For Quick Alerts
  ALLOW NOTIFICATIONS  
  For Daily Alerts

  Breaking: ತಮಿಳು ನಟ ವಿಜಯ್ ದಳಪತಿ ನಿವಾಸದ ಮೇಲೆ ಮತ್ತೆ ಐಟಿ ದಾಳಿ

  |

  ತಮಿಳಿನ ಖ್ಯಾತ ನಟ ವಿಜಯ್ ದಳಪತಿ ನಿವಾಸದ ಮೇಲೆ ಮತ್ತೆ ಐಟಿ ದಾಳಿ ನಡೆದಿದೆ. ಚೆನ್ನೈನ ಪನೈನೂರ್‌ನಲ್ಲಿರುವ ವಿಜಯ್ ನಿವಾಸದಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಫೆಬ್ರವರಿಯಲ್ಲಿ ವಿಜಯ್ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

  ಎರಡು ದಿನಗಳ ಹಿಂದಷ್ಟೇ 'ಮಾಸ್ಟರ್' ಚಿತ್ರದ ಸಹ ನಿರ್ಮಾಪಕರಲ್ಲಿ ಒಬ್ಬರಾದ ಲಲಿತ್ ಕುಮಾರ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿತ್ತು. ಲೋಕೇಶ್ ಕನಗರಾಜ್ ನಿರ್ದೇಶನದ 'ಮಾಸ್ಟರ್' ಚಿತ್ರದಲ್ಲಿ ವಿಜಯ್ ದಳಪತಿ ಹಾಗೂ ವಿಜಯ್ ಸೇತುಪತಿ ನಟಿಸಿದ್ದು, ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮಾರ್ಚ್ 15ಕ್ಕೆ ನಿಗದಿಯಾಗಿದೆ.

  ವಿಜಯ್ ನಿವಾಸದ ಮೇಲೆ ಬುಧವಾರ ಸಂಜೆಯೇ ದಾಳಿ ನಡೆದಿದ್ದು, ಗುರುವಾರವೂ ಪರಿಶೀಲನೆ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ. ಸಿನಿಮಾದ ಬಿಡುಗಡೆಗೂ ಮುನ್ನ ಪದೇ ಪದೇ ಐಟಿ ದಾಳಿ ನಡೆಯುತ್ತಿರುವುದು ವಿಜಯ್ ಅಭಿಮಾನಿಗಳನ್ನು ಕೆರಳಿಸಿದೆ.

  ವಿಜಯ್ ಅಭಿಮಾನಿಗಳ ಆಕ್ರೋಶ

  ವಿಜಯ್ ಅಭಿಮಾನಿಗಳ ಆಕ್ರೋಶ

  ವಿಜಯ್ ನಿವಾಸದ ಮೇಲೆ ಬುಧವಾರ ಸಂಜೆಯೇ ದಾಳಿ ನಡೆದಿದ್ದು, ಗುರುವಾರವೂ ಪರಿಶೀಲನೆ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ. ಸಿನಿಮಾದ ಬಿಡುಗಡೆಗೂ ಮುನ್ನ ಪದೇ ಪದೇ ಐಟಿ ದಾಳಿ ನಡೆಯುತ್ತಿರುವುದು ವಿಜಯ್ ಅಭಿಮಾನಿಗಳನ್ನು ಕೆರಳಿಸಿದೆ. ಇದು ಉದ್ದೇಶಪೂರ್ವಕವಾಗಿಯೇ ಮಾಡಿಸಿರುವ ದಾಳಿ ಎಂದು ಅನೇಕರು ಆರೋಪಿಸಿದ್ದಾರೆ. ರಜನಿಕಾಂತ್ ಅವರು ತಮ್ಮ ರಾಜಕೀಯ ಪಕ್ಷದ ಕುರಿತು ಮಾತನಾಡುವ ವೇಳೆಯೇ ದಾಳಿ ನಡೆದಿದೆ. ಇವೆರಡರ ನಡುವೆ ಸಂಬಂಧವಿದೆ ಎಂದು ಹೇಳಲಾಗಿದೆ.

  ಈಗಲೇ 220 ಕೋಟಿ ರೂ. ಗಳಿಕೆ

  ಈಗಲೇ 220 ಕೋಟಿ ರೂ. ಗಳಿಕೆ

  'ಮಾಸ್ಟರ್' ಚಿತ್ರದ ಹಾಡುಗಳ ಬಿಡುಗಡೆಯ ಅದ್ಧೂರಿ ಸಮಾರಂಭವನ್ನು ಚೆನ್ನೈನಲ್ಲಿ ಮಾರ್ಚ್ 15ಕ್ಕೆ ಆಯೋಜಿಸಲಾಗಿದೆ. ಈ ಚಿತ್ರ ಈಗಾಗಲೇ ವಿಜಯ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟುಹಾಕಿದ್ದು, ಬಿಡುಗಡೆಗೆ ಮುನ್ನವೇ ಸುಮಾರು 220 ಕೋಟಿ ರೂ. ಗಳಿಕೆ ಮಾಡಿದೆ. ಇದರಲ್ಲಿ ನಿರ್ಮಾಪಕ ಲಲಿತ್ ಅವರು ಶೇ 50ರಷ್ಟು ಪಾಲು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

  ಫೆ. 5ರಂದು ಐಟಿ ದಾಳಿ

  ಫೆ. 5ರಂದು ಐಟಿ ದಾಳಿ

  ಫೆಬ್ರವರಿ 5ರಂದು ವಿಜಯ್ ಮತ್ತು ಅವರ ಆಪ್ತ, ಸಿನಿಮಾ ಫೈನಾನ್ಷಿಯರ್ ಅನ್ಬು ಚೆಳಿಯನ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ 65 ಕೋಟಿ ರೂ ಪತ್ತೆಯಾಗಿತ್ತು. ತೆರಿಗೆ ವಂಚನೆ ಆರೋಪದಲ್ಲಿ ವಿಜಯ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

  ಮೂರು ದಿನ ವಿಚಾರಣೆ ಮಾಡಿದ್ದರು

  ಮೂರು ದಿನ ವಿಚಾರಣೆ ಮಾಡಿದ್ದರು

  'ಮಾಸ್ಟರ್' ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಐಟಿ ಅಧಿಕಾರಿಗಳು, ವಿಜಯ್ ಅವರನ್ನು ಅಲ್ಲಿಂದ ಕರೆದುಕೊಂಡು ಅವರ ನಿವಾಸಕ್ಕೆ ತೆರಳಿದ್ದರು. ಅವರ ಆದಾಯ ತೆರಿಗೆ ದಾಖಲೆಗಳ ಕುರಿತು ಮೂರು ದಿನ ವಿಚಾರಣೆ ನಡೆಸಿದ್ದರು. ಮೂರು ದಿನಗಳ ನಂತರ ವಿಜಯ್ ಚಿತ್ರೀಕರಣಕ್ಕೆ ಮರಳಿದ್ದರು. ಇದೇ ವೇಳೆ ಐಟಿ ಅಧಿಕಾರಿಗಳು ಎಜಿಎಸ್ ಸಮೂಹ, ಎಜಿಎಸ್ ಸಿನಿಮಾಸ್ ಮತ್ತು ಅನ್ಬು ಚೆಳಿಯನ್ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು.

  ಬಿಗಿಲ್ ಸಂಭಾವನೆ ವಿಚಾರ

  ಬಿಗಿಲ್ ಸಂಭಾವನೆ ವಿಚಾರ

  ವಿಜಯ್ ಅವರಿಗೆ ಐಟಿಯಿಂದ ನೋಟಿಸ್ ಹೊರಡಿಸಲಾಗಿತ್ತು ಎನ್ನಲಾಗಿದೆ. ವಿಜಯ್ ವಿಚಾರಣೆಯಿಂದಾಗಿ ಕಳೆದ ತಿಂಗಳು 'ಮಾಸ್ಟರ್' ಚಿತ್ರೀಕರಣ ಸ್ಥಗಿತಗೊಂಡಿತ್ತು. 'ಬಿಗಿಲ್' ಸಿನಿಮಾಕ್ಕೆ ವಿಜಯ್ ಪಡೆದ ಸಂಭಾವನೆ ಮತ್ತು ಅದರ ಲಾಭಾಂಶದಿಂದ ಪಡೆದ ಮೊತ್ತ ಹಾಗೂ ಇತರೆ ಸಂಗತಿಗಳ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಜಯ್ ನಟನೆಯ 'ಪುಲಿ' ಬಿಡುಗಡೆಗೂ ಮುನ್ನ 2015ರ ಸೆಪ್ಟೆಂಬರ್‌ನಲ್ಲಿ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಅದೇ ಸಂದರ್ಭದಲ್ಲಿ ಸಹ ನಟಿಯರಾದ ನಯನತಾರಾ ಮತ್ತು ಸಮಂತಾ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆಯೂ ಐಟಿ ದಾಳಿ ಹಾಗೂ ಪರಿಶೀಲನೆ ಮಾಡಲಾಗಿತ್ತು.

  English summary
  Income Tax officials once again conduct search at Vijay Thalapathy's house in Chennai.
  Thursday, March 12, 2020, 13:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X