For Quick Alerts
  ALLOW NOTIFICATIONS  
  For Daily Alerts

  ಗನ್ ಹಿಡಿದು ರೋಮಾಂಚನಗೊಂಡ ಉಪ್ಪಿ!: ಈ ಪಿಸ್ತೂಲಿನ ವಿಶೇಷತೆ ಏನು?

  |

  ರಿಯಲ್ ಸ್ಟಾರ್ ಉಪೇಂದ್ರ ಗನ್ ಹಿಡಿದು ಪ್ರತ್ಯಕ್ಷರಾಗಿದ್ದಾರೆ. ಅದೂ ಅಂತಿಂಥ ಗನ್ ಅಲ್ಲ. ಚಿತ್ರರಂಗದ ಗತಕಾಲದ ವೈಭವವನ್ನು ನೆನಪಿಸುವಂತಹ ಗನ್‌ಗಳು.

  ನಿಮ್ಮನ್ನ ನೋಡಿದ್ರೆ ನಂಗೆ ಗಡಗಡ ನಡುಗುತ್ತೆ..! | LikithRaj | Duniya Rashmi | Om Sai Prakash

  ಭೂಗತ ದಶಕದ ಕಥೆಯನ್ನು ಒಳಗೊಂಡ 'ಕಬ್ಜ' ಚಿತ್ರಕ್ಕಾಗಿ ಉಪ್ಪಿ ಪಿಸ್ತೂಲುಗಳನ್ನು ಹಿಡಿದು ಪೋಸ್ ನೀಡಿದ್ದಾರೆ. 'ಮೈಲಾರಿ' ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಉಪೇಂದ್ರ ಅವರ ಪಾತ್ರವೂ ಅಂತಹದ್ದೇ. ಭೂಗತ ಲೋಕದ ಪಾತಕಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕರಾಗಿ ಲಾಂಗ್ ಹಿಡಿಸಿದ್ದ ಉಪೇಂದ್ರ ಅವರಿಗೇ ಚಂದ್ರು ಲಾಂಗ್ ಕೊಟ್ಟಿದ್ದಾರೆ. ಇದು 80ರ ದಶಕದ ಕಥೆ. ನಾಲ್ಕು ದಶಕಗಳಷ್ಟು ಹಿಂದಿನ ಶೈಲಿಯ ಅಂಗಿ ಮತ್ತು ಬೆಲ್ ಬಾಟಂ ಪ್ಯಾಂಟ್ ಧರಿಸಿ ಲಾಂಗ್ ಹಿಡಿದು ಉಪ್ಪಿ ನಡೆಯುವ ಪೋಸ್ಟರ್ ಮೂಲಕ ಹೊಸ ಗೆಟಪ್‌ಅನ್ನು ದರ್ಶನ ಮಾಡಿಸಲಾಗಿತ್ತು.

  ಉಪೇಂದ್ರ ಜೊತೆ 'ಕಬ್ಜ' ಚಿತ್ರದಲ್ಲಿ ತಮಿಳು ನಿರ್ದೇಶಕ ನಟನೆಉಪೇಂದ್ರ ಜೊತೆ 'ಕಬ್ಜ' ಚಿತ್ರದಲ್ಲಿ ತಮಿಳು ನಿರ್ದೇಶಕ ನಟನೆ

  ಅದರ ನಂತರ ಉಪ್ಪಿ ಹಳೆ ಕಾಲದ ಪಿಸ್ತೂಲುಗಳನ್ನು ಹಿಡಿದು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಪಿಸ್ತೂಲುಗಳು ವಿಶೇಷವಾಗಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಅವುಗಳ ವಿಶೇಷವೇನು? ಮುಂದೆ ಓದಿ...

  ಅವಿಸ್ಮರಣೀಯ ರೋಮಾಂಚನ

  ಅವಿಸ್ಮರಣೀಯ ರೋಮಾಂಚನ

  ಎರಡು ಕೈಯಲ್ಲಿ ಎರಡು ಪಿಸ್ತೂಲುಗಳನ್ನು ಹಿಡಿದು ಮೂರು ವಿಭಿನ್ನ ಭಂಗಿಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಉಪೇಂದ್ರ ಶೇರ್ ಮಾಡಿದ್ದಾರೆ. ಈ ಪಿಸ್ತೂಲುಗಳನ್ನು ಚಿತ್ರೀಕರಣದಲ್ಲಿ ಬಳಸಿದಾಗ ಎಂದಿಗೂ ಮರೆಯಲಾಗದಂತಹ ರೋಮಾಂಚನವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

  ಅಣ್ಣಾವ್ರು, ಅಮಿತಾಬ್ ಬಳಸಿದ್ದರು

  ಈ ಉದ್ದದ ಮತ್ತು ಹಳೆಯ ಕಾಲದ ತಂತ್ರಜ್ಞಾನದ ಪಿಸ್ತೂಲುಗಳು ಅಣ್ಣಾವ್ರು ಮತ್ತು ಅಮಿತಾಬ್ ಬಚ್ಚನ್ ಅವರಂತಹ ಮೇರು ನಟರು 'ಗಂಧದ ಗುಡಿ', 'ಶೋಲೆ' ಚಿತ್ರಗಳಲ್ಲಿ ಬಳಸಿದಂತಹ ಪಿಸ್ತೂಲುಗಳು ಎಂದು ಉಪೇಂದ್ರ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

  ಉಪ್ಪಿ 'ಕಬ್ಜ' ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ಮಾಪಕ ಸಾಥ್ಉಪ್ಪಿ 'ಕಬ್ಜ' ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ಮಾಪಕ ಸಾಥ್

  70ರ ದಶಕದ ಚಿತ್ರಗಳು

  70ರ ದಶಕದ ಚಿತ್ರಗಳು

  1973ರಲ್ಲಿ ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಜತೆಯಾಗಿ ಅಭಿನಯಿಸಿದ್ದ 'ಗಂಧದ ಗುಡಿ' ಸಿನಿಮಾ ತೆರೆಕಂಡಿತ್ತು. ರಾಜ್ ಕುಮಾರ್ ಇದೇ ರೀತಿಯ ಗನ್ ಬಳಸಿದ್ದರು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ರಾಜ್‌ಕುಮಾರ್ ನಡುವಿನ ಕಾದಾಟದಲ್ಲಿ ಪಿಸ್ತೂಲು ಬಳಕೆ ವಿವಾದ ಸೃಷ್ಟಿಸಿದ್ದು ಈಗ ಇತಿಹಾಸ. 1975ರಲ್ಲಿ ತೆರೆ ಕಂಡ ಶೋಲೆ ಸಿನಿಮಾದ ಚಿತ್ರೀಕರಣ ರಾಮನಗರದಲ್ಲಿ ನಡೆದಿತ್ತು. ಆಗ ಅಮಿತಾಬ್ ಕೂಡ ಇದೇ ರೀತಿಯ ಪಿಸ್ತೂಲು ಬಳಸಿದ್ದರು.

  ಎ ಚಿತ್ರದಲ್ಲಿ ಬಳಸಿರಲಿಲ್ಲವೇ?

  ಎ ಚಿತ್ರದಲ್ಲಿ ಬಳಸಿರಲಿಲ್ಲವೇ?

  ಇಂತಹ ಮೇರು ನಟರು ತಮ್ಮ ಸಿನಿಮಾಗಳಲ್ಲಿ ಬಳಸಿದ್ದಂತಹ ಪಿಸ್ತೂಲನ್ನು 'ಕಬ್ಜ' ಚಿತ್ರದಲ್ಲಿ ನಾನು ಬಳಸಿದಾಗ ಆದ ರೋಮಾಂಚನ ಅವಿಸ್ಮರಣೀಯ ಎಂದು ಉಪೇಂದ್ರ ತಿಳಿಸಿದ್ದಾರೆ. 'ನೀವು "A" ಯಲ್ಲಿ ಕೆಲಸ ಮಾಡದೆ ಬೀಡಿ ಸೇದುತ್ತಾ ಕುಳಿತಿದ್ದವನು, ದೇವಸ್ಥಾನದ ಹೊರಗಡೆ ಭಿಕ್ಷೆ ಬೇಡುತ್ತಿದ್ದವರನ್ನು ಗುಂಡು ಹಾರಿಸಿ ಓಡಿಸಿದ್ದು ಇದೇ ಪಿಸ್ತೂಲಿನಿಂದ ಅಲ್ಲವೇ? ಅದು ನೆನಪಿಲ್ಲವೇ??? ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ.

  ಪ್ಯಾನ್ ಇಂಡಿಯಾ ಸಿನಿಮಾ

  ಪ್ಯಾನ್ ಇಂಡಿಯಾ ಸಿನಿಮಾ

  ಉಪೇಂದ್ರ-ಆರ್. ಚಂದ್ರು ಕಾಂಬಿನೇಷನ್‌ನ ಮೂರನೇ ಚಿತ್ರವಿದು. 'ಬ್ರಹ್ಮ' ಮತ್ತು 'ಐ ಲವ್ ಯೂ' ಚಿತ್ರಗಳಲ್ಲಿ ಆರ್. ಚಂದ್ರು ನಿರ್ದೇಶನದಲ್ಲಿ ಉಪ್ಪಿ ಅಭಿನಯಿಸಿದ್ದರು. 'ಕಬ್ಜ' ಪ್ಯಾನ್ ಇಂಡಿಯಾ ಚಿತ್ರವಾಗಿರುವುದು ವಿಶೇಷ. ಈ ಚಿತ್ರದ ಎರಡನೆಯ ಹಂತದ ಚಿತ್ರೀಕರಣ ಮಾರ್ಚ್ ಮೊದಲ ವಾರ ಆರಂಭವಾಗಿದೆ. ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸನ್, ಸುಬ್ಬರಾಜು ಮುಂತಾದ ನಟರೂ 'ಕಬ್ಜ' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎನ್ನಲಾಗಿದೆ.

  English summary
  Upendra said that, he was thrilled to pose with the guns which were used by Dr Rajkumar and Amitabh Bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X