»   » 'ಜಂಬೋ' ಅನಿಲ್ ಕುಂಬ್ಳೆಗೂ 'ಹೆಬ್ಬುಲಿ' ಸುದೀಪ್ ಅಂದ್ರೆ ಇಷ್ಟ ಕಣ್ರೀ.!

'ಜಂಬೋ' ಅನಿಲ್ ಕುಂಬ್ಳೆಗೂ 'ಹೆಬ್ಬುಲಿ' ಸುದೀಪ್ ಅಂದ್ರೆ ಇಷ್ಟ ಕಣ್ರೀ.!

Posted By:
Subscribe to Filmibeat Kannada

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು, ಭಾರತದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು, ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಕನ್ನಡಿಗ ಅನಿಲ್ ಕುಂಬ್ಳೆ ಕನ್ನಡ ಸಿನಿಮಾಗಳನ್ನ ವೀಕ್ಷಿಸುತ್ತಾರಾ.? ಕ್ರಿಕೆಟರ್ ಅನಿಲ್ ಕುಂಬ್ಳೆ ವೀಕ್ಷಿಸಿರುವ ಕೊನೆಯ ಕನ್ನಡ ಚಿತ್ರ ಯಾವುದಾಗಿರಬಹುದು.?

- ಈ ಪ್ರಶ್ನೆಗಳು ಅನೇಕರಿಗೆ ಕಾಡಿರಬಹುದು. ಸುಮ್ನೆ ಡೌಟ್ ಯಾಕಪ್ಪ ಕ್ಲಿಯರ್ ಮಾಡಿಕೊಳ್ಳೋಣ ಅಂತ ನಿರ್ಧಾರ ಮಾಡಿದ ಆನಂದ್ ಎಂಬ ಸಿನಿಮಾ ಪ್ರೇಮಿ ಅನಿಲ್ ಕುಂಬ್ಳೆ ಬಳಿ ಟ್ವಿಟ್ಟರ್ ನಲ್ಲಿ ಪ್ರಶ್ನೆಯೊಂದನ್ನ ಮುಂದಿಟ್ಟರು. ಮುಂದೆ ಓದಿರಿ...

ಸಿನಿ ಪ್ರೇಮಿ ಕೇಳಿದ ಪ್ರಶ್ನೆ ಏನು.?

''ಅನಿಲ್, ಕುತೂಹಲದಿಂದ ಈ ಪ್ರಶ್ನೆ ಕೇಳುತ್ತಿದ್ದೇನೆ. ನೀವು ನೋಡಿದ ಕಡೆಯ ಕನ್ನಡ ಚಿತ್ರ ಯಾವುದು.?'' ಎಂದು ಆನಂದ್ ಎಂಬುವರು ಅನಿಲ್ ಕುಂಬ್ಳೆಗೆ ಟ್ವೀಟ್ ಮಾಡಿದರು.

ಅನಿಲ್ ಕುಂಬ್ಳೆ ಕೊಟ್ಟ ಪ್ರತಿಕ್ರಿಯೆ ಏನು.?

ಆನಂದ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಅನಿಲ್ ಕುಂಬ್ಳೆ, ''ಹೆಬ್ಬುಲಿ. ಆ ಸಿನಿಮಾ ಚೆನ್ನಾಗಿದೆ. ಸುದೀಪ್ ನಟನೆ ಖುಷಿ ಕೊಡ್ತು'' ಎಂದಿದ್ದಾರೆ.

ಸುದೀಪ್ ಅಭಿಮಾನಿಗಳಲ್ಲಿ ಸಂತಸ

ಅನಿಲ್ ಕುಂಬ್ಳೆ ರವರ ಈ ಟ್ವೀಟ್ ಟ್ವಿಟ್ಟರ್ ಲೋಕದಲ್ಲಿ ಹೊಸ ಸಂಚಲನ ಹುಟ್ಟುಹಾಕಿದೆ. ಕನ್ನಡ ಸಿನಿಮಾ ಪ್ರೇಮಿ ಆಗಿರುವ ಅನಿಲ್ ಕುಂಬ್ಳೆ, 'ಹೆಬ್ಬುಲಿ' ಬಗ್ಗೆ ಹಾಡಿ ಹೊಗಳಿರುವುದು ಸುದೀಪ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಟಿವಿಯಲ್ಲಿ 'ಹೆಬ್ಬುಲಿ'

ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆ ಆಗಿದ್ದ 'ಹೆಬ್ಬುಲಿ' ಸಿನಿಮಾ ಇತ್ತೀಚೆಗಷ್ಟೇ ಕಿರುತೆರೆಯಲ್ಲಿ ಪ್ರಸಾರ ಆಗಿತ್ತು. 'ಹೆಬ್ಬುಲಿ' ವಿಮರ್ಶೆ ನೋಡ್ಬೇಕು ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ಓದಿರಿ....

English summary
''I Enjoyed Sudeep's Acting in Hebbuli'' says Anil Kumble.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada