»   » ಕಮಲ್ ಹಾಸನ್ 'ವಿಶ್ವರೂಪಂ 2' ಫಸ್ಟ್ ಲುಕ್ ಔಟ್

ಕಮಲ್ ಹಾಸನ್ 'ವಿಶ್ವರೂಪಂ 2' ಫಸ್ಟ್ ಲುಕ್ ಔಟ್

By: ಶಂಕರ್, ಚೆನ್ನೈ
Subscribe to Filmibeat Kannada

ಭಾರಿ ನಿರೀಕ್ಷೆ ಮೂಡಿಸಿರುವ ಕಮಲ್ ಹಾಸನ್ ಅವರ ಮತ್ತೊಂದು ಚಿತ್ರ 'ವಿಶ್ವರೂಪಂ 2'. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಕಮಲ್ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿಸಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಜೊತೆಗೆ ಅಭಿನಯಿಸುತ್ತಿದ್ದಾರೆ ಕಮಲ್.

ವಿಶ್ವರೂಪಂ ಚಿತ್ರದ ಮೇಕಿಂಗ್, ಸಬ್ಜೆಕ್ಟ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ತಮ್ಮ ಮನೆಯನ್ನೂ ಅಡ ಇಟ್ಟು ವಿಶ್ವರೂಪಂ ಚಿತ್ರ ನಿರ್ಮಿಸಿದ್ದರು ಕಮಲ್. 'ವಿಶ್ವರೂಪಂ' ಚಿತ್ರ ಹಲವಾರು ಕಾರಣಗಳಿಗೆ ಭಾರಿ ವಿವಾದಕ್ಕೆ ಗುರಿಯಾಗಿದ್ದು ಗೊತ್ತೇ ಇದೆ.

ವಿಶ್ವರೂಪಂ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ರು.120 ಕೋಟಿ ಕಲೆಕ್ಷನ್ ಮಾಡಿತು. ಸರಿಸುಮಾರು ರು.96 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಪೈಸಾ ವಸೂಲ್ ಮಾಡಿತು. ಕಮಲ್ ಅವರಿಗೆ ಆನೆಬಲ ತಂದಿತು.


ಈ ಬಾರಿ ಕಮಲ್ ನಿರ್ದೇಶನಕ್ಕಷ್ಟೇ ಸೀಮಿತವಾಗಿದ್ದಾರೆ. ನಿರ್ಮಾಣದ ಜವಾಬ್ದಾರಿ ಆಸ್ಕರ್ ವಿ ರವಿಚಂದ್ರನ್ ಅವರದು. ಭಾಗ 2ರಲ್ಲೂ ಉಗ್ರವಾದವೇ ಕಥಾವಸ್ತು. ಇಲ್ಲಿ ತಾಯಿ ಮಕ್ಕಳ ಅನುಬಂಧಕ್ಕೆ ಮಹತ್ವ ಇರುತ್ತದೆಯಂತೆ. ಚಿತ್ರದಲ್ಲಿ ಯುದ್ಧದ ಸನ್ನಿವೇಶಗಳು ಹೈಲೈಟ್ ಆಗಿ ನಿಲ್ಲಲಿವೆ.

ವಿಶ್ವರೂಪಂ 2 ಚಿತ್ರದ ಬಜೆಟ್ ರು.95 ಕೋಟಿ ಎನ್ನುತ್ತವೆ ಮೂಲಗಳು. ಈಗಾಗಲೆ ಥಾಯ್ಲೆಂಡ್, ಬ್ಯಾಂಕಾಕ್ ವಾಯುನೆಲೆಯಲ್ಲೂ ಚಿತ್ರೀಕರಿಸಲಾಗಿದೆ. ಉಗ್ರವಾದ, ಮಾನವೀಯ ಮೌಲ್ಯಗಳು ಈ ಬಾರಿಯ ಕಥಾವಸ್ತು. ಬಹುಶಃ 2013ರ ಕೊನೆಗೆ ಚಿತ್ರದ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಚಿತ್ರವನ್ನು ಕೇವಲ 2 ಗಂಟೆಗೆ ಸೀಮಿತ ಮಾಡುತ್ತಿದ್ದಾರೆ ಕಮಲ್.

English summary
Kamal Haasan's 'Vishwaroopam 2' first look out. Vishwaroopam was almost 2 hours 20 minutes, Vishwaroopam 2 would be less than 2 hours running time. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada