For Quick Alerts
  ALLOW NOTIFICATIONS  
  For Daily Alerts

  ಕಿರೀಟಿ ರೆಡ್ಡಿ: ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸಾಹಸಕ್ಕೆ ಭೇಷ್ ಎಂದ ನೆಟ್ಟಿಗರು

  |

  ಜನಾರ್ಧನ ರೆಡ್ಡಿ ಪುತ್ರ ಚಿತ್ರರಂಗಕ್ಕೆ ಅದ್ಧೂರಿ ಎಂಟ್ರಿಗೆ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಸಿನಿಮಾ ಮುಹೂರ್ತದ ದಿನದಂದೇ ಕಿರೀಟಿ ರೆಡ್ಡಿ ಆಕ್ಷನ್, ಸ್ಟಂಟ್, ಡ್ಯಾನ್ಸ್ ಝಲಕ್ ಅನಾವರಣಗೊಂಡಿತ್ತು. ಅಲ್ಲಿಂದ ಚಿತ್ರರಂಗಕ್ಕೆ ಕಿರೀಟಿ ರೆಡ್ಡಿ ಆಗಮನದ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.

  ಕಿರೀಟಿ ರೆಡ್ಡಿ ಚೊಚ್ಚಲ ಸಿನಿಮಾ ಮುಹೂರ್ತಕ್ಕೆ ಮೂವಿ ಮಾಂತ್ರಿಕ ರಾಜಮೌಳಿ ಎಂಟ್ರಿಕೊಟ್ಟಿದ್ದರು. ಕಿರೀಟಿ ರೆಡ್ಡಿ ಇಂಟ್ರಡಕ್ಷನ್ ಟೀಸರ್ ನೋಡಿ ಸ್ವತ: ರಾಜಮೌಳಿ ಭೇಷ್ ಎಂದಿದ್ದರು. ಈಗ ಇದೇ ಟೀಸರ್‌ನ ಮೇಕಿಂಗ್ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಹಸ ದೃಶ್ಯಗಳಿಗೆ ಕಿರೀಟಿ ರೆಡ್ಡಿ ಹಾಕುತ್ತಿರುವ ಶ್ರಮದ ಮೇಕಿಂಗ್ ಝಲಕ್ ಬೇಜಾನ್ ಸದ್ದು ಮಾಡುತ್ತಿದೆ.

  ಬೇಜಾನ್ ಸದ್ದು ಮಾಡುತ್ತಿದೆ ಟೀಸರ್ ಮೇಕಿಂಗ್

  ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಇಂಟ್ರಡಕ್ಷನ್ ಟೀಸರ್‌ ನೋಡಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಇಂಟ್ರಡಕ್ಷನ್ ಟೀಸರ್‌ಗಾಗಿ ಕಿರೀಟಿ ರೆಡ್ಡಿ ಪರಿಶ್ರಮದ ಮೇಕಿಂಗ್ ವಿಡಿಯೋ ಒಂದನ್ನು ರಿಲೀಸ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಇಂಟ್ರಡಕ್ಷನ್‌ ದೃಶ್ಯಗಳಿಗಾಗಿ ಕಿರೀಟಿ ಡೇಂಜರಸ್ ಸ್ಟಂಟ್‌ಗಳನ್ನು ಮಾಡಿದ್ದಾರೆ. ಈ ವೇಳೆ ಬಿದ್ದಿದ್ದಾರೆ, ಎದ್ದಿದ್ದಾರೆ. ಕೆಲವು ಸಾಹಸ ದೃಶ್ಯಗಳಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ.

  ಸಾಹಸ ದೃಶ್ಯಗಳಿಗೆ ಕಿರೀಟಿ ರೆಡ್ಡಿಗೆ ತರಬೇತಿ ನೀಡುತ್ತಿರುವುದು ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್. ಭಾರತದ ಅದ್ಭುತ ಆಕ್ಷನ್ ಸೀಕ್ವೆನ್ಸ್‌ಗೆ ಪೀಟರ್ ಹೇನ್ ಸಾಹಸ ನಿರ್ದೇಶನ ಮಾಡಿದ್ದಾರೆ. ಕಿರೀಟಿಗೆ ಟ್ರೈನಿಂಗ್ ಕೊಡುತ್ತಿರುವ ಪೀಟರ್ ಹೇನ್ ಸ್ಟಂಟ್ಸ್ ಮೈ ಜುಮ್ ಎನಿಸುತ್ತಿವೆ. ಕಾರಿನ ಮೇಲೆ ಜಿಗಿಯುವ ದೃಶ್ಯ, ಕಾಫಿ ಟೇಬಲ್ ಮೇಲಿಂದ ಹಾರುವ ದೃಶ್ಯಗಳು ಮೈಜುಂ ಎನಿಸುತ್ತಿವೆ.

  Janardhana Reddy Son Kireeti Reddy Preparation For Introduction Scene Making Video

  ಕಿರೀಟಿ ರೆಡ್ಡಿಗೆ ದಕ್ಷಿಣ ಭಾರತದ ದಿಗ್ಗಜರೇ ಸಾಥ್

  ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿಗೆ ದಕ್ಷಿಣ ಭಾರತದ ದಿಗ್ಗಜರು ಜೊತೆಯಾಗಿದ್ದಾರೆ. ಬಾಹುಬಲಿ, RRR ಸಿನಿಮಾಗಳ ಕ್ಯಾಮರಾಮ್ಯಾನ್ ಸೆಂಥಿಲ್ ಕುಮಾರ್ ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ. 'ಪುಷ್ಪ' ಸಿನಿಮಾಗೆ ಸೂಪರ್‌ ಹಿಟ್ ಹಾಡುಗಳನ್ನುನೀಡಿದ್ದ ದೇವಿಶ್ರೀ ಪ್ರಸಾದ್ ಕಿರೀಟಿ ಸಿನಿಮಾಗೂ ಟ್ಯೂನ್ ಹಾಕಲಿದ್ದಾರೆ. ರವೀಂದರ್ ಕಲಾ ನಿರ್ದೇಶನವಿದೆ. ಕಿರೀಟಿಯ ಈ ಚೊಚ್ಚಲ ಚಿತ್ರ ದಕ್ಷಿಣ ಭಾರತದ ದಿಗ್ಗಜರು ಜೊತೆಯಾಗಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

  ಕಿರೀಟಿ ರೆಡ್ಡಿ ಮೊದಲ ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್‌ ನಿರ್ಮಿಸುತ್ತಿದೆ. ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ವಾರಾಹಿ ಸಂಸ್ಥೆಯ 15ನೇ ಸಿನಿಮಾ ಇದಾಗಿದೆ.

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ 'ಮಯಾಬಜಾರ್' ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ವಿಶೇಷ ಅಂದ್ರೆ, ಕಿರೀಟಿ ರೆಡ್ಡಿಯ ತಂದೆಯ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾ ಮೂಲಕ ಜೆನಿಲಿಯಾ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ.

  English summary
  Janardhana Reddy Son Kireeti Reddy Preparation For Introduction Scene Making Video, Know More.
  Thursday, April 21, 2022, 9:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X