»   » ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ ಕಟ್ಟಪ್ಪ ಬಗ್ಗೆ ಕಮಲ್ ಹಾಸನ್ ಮೆಚ್ಚುಗೆ!

ಮಾಡಿದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ ಕಟ್ಟಪ್ಪ ಬಗ್ಗೆ ಕಮಲ್ ಹಾಸನ್ ಮೆಚ್ಚುಗೆ!

Posted By:
Subscribe to Filmibeat Kannada

'ಬಾಹುಬಲಿ-2' ಚಿತ್ರದ ಕಟ್ಟಪ್ಪ ಪಾತ್ರಧಾರಿ ತಮಿಳು ನಟ ಸತ್ಯರಾಜ್ ಬಗ್ಗೆ ನಟ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನ ಅರ್ಥೈಸಿಕೊಂಡ ನಟ ಸತ್ಯರಾಜ್ ರವರ ನಡೆ ಕುರಿತು ಕಮಲ್ ಹಾಸನ್ ಭೇಷ್ ಎಂದಿದ್ದಾರೆ.

ಒಂಬತ್ತು ವರ್ಷಗಳ ಹಿಂದೆ ಕಾವೇರಿ ವಿವಾದ ಸಂದರ್ಭದಲ್ಲಿ ಕನ್ನಡಿಗರ ಕುರಿತು ಬಾಯಿಗೆ ಬಂದ್ಹಂಗೆ ಮಾತನಾಡಿದ್ದ ಸತ್ಯರಾಜ್ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಪಟ್ಟು ಹಿಡಿದಿದ್ದರು. ಸತ್ಯರಾಜ್ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಹೋರಾಟಗಾರರು ಕಟ್ಟಪ್ಪಣೆ ಮಾಡಿದ್ದರು.[ಕೊನೆಗೂ 'ಕಟ್ಟಪ್ಪ'ನನ್ನ ಕ್ಷಮಿಸಿದ ಕರುನಾಡು]

ಇದನ್ನೆಲ್ಲ ಗಮನಿಸಿದ ನಟ ಸತ್ಯರಾಜ್, ತಾವು ನೀಡಿದ್ದ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸತ್ಯರಾಜ್ ರವರ ಈ ನಡೆಗೆ ಕಮಲ್ ಹಾಸನ್ ಹೊಗಳಿದ್ದಾರೆ.

ಟ್ವಿಟ್ಟರ್ ನಲ್ಲಿ ಕಟ್ಟಪ್ಪ ರವರನ್ನ ಹೊಗಳಿದ ಕಮಲ್ ಹಾಸನ್

ಕನ್ನಡಿಗರ ವಿರುದ್ಧ ಆಡಿರುವ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿರುವ ಸತ್ಯರಾಜ್ ರವರನ್ನ ನಟ ಕಮಲ್ ಹಾಸನ್ ಟ್ವಿಟ್ಟರ್ ನಲ್ಲಿ ಬೆನ್ನು ತಟ್ಟಿದ್ದಾರೆ.[ಕರ್ನಾಟಕದಲ್ಲಿ 'ಬಾಹುಬಲಿ 2' ಬಿಡುಗಡೆ, ಬಂದ್ ವಾಪಸ್: ವಾಟಾಳ್ ನಾಗರಾಜ್ ಸ್ಪಷ್ಟನೆ]

ಕಮಲ್ ಹಾಸನ್ ಮಾಡಿರುವ ಟ್ವೀಟ್ ಏನು.?

''ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸೌಹಾರ್ದತೆ ಮೆರೆದಿದ್ದಕ್ಕೆ ಅಭಿನಂದನೆ'' ಎಂದು ಸತ್ಯರಾಜ್ ರವರನ್ನ ಉದ್ದೇಶಿಸಿ ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಸತ್ಯರಾಜ್ ದೊಡ್ಡ ಮನುಷ್ಯ

ಸತ್ಯರಾಜ್ ಗೆ ಅಭಿನಂದನೆ ಸಲ್ಲಿಸುವ ಜೊತೆಗೆ ತಮ್ಮ 'ವಿರುಮಾಂಡಿ' ಚಿತ್ರದ ಡೈಲಾಗ್ ನ ಕಮಲ್ ಹಾಸನ್ ನೆನಪಿಸಿಕೊಂಡಿದ್ದಾರೆ. ಅದರ ಅರ್ಥ, ''ಕ್ಷಮಿಸುವುದನ್ನು ತಿಳಿದಿರುವವನು ಮನುಷ್ಯ. ಕ್ಷಮೆ ಕೇಳುವುದನ್ನು ತಿಳಿದಿರುವವನು ದೊಡ್ಡ ಮನುಷ್ಯ''. ಅಲ್ಲಿಗೆ, ವಿಷಾದ ವ್ಯಕ್ತಪಡಿಸಿರುವ ಸತ್ಯರಾಜ್ ದೊಡ್ಡ ಮನುಷ್ಯ ಎಂಬುದು ಕಮಲ್ ಹಾಸನ್ ರವರ ಮಾತಿನ ಅರ್ಥ.

ಪರಿಸ್ಥಿತಿ ತಿಳಿಯಾಗಿದೆ

ತಮ್ಮ ಮಾತುಗಳ ಕುರಿತು ಸತ್ಯರಾಜ್ ವಿಷಾದ ವ್ಯಕ್ತಪಡಿಸಿರುವುದರಿಂದ ಕರ್ನಾಟಕದಲ್ಲೀಗ ಪರಿಸ್ಥಿತಿ ತಿಳಿಯಾಗಿದೆ. 'ಬಾಹುಬಲಿ-2' ಚಿತ್ರ ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ.

English summary
Actor Kamal Haasan has taken his twitter account to praise Tamil Actor Sathyaraj for maintaining rationality in a troubled environment.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X