For Quick Alerts
  ALLOW NOTIFICATIONS  
  For Daily Alerts

  ಬೆಳ್ತಂಗಡಿಯ ಎರ್ಮಾಯಿ ಫಾಲ್ಸ್ ನಲ್ಲಿ ಚಿತ್ರ ನಿರ್ದೇಶಕ ಸಂತೋಷ್ ಜಲಸಮಾಧಿ

  By Harshitha
  |

  ಮಹಾ ಮಳೆಯ ರುದ್ರ ನರ್ತನಕ್ಕೆ ಮಂಗಳೂರು ಅಕ್ಷರಶಃ ನಲುಗಿದೆ. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸುರಿದ ಭಾರೀ ಮಳೆಗೆ ಅಲ್ಲಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರದಿಂದಾಗಿ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಕುಂಭದ್ರೋಣ ಮಳೆಯಿಂದಾಗಿ ಸಾವು-ಸೋವು ಕೂಡ ಸಂಭವಿಸಿದೆ.

  ಈ ನಡುವೆ ಎರ್ಮಾಯಿ ಫಾಲ್ಸ್ ನಲ್ಲಿ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ನಲ್ಲಿ ಫೋಟೋಶೂಟ್ ನಡೆಸಲು ಡೈರೆಕ್ಟರ್ ಸಂತೋಷ್ ಶೆಟ್ಟಿ ಮುಂದಾಗಿದ್ದರು. ಆದ್ರೆ, ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಸಂತೋಷ್ ಶೆಟ್ಟಿ ಜಲಸಮಾಧಿ ಆಗಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  'ಕನಸು' ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ

  'ಕನಸು' ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ

  2013 ರಲ್ಲಿ 'ಕನಸು' ಎಂಬ ಚಿತ್ರವನ್ನ ನಿರ್ದೇಶನ ಮಾಡಿದ್ದವರು ಸಂತೋಷ್ ಶೆಟ್ಟಿ. ಮೂಲತಃ ಕಟೀಲು ನಿವಾಸಿ ಆಗಿರುವ ಸಂತೋಷ್ ಶೆಟ್ಟಿ ಇದೀಗ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದರು. ಆ ಹೊಸ ಚಿತ್ರಕ್ಕೆ ಫೋಟೋ ಶೂಟ್ ಮಾಡಲು ಮುಂದಾಗಿದ್ದೇ ಅವರ ಪ್ರಾಣಕ್ಕೆ ಮುಳ್ಳಾಯಿತು.

  ಕುಂಭದ್ರೋಣ ಮಳೆ-ನೆರೆಗೆ ತತ್ತರಿಸಿ ಹೋಯಿತು ಮಂಗಳೂರು!

  ಇಂದು ಮುಂಜಾನೆ ಫೋಟೋಶೂಟ್

  ಇಂದು ಮುಂಜಾನೆ ಫೋಟೋಶೂಟ್

  ತಮ್ಮ ಹೊಸ ಚಿತ್ರಕ್ಕಾಗಿ ಫೋಟೋಶೂಟ್ ನಡೆಸಲು ಎರ್ಮಾಯಿ ಫಾಲ್ಸ್ ಗೆ ಸಂತೋಷ್ ಶೆಟ್ಟಿ ಸೇರಿದಂತೆ ಒಟ್ಟು ಐವರ ತಂಡ ಇಂದು ಮುಂಜಾನೆ ಭೇಟಿ ಕೊಟ್ಟಿತ್ತು. ಫೋಟೋಶೂಟ್ ನಡೆಯುತ್ತಿದ್ದ ವೇಳೆ ಬಂಡೆಗಳ ಮೇಲೆ ನಿಂತಿದ್ದ ಸಂತೋಷ್ ಕಾಲು ಜಾರಿ ನೀರುಪಾಲಾಗಿದ್ದಾರೆ.

  ಮಂಗಳೂರು: ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ವಿತರಣೆ

  ಎರ್ಮಾಯಿ ಫಾಲ್ಸ್

  ಎರ್ಮಾಯಿ ಫಾಲ್ಸ್

  ಬೆಳ್ತಂಗಡಿ ವ್ಯಾಪ್ತಿಯ ಚಾರ್ಮಡಿ ಅರಣ್ಯ ವ್ಯಾಪ್ತಿಯಲ್ಲಿ ಬರುವ ಜಲಪಾತ ಎರ್ಮಾಯಿ. ಫೋನ್ ನೆಟ್ ವರ್ಕ್ ಕೂಡ ಸಿಗದ ರುದ್ರ ರಮಣೀಯ ತಾಣ ಈ ಎರ್ಮಾಯಿ ಫಾಲ್ಸ್. ಇಂತಿಪ್ಪ ಜಾಗದಲ್ಲಿ ಸಾಹಸ ಮಾಡಲು ಹೋಗಿ ಜಲಸಮಾಧಿ ಆಗಿದ್ದಾರೆ ಸಂತೋಷ್ ಶೆಟ್ಟಿ.

  ನೀರಿನ ರಭಸ ಜೋರಾಗಿತ್ತು.!

  ನೀರಿನ ರಭಸ ಜೋರಾಗಿತ್ತು.!

  ನಿನ್ನೆ ಇಡೀ ದಿನ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸುರಿದ ಭಾರಿ ಮಳೆಯ ಪರಿಣಾಮ, ಎರ್ಮಾಯಿ ಫಾಲ್ಸ್ ನಲ್ಲಿ ನೀರಿನ ರಭಸ ಜೋರಾಗಿತ್ತು. ನೀರಿನ ಹರಿವು ಹೆಚ್ಚಾಗಿದ್ದ ಕಾರಣ ಕಾಲು ಜಾರಿ ಬಿದ್ದಿದ್ದಾರೆ ಸಂತೋಷ್ ಶೆಟ್ಟಿ. ಅಗ್ನಿಶಾಮಕ ದಳ ಶೋಧ ನಡೆಸಿದ ಬಳಿಕ ಸಂತೋಷ್ ಶೆಟ್ಟಿ ಮೃತದೇಹ ಪತ್ತೆಯಾಗಿದೆ. ಮಂಗಳೂರಿನ ಮಹಾ ಮಳೆಗೆ ಇದು ಮೂರನೇ ಬಲಿ.

  English summary
  Kanasu Film Director Santhosh Shetty died after a slip at Ermai Falls in Belthangady of Dakshina Kannada District, Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X