For Quick Alerts
  ALLOW NOTIFICATIONS  
  For Daily Alerts

  'ಇಂಡಿಯನ್-2' ಚಿತ್ರದ ಫಸ್ಟ್ ಲುಕ್ ಬಿಡುಗಡೆ

  |

  ಕಮಲ್ ಹಾಸನ್ ಅಭಿನಯದಲ್ಲಿ ಮೂಡಿ ಬರಲಿರುವ 'ಇಂಡಿಯನ್-2' ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದು, ಜನವರಿ 18 ರಂದು ಚಿತ್ರೀಕರಣ ಆರಂಭವಾಗಲಿದೆ.

  ರಜನಿಕಾಂತ್ ಅವರ '2.0' ಚಿತ್ರವನ್ನ ಮುಗಿಸಿದ ಶಂಕರ್, ಈ ಕಡೆ 'ವಿಶ್ವರೂಪಂ-2' ಚಿತ್ರವನ್ನ ಮುಗಿಸಿದ ಕಮಲ್ ಹಾಸನ್ ಸೇರಿ ಈಗ 'ಇಂಡಿಯನ್-2' ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

  ಸಲ್ಮಾನ್, ಕಮಲ್ ಗಿಂತ ಸುದೀಪ್ 'ಬಿಗ್ ಬಾಸ್' ನಿರೂಪಣೆ ಚೆನ್ನಾಗಿದೆ ಎಂದಿದ್ದು ಯಾರು?

  ಅನಿರುದ್ಧ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ನಟಿ ಕಾಜಲ್ ಅಗರ್ ವಾಲ್ ನಾಯಕಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಜಲ್ ''ಹೊಸ ಜರ್ನಿ, ಹೊಸ ಅನುಭವ, ಇಂಡಿಯನ್ 2 ಚಿತ್ರದ ಸೆಟ್ ಗೆ ಹೋಗಲು ತುಂಬಾ ಕಾತುರದಿಂದ ಕಾಯ್ತಿದ್ದೀನಿ'' ಎಂದು ಸಂತಸ ಹಂಚಿಕೊಂಡಿದ್ದಾರೆ.

  ಅಂದ್ಹಾಗೆ, 'ಇಂಡಿಯನ್-2' ಸಿನಿಮಾ 1996ರಲ್ಲಿ ಬಿಡುಗಡೆಯಾಗಿದ್ದ 'ಇಂಡಿಯನ್' ಚಿತ್ರದ ಸೀಕ್ವೆಲ್. ಸದ್ಯಕ್ಕೆ ಕಮಲ್ ಹಾಸನ್ ರಾಜಕೀಯದಲ್ಲಿ ತೊಡಗಿಕೊಂಡಿದ್ದು, ಇದು ಇವರ ಕೊನೆಯ ಸಿನಿಮಾ ಆಗಲಿದೆಯಂತೆ. ಹೀಗಾಗಿ, ಈ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟಿಕೊಂಡಿದೆ.

  English summary
  Director Shankar on Tuesday unveiled the first look of upcoming Kamal Haasan starrer Indian 2. The film will go on floors from January 18.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X