»   » ಪದ್ಮಾವತಿ ಸಾವು: 'ವಿಐಪಿ' ನಂದಕಿಶೋರ್ ಕುರಿತ ವದಂತಿ ನಿಜವೇ?

ಪದ್ಮಾವತಿ ಸಾವು: 'ವಿಐಪಿ' ನಂದಕಿಶೋರ್ ಕುರಿತ ವದಂತಿ ನಿಜವೇ?

Posted By:
Subscribe to Filmibeat Kannada

ಜನವರಿ 9 ರಂದು ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಪುತ್ರ ಮನೋರಂಜನ್ ಅಭಿನಯದ 'ವಿಐಪಿ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಜೂನಿಯರ್ ಆರ್ಟಿಸ್ಟ್ ಪದ್ಮಾವತಿ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಪಟ್ಟಂತೆ ನಿರ್ದೇಶಕ ನಂದಕಿಶೋರ್ ಸೇರಿದಂತೆ ಚಿತ್ರತಂಡದ ಏಳು ಜನರ ವಿರುದ್ಧ ದೂರು ದಾಖಲಾಗಿದೆ.

ಈ ಬೆಳವಣಿಗೆ ಬಳಿಕ ನಿರ್ದೇಶಕ ನಂದಕಿಶೋರ್ ನಾಪತ್ತೆ ಆಗಿದ್ದಾರೆ, ಯಾರ ಕೈಗೂ ಸಿಗುತ್ತಿಲ್ಲ, ಮೃತ ಪದ್ಮಾವತಿ ಕುಟುಂಬದವರನ್ನೂ ಮಾತನಾಡಿಸಿಲ್ಲ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ.[ಪದ್ಮಾವತಿ ಸಾವು : ವಿಐಪಿ ಚಿತ್ರ ತಂಡದ ವಿರುದ್ಧ ಪ್ರಕರಣ ದಾಖಲು]

ಈ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಲು ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡ ನಂದಕಿಶೋರ್ ರವರನ್ನ ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡ್ತು. ಆಗ ಮಾತಿಗೆ ಸಿಕ್ಕ ನಂದಕಿಶೋರ್ 'ಪದ್ಮಾವತಿ ದುರ್ಘಟನೆ' ಬಗ್ಗೆ ಹೇಳಿದ್ದು ಹೀಗೆ....

ದೂರು ದಾಖಲಾದ ಬಳಿಕ ನಂದಕಿಶೋರ್ ನಾಪತ್ತೆ.?

''ನಾಪತ್ತೆ ಯಾಕೆ ಆಗಲಿ. ಅದು ಆಕ್ಸಿಡೆಂಟ್ ಅಷ್ಟೆ. ಅದರಲ್ಲೂ ಅದು ಶೂಟಿಂಗ್ ನಡೆಯುವಾಗ ನಡೆದ ದುರ್ಘಟನೆ ಅಲ್ಲ. ಇದೇ ಪದ್ಮಾವತಿ ಅವರ ಮೊದಲ ಸಿನಿಮಾ... ಸಿನಿಮಾ ಶೂಟಿಂಗ್ ಅಂದ್ರೇನು ಅಂತ ಅವರಿಗೆ ಗೊತ್ತಿಲ್ಲ ಅನ್ನುವ ಹಾಗಿಲ್ಲ. ಪದ್ಮಾವತಿ ಈಗಾಗಲೇ 200 ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಅಭಿನಯಿಸಿದ್ದಾರೆ. ಹೀಗಾಗಿ ಅವರಿಗೂ ನಿಯಮಗಳ ಬಗ್ಗೆ ಅರಿವು ಇರಬೇಕು. ಪದ್ಮಾವತಿ ಜೂನಿಯರ್ ಆರ್ಟಿಸ್ಟ್ ಅಸೋಸಿಯೇಷನ್ ಮೆಂಬರ್ ಕೂಡ. ಹಾಗಾಗಿ ಶೂಟಿಂಗ್ ನಡೆಯುವಾಗ ಎಲ್ಲೂ ಹೋಗಬಾರದು ಎಂಬುದು ಅವರಿಗೂ ಗೊತ್ತಿರಬೇಕು. ಅದನ್ನ ಬಿಟ್ಟು ಅವರು ಯಾಕೆ ಅಲ್ಲಿಗೆ ಹೋದರು ಎಂಬುದು ನಮಗೆ ಗೊತ್ತಿಲ್ಲ'' - ನಂದಕಿಶೋರ್, ನಿರ್ದೇಶಕ [ಕನ್ನಡದ 'ವಿಐಪಿ' ಚಿತ್ರೀಕರಣದ ವೇಳೆ ಸಹ ನಟಿ ಸಾವು!]

ಶೂಟಿಂಗ್ ಎಲ್ಲಿ ಮಾಡ್ತಿದ್ರಿ.?

''ಪದ್ಮಾವತಿ ಹೋಗಿದ್ದ ಬ್ಲಾಕ್ ನಲ್ಲಿ ನಾವು ಶೂಟಿಂಗ್ ಮಾಡುತ್ತಿರಲಿಲ್ಲ. ನಾವು ಶೂಟಿಂಗ್ ಮಾಡುತ್ತಿದ್ದ ಜಾಗಕ್ಕೂ ಅಲ್ಲಿಗೂ ಏನಿಲ್ಲ ಅಂದರೂ 600-700 ಮೀಟರ್ ಅಂತರ ಇದೆ. ಅವರು ಅಲ್ಲಿಗೆ ಯಾಕೆ ಹೋದರು ಎಂಬುದೇ ನಮಗೆ ಗೊತ್ತಿಲ್ಲ'' - ನಂದಕಿಶೋರ್, ನಿರ್ದೇಶಕ

ಘಟನೆ ಸಂಭವಿಸಿದ್ದು ಯಾವಾಗ?

''ಸಿವಿಲ್ ಎಂಜಿನಿಯರ್ ಸನ್ನಿವೇಶ ಶೂಟಿಂಗ್ ಮಾಡ್ತಿದ್ವಿ. ಅದಕ್ಕೆ ಬ್ಯಾಕ್ ಗ್ರೌಂಡ್ ನಲ್ಲಿ ಹೆಚ್ಚು ಜನ ಜೂನಿಯರ್ ಆರ್ಟಿಸ್ಟ್ ಬೇಕಾಗಿತ್ತು. ಶೂಟಿಂಗ್ ಗೆ ಪದ್ಮಾವತಿ ಒಬ್ಬರೇ ಬಂದಿದ್ದಾರೆ ಅಂತ ಇಲ್ಲ. ಅವರ ತಾಯಿ ಮತ್ತು ಸಹೋದರಿ ಕೂಡ ಜೊತೆಗೆ ಬಂದಿದ್ದಾರೆ. ಶೂಟಿಂಗ್ ನಡೆಯುವಾಗ ಹೀಗೆ ಆಗಿಲ್ಲ. ಆಗಿದ್ದರೆ ಅವರ ತಾಯಿ/ಸಹೋದರಿ ಸುಮ್ನೆ ಇರ್ತಿದ್ರಾ.? ಶೂಟಿಂಗ್ ಮುಗಿದ್ಮೇಲೆ ಗೊತ್ತಾಗಿದೆ ಅಂದ್ರೆ ಅಲ್ಲಿಯವರೆಗೂ ಅವರು ಏನು ಮಾಡ್ತಿದ್ರು.?'' - ನಂದಕಿಶೋರ್, ನಿರ್ದೇಶಕ

ಪದ್ಮಾವತಿಗೆ ಏನಾಯ್ತು.?

''ಪದ್ಮಾವತಿ ಯಾರು ಅನ್ನೋದೇ ನನಗೆ ಗೊತ್ತಿಲ್ಲ. ಪದ್ಮಾವತಿ ಎಲ್ಲಿಗೆ ಹೋದರು, ಅವರಿಗೆ ಏನಾಯ್ತು, ಯಾಕೆ ಹೋದರು... ಯಾರಿಗೂ ಗೊತ್ತಿಲ್ಲ. ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ'' - ನಂದಕಿಶೋರ್, ನಿರ್ದೇಶಕ

English summary
Kannada Director Nanda Kishore explained his version about the incident which took place on January 9th, where Junior Artist Padmavathi died at 'VIP' Film shooting spot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada