»   » ಕನ್ನಡ ಚಿತ್ರೋದ್ಯಮದವರ 3 ಕಚೇರಿಯ ಮೇಲೆ ಐಟಿ ದಾಳಿ

ಕನ್ನಡ ಚಿತ್ರೋದ್ಯಮದವರ 3 ಕಚೇರಿಯ ಮೇಲೆ ಐಟಿ ದಾಳಿ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದ ಮೂವರು ಪ್ರಮುಖ ನಿರ್ಮಾಪಕ ಕಮ್ ಹಂಚಿಕೆದಾರರ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ (ಜೂ 11) ದಾಳಿ ನಡೆಸಿದ್ದಾರೆಂದು ಟಿವಿ9 ವರದಿ ಮಾಡಿದೆ.

ರಾಮು ಒಡೆತನದ ರಾಮು ಎಂಟರ್ಪ್ರೈಸಸ್, ಜಯಣ್ಣ ಭೋಗೇಂದ್ರ ಒಡೆತನದ ಜಯಣ್ಣ ಫಿಲಂಸ್ (ಕಂಬೈನ್ಸ್) ಮತ್ತು ಬಾಷಾ ಮಾಲೀಕತ್ವದ ಬಹಾರ್ ಫಿಲಂಸ್ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಮೂವರ ಕಚೇರಿಯ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆಂದು ಟಿವಿ9 ವಾಹಿನಿ ಪ್ರಸಾರ ಮಾಡಿದೆ.

Income Tax raid on three Kannada Film distributor Office

ಪತ್ನಿ ಮಾಲಾಶ್ರೀ ಪ್ರಮುಖ ತಾರಾಗಣದಲ್ಲಿದ್ದ ವೀರ, ಶಕ್ತಿ, ಇಲೆಕ್ಷನ್ ಮತ್ತು ದುನಿಯಾ ವಿಜಯ್ ನಾಯಕ ನಟನಾಗಿದ್ದ ಶಿವಾಜಿನಗರ ಈ ನಾಲ್ಕು ಚಿತ್ರಗಳು ರಾಮು ನಿರ್ಮಿಸಿದ ಇತ್ತೀಚಿನ ಚಿತ್ರಗಳು. ಇದಲ್ಲದೇ ರಾಮು, ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳ ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ವಲಯದ ಹಂಚಿಕೆದಾರರೂ ಕೂಡಾ.

ಜಯಣ್ಣ ಮತ್ತು ಭೋಗೇಂದ್ರ ಮಾಲೀಕತ್ವದ ಜಯಣ್ಣ ಕಂಬೈನ್ಸ್ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ಕಂಡ ಅತ್ಯಂತ ಯಶಸ್ವೀ ಹಂಚಿಕೆದಾರರು. ಗೂಗ್ಲಿ, ಜಾನು, ಡ್ರಾಮಾ, ಪರಮಾತ್ಮ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರಗಳಿಗೆ ಜಯಣ್ಣ ಕಂಬೈನ್ಸ್ ಹಂಚಿಕೆದಾರರು. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಯಶ್ ಅಭಿನಯದ ಗಜಕೇಸರಿ ಚಿತ್ರಕ್ಕೂ ಇವರೇ ಹಂಚಿಕೆದಾರರು.

ಬಾಷಾ ಒಡೆತನದ ಬಹಾರ್ ಫಿಲಂಸ್ ಕೂಡಾ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಹಂಚಿಕೆದಾರರಾಗಿದ್ದರು. ಅಂದರ್ ಬಾಹರ್, ಗೌರಮ್ಮ, ಯಜಮಾನ ಮುಂತಾದ ಚಿತ್ರಗಳಿಗೆ ಬಹಾರ್ ಫಿಲಂಸ್ ಹಂಚಿಕೆದಾರರಾಗಿದ್ದರು. 

English summary
Income Tax raid on three prominent Kannada Film distributor cum Producer Offices on Wednesday (June 11) as per TV9 report.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada