹುಚ್ಚ ವೆಂಕಟ್]

ಹುಚ್ಚಾ ವೆಂಕಟ್ ನಿರ್ಮಾಣದಲ್ಲಿ 'ಪೊರ್ಕಿ ಹುಚ್ಚ ವೆಂಕಟ್'

ಅಂದಹಾಗೆ ಹುಚ್ಚ ವೆಂಕಟ್ ರವರು ಈ ಹಿಂದೆ 'ಹುಚ್ಚ ವೆಂಕಟ್' ಸಿನಿಮಾ ಮಾಡಿದ್ದ ರೀತಿಯಲ್ಲಿಯೇ, 'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾಗೆ ಅಭಿನಯ ಮತ್ತು ನಿರ್ದೇಶನದ ಜೊತೆಗೆ ಅವರೇ ನಿರ್ಮಾಣ ಮಾಡಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ಸಿನಿಮಾ ಹಾಡುಗಳಿಗೆ ಸಾಹಿತ್ಯವನ್ನು ಸಹ ಅವರೇ ಬರೆದಿದ್ದಾರೆ.

ಸಂಗೀತ

ಈ ಹಿಂದೆ 'ಮಾತುಕತೆ', 'ಜಸ್ಟ್ ಲವ್', 'ಸ್ಟೋರಿ ಕಥೆ' ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಸತೀಶ್ ಬಾಬು ರವರು ಪೊರ್ಕಿ ಹುಚ್ಚ ವೆಂಕಟ್' ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

'ಪೊರ್ಕಿ ಹುಚ್ಚ ವೆಂಕಟ್'ಗೆ ಖ್ಯಾತ ಗಾಯಕರಿಂದ ಹಾಡು

ಚಿತ್ರದ ಹಾಡುಗಳಿಗೆ ಸ್ವತಃ ಹುಚ್ಚ ವೆಂಕಟ್ ಸಾಹಿತ್ಯ ಬರೆದಿದ್ದು, ರಾಜೇಶ್ ರಾಮನಾಥ್, ರಾಜೇಶ್ ಕೃಷ್ಣನ್, ಅನುರಾಧಾ ಭಟ್ ಹಾಡಿದ್ದಾರೆ. ಜೊತೆಗೆ ಹುಚ್ಚ ವೆಂಕಟ್ ಸಹ ಹಾಡಿದ್ದಾರೆ.

English summary
Huchcha Venkat Starrer new film 'Porki Huchcha Venkat' is releasing on april 28th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada