»   » ವಿಶ್ವರೂಪಂ ಚಿತ್ರಕ್ಕೆ ರು.30 ಕೋಟಿ ನಷ್ಟ

ವಿಶ್ವರೂಪಂ ಚಿತ್ರಕ್ಕೆ ರು.30 ಕೋಟಿ ನಷ್ಟ

Posted By:
Subscribe to Filmibeat Kannada
Kamal Haasan
ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿ ನಿರ್ಮಿಸಿರುವ 'ವಿಶ್ವರೂಪಂ' ಚಿತ್ರಕ್ಕೆ ತಮಿಳುನಾಡು ಸರ್ಕಾರ ನಿಷೇಧ ಹೇರಿದ ಪರಿಣಾಮ ಚಿತ್ರಕ್ಕೆ ರು.30 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಚಿತ್ರದಲ್ಲಿ ಮುಸ್ಲಿಂ ವಿರೋಧಿ ಸನ್ನಿವೇಶಗಳಿವೆ ಎಂದು ಮುಸ್ಲಿಂ ಸಂಘಟನೆಗಳು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಚಿತ್ರಕ್ಕೆ 15 ದಿನಗಳ ಕಾಲ ನಿಷೇಧ ಹೇರಿತ್ತು.

ಈ ಮೂಲಕ ಸರಿಸುಮಾರು ರು.95 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 'ವಿಶ್ವರೂಪಂ' ಚಿತ್ರಕ್ಕೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ಚಿತ್ರದ ಬಿಡುಗಡೆ ಇನ್ನೂ ಮುಂದಕ್ಕೆ ಹೋದರೆ ನಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು. ಏತನ್ಮಧ್ಯೆ ರಾಜ್ಯದಲ್ಲಿ ಚಿತ್ರ ತೆರೆಕಂಡಿದೆ.

ವಾರಾಂತ್ಯದ ರಜಾ ದಿನಗಳಲ್ಲಿ ಚಿತ್ರ ಬಿಡುಗಡೆಯಾಗದ ಕಾರಣ ರು.30ರಿಂದ 80 ಕೋಟಿ ನಷ್ಟವಾಗಿರುವ ಸಾಧ್ಯತೆಗಳಿವೆ ಎಂದು ಕಮಲ್ ಹಾಸನ್ ಸಹೋದರ ಚಂದ್ರಹಾಸನ್ ಹೇಳಿದ್ದಾರೆ. ತಮ್ಮ ಚಿತ್ರದಲ್ಲಿ ಯಾವ ಸಮುದಾಯಕ್ಕೂ ನೋವುಂಟು ಮಾಡಿಲ್ಲ. ಧಾರ್ಮಿಕ ಭಾವನೆಗಳನ್ನು ಕೆಣಕಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಬಹಳಷ್ಟು ಮಂದಿ 'ವಿಶ್ವರೂಪಂ' ಚಿತ್ರವನ್ನು ವೀಕ್ಷಿಸಲು ಮುಂಗಡ ಬುಕಿಂಗ್ ಮಾಡಿದ್ದರು. ಆದರೆ ಚಿತ್ರವನ್ನು ನಿಷೇಧಿಸಿದ ಕಾರಣ ಅವರ ಹಣವನ್ನು ಹಿಂತಿರುಗಿಸಲಾಗಿದೆ. ಈ ಎಲ್ಲಾ ಬೆಳವಣಿಗಳ ನಡುವೆ ಮತ್ತೊಂದು ಘಟನೆಯೂ ಹೈದರಾಬಾದಿನಲ್ಲಿ ನಡೆದಿದೆ. ವಿಶ್ವರೂಪಂ ಚಿತ್ರ ವಿಮರ್ಶೆ.

ವಿಶ್ವರೂಪಂ ಚಿತ್ರದ ವಿರುದ್ಧ ಮಹ್ಮದ್ ಹಾಜಿ ಎಂಬುವವರು ಆಂಧ್ರ ಹೈಕೋರ್ಟ್ ನಲ್ಲಿ ಚಿತ್ರವನ್ನು ನಿಷೇಧಿಸಬೇಕು ಎಂದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಚಿತ್ರ ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದ್ದು, ಸಾಮಾಜಿಕ ಸಾಮರಸ್ಯಕ್ಕೂ ಹೊಡೆತ ನೀಡುವ ಸಾಧ್ಯತೆಗಳಿವೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)

English summary
Kamal Haasan has incurred a huge loss up to Rs 30 cr due to the ban on Viswaroopam.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada