»   » ಕಾರು ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಆದಿತ್ಯ

ಕಾರು ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಆದಿತ್ಯ

Posted By:
Subscribe to Filmibeat Kannada

ನಟ ಆದಿತ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ಗಂಡಾಂತರದಿಂದ ತಪ್ಪಿಸಿಕೊಂಡಿದ್ದಾರೆ. ಕಾರು ಅಪಘಾತದಲ್ಲಿ ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ.

ಹೌದು, ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪುತ್ರ ನಟ ಆದಿತ್ಯ ಫಾರ್ಚ್ಯುನರ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು. ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಅಚಾನಕ್ಕಾಗಿ i10 ಕಾರ್ ಎದುರಿಗೆ ಬಂದಿದೆ ಅಷ್ಟೆ. ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ.

aditya

ಎರಡು ಕಾರುಗಳು ಜಖಂ ಆಗಿದ್ದರೂ, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಎದುರಾಗಿಲ್ಲ. ನಟ ಆದಿತ್ಯಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಅಷ್ಟೆ. ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ. [ನಟ ಜೈ ಜಗದೀಶ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ]

ನಟ ಆದಿತ್ಯ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಅಂತ ಅವರ ಕುಟುಂಬದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಸ್ಯಾಂಡಲ್ ವುಡ್ ಗಿಂತ ಕಾಲಿವುಡ್ ನಲ್ಲೇ ನಟ ಆದಿತ್ಯ ಬಿಜಿಯಾಗಿದ್ದರು. ಅವರು ವಿಲನ್ ಆಗಿ ಅಭಿನಯದ 'ವಾಲು' ಸಿನಿಮಾ ಹಿಟ್ ಆಗಿತ್ತು.

English summary
Kannada Actor Aditya of 'Deadly Soma' fame escaped a deadly road accident in Bengaluru. Aditya was travelling in a Fortuner Car and it has been crashed to the opposite i10 car at Anil Kumble circle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada