For Quick Alerts
  ALLOW NOTIFICATIONS  
  For Daily Alerts

  'ತೋತಾಪುರಿ' ಹೆಸರಲ್ಲಿ ನವರಸ ನಾಯಕ ಜಗ್ಗೇಶ್ ರೈಲ್ ಬಿಟ್ರು!

  |

  ಒಂದ್ಕಡೆ ದಸರಾ ಹಬ್ಬ. ಇನ್ನೊಂದ್ಕಡೆ ಸಿನಿಮಾ ಹಬ್ಬ. ಜನರಿಗೆ ಒಂಥರಾ ಡಬಲ್ ಧಮಾಕಾ. ಯಾವ ಕಡೆ ನೋಡಿದರೂ ಬರೀ ಸಂಭ್ರಮವೇ ಸಂಭ್ರಮ. ಆದರೆ, ನಾಡ ಹಬ್ಬದ ಈ ಸಂಭ್ರಮದಲ್ಲಿ ಥಿಯೇಟರ್‌ಗೆ ಲಗ್ಗೆ ಇಡುತ್ತಿರುವ ಸಿನಿಮಾಗಳು ಒಂದೆರಡಲ್ಲ. ಈ ಎಲ್ಲಾ ಸಿನಿಮಾಗಳ ಮಧ್ಯೆ ನವರಸ ನಾಯಕ ಜಗ್ಗೇಶ್ ನಟಿಸಿರೋ 'ತೋತಾಪುರಿ' ಕೂಡ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

  ನವರಾತ್ರಿಗೆ ಬಿಡುಗಡೆಯಾಗುತ್ತಿರುವ ಸಿನಿಮಾಗಳೆಲ್ಲವೂ ಭರ್ಜರಿ ಪ್ರಚಾರವನ್ನು ಆರಂಭಿಸಿವೆ. ಇತ್ತ ನವರಸ ನಾಯಕ ಜಗ್ಗೇಶ್ ಮತ್ತು ಅವರ ತಂಡ ಕೂಡ ಅಖಾಡಕ್ಕೆ ಇಳಿದಿದೆ. ವಿಭಿನ್ನವಾಗಿ ಸಿನಿಮಾವನ್ನು ಪ್ರಮೋಷನ್ ಮಾಡುತ್ತಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

  ಬೆಂಗಳೂರಿನ ಫೇಮಸ್ ಮಂತ್ರಿ ಮಾಲ್‌ ಇರೋ ಜಾಗದಲ್ಲಿ ಮೊದಲು ಏನಿತ್ತು? ಜಗ್ಗೇಶ್ ಹೇಳ್ತಾರೆ ನೋಡಿ!ಬೆಂಗಳೂರಿನ ಫೇಮಸ್ ಮಂತ್ರಿ ಮಾಲ್‌ ಇರೋ ಜಾಗದಲ್ಲಿ ಮೊದಲು ಏನಿತ್ತು? ಜಗ್ಗೇಶ್ ಹೇಳ್ತಾರೆ ನೋಡಿ!

  ರೈಲು ಬಿಟ್ಟ 'ತೋತಾಪುರಿ' ತಂಡ

  ದಸರಾ ಹಬ್ಬ ಬಂತು ಅಂದರೆ, ಮೈಸೂರು ಬ್ಯುಸಿಯಾಗುತ್ತೆ. ರಾಜ್ಯದ ಮೂಲೆ ಮೂಲೆಯಿಂದ ಮೈಸೂರು ದಸರಾ ನೋಡಲು ಬರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ 'ತೋತಾಪುರಿ'ತಂಡ ವಿಶಿಷ್ಟವಾಗಿ ಪ್ರಚಾರ ಮಾಡುವುದಕ್ಕೆ ಮುಂದಾಗಿದೆ. ಸದ್ಯ ಬೆಂಗಳೂರಿನಿಂದ ಮೈಸೂರಿಗೆ 'ತೋತಾಪುರಿ' ರೈಲು ಸದ್ದು ಮಾಡುತ್ತಾ ಹೊರಟಿದೆ.

  ಇಷ್ಟು ದಿನ ಬಸ್ಸಿಗೆ ಪೋಸ್ಟರ್ ಅಂಟಿಸಿ ಪ್ರಚಾರ ಮಾಡುತ್ತಿದ್ದರು. ಈಗ ರೈಲಿಗೂ ಪೋಸ್ಟರ್ ಅಂಟಿಸಿ ಪ್ರಚಾರ ಶುರು ಮಾಡಿದ್ದಾರೆ. ಇದೇ ರೈಲಿನಲ್ಲಿ ಇಡೀ ಚಿತ್ರತಂಡ ಭಾಗವಹಿಸಿದೆ. ಸಿನಿಮಾ ಬಗ್ಗೆ ಭರ್ಜರಿಯಾಗಿ ಪ್ರಚಾರವನ್ನೂ ಮಾಡಿದೆ.

  ಬಾಹುಬಲಿ, ಕೆಜಿಎಫ್ 2 ಓಕೆ.. ಆದರೆ 'ತೋತಾಪುರಿ' ಹಾಗಲ್ಲ: ಜಗ್ಗೇಶ್ ಫುಲ್ ಜೋಷ್!ಬಾಹುಬಲಿ, ಕೆಜಿಎಫ್ 2 ಓಕೆ.. ಆದರೆ 'ತೋತಾಪುರಿ' ಹಾಗಲ್ಲ: ಜಗ್ಗೇಶ್ ಫುಲ್ ಜೋಷ್!

  'ತೋತಾಪುರಿ ಎಕ್ಸ್‌ಪ್ರೆಸ್‌'ನಲ್ಲಿ ಜಗ್ಗೇಶ್-ಅದಿತಿ

  ಬೆಂಗಳೂರಿನಿಂದ ಮೈಸೂರಿಗೆ ಹೊರಟ 'ತೋತಾಪುರಿ ಎಕ್ಸ್‌ಪ್ರೆಸ್‌' ರೈಲಿನಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಪ್ರಯಾಣ ಮಾಡಿದ್ದಾರೆ. ಪ್ರಯಾಣ ಮಾಡುತ್ತಲೇ ಸಿನಿಮಾ ಬಗ್ಗೆ ಪ್ರಚಾರವನ್ನೂ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ರೈಲು ಬಿಟ್ಟು ಭರ್ಜರಿಯಾಗಿ ಪ್ರಮೋಷನ್ ಶುರು ಮಾಡಿದ್ದಾರೆ.

  ಹಾಗಂತ ಕೇವಲ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಅಷ್ಟೇ ಅಲ್ಲ. ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನಿರ್ಮಾಪಕ ಸುರೇಶ್ ಕೂಡ ಇದೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಇದೇ ತಂಡ ಫ್ರೀ ಬಸ್ ಬಿಟ್ಟು ಸುದ್ದಿಯಾಗಿತ್ತು.

  Jaggesh Starrer Totapuri team organized Free Bus For Dasara And Train

  ದಸರಾ ಬಾಕ್ಸಾಫೀಸ್ ಫೈಟ್: ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗ್ತಿದೆ ಗೊತ್ತಾ?ದಸರಾ ಬಾಕ್ಸಾಫೀಸ್ ಫೈಟ್: ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗ್ತಿದೆ ಗೊತ್ತಾ?

  ಪ್ರಚಾರದ ಸ್ಟ್ರಾಟಜಿ ಏನು?

  'ತೋತಾಪುರಿ' ಸಿನಿಮಾ ಪ್ರಚಾರಕ್ಕೆ ರೈಲು ಬಿಟ್ಟಿರೋದಕ್ಕೆ ಚಿತ್ರತಂಡಕ್ಕೆ ತುಂಬಾನೇ ಪ್ರಯೋಜನ ಆಗಲಿದೆ. ಬೆಂಗಳೂರಿನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಇದರಿಂದ 'ತೋತಾಪುರಿ'ಗೆ ಮುಂದಿನ ಮೂರು ದಿನಗಳಲ್ಲಿ ಭರ್ಜರಿ ಪ್ರಚಾರ ಸಿಗಲಿದೆ.

  ಇನ್ನೊಂದು ಕಡೆ ಫ್ರೀ ಬಸ್ ಬಿಟ್ಟಿರೋದು ಕೂಡ ಬೆಂಗಳೂರಿನಿಂದ ಮೈಸೂರಿಗೆ ಒಂದು ಟ್ರಿಪ್ ಹೋಗಿ ಬಂದಿದೆ. ಇನ್ನು ಹಬ್ಬದ ದಿನ ಮೈಸೂರಿಗೆ ಪ್ರಯಾಣ ಮಾಡುವ ಜನರಿಗೆ 'ತೋತಾಪುರಿ' ಬಸ್ ಫ್ರೀಯಾಗಿ ಕರೆದುಕೊಂಡು ಹೋಗಲಿದೆ. ಅಂದ್ಹಾಗೆ 'ತೋತಾಪುರಿ' ಪಾರ್ಟ್ 1 ಇದೇ ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗಲಿದೆ.

  English summary
  Jaggesh Starrer Totapuri team organized Free Bus For Dasara And Train, Know More.
  Tuesday, September 27, 2022, 17:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X