»   » ಸ್ಯಾಂಡಲ್‌ವುಡ್ 'ಕನಸುಗಾರ'ನಿಗೆ 56ನೇ ಜನುಮದಿನ ಸಂಭ್ರಮ

ಸ್ಯಾಂಡಲ್‌ವುಡ್ 'ಕನಸುಗಾರ'ನಿಗೆ 56ನೇ ಜನುಮದಿನ ಸಂಭ್ರಮ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ 'ದಿ ಶೋ ಮ್ಯಾನ್' ಎಂದೇ ಪ್ರಖ್ಯಾತಿ ಪಡೆದಿರುವ 'ರಣಧೀರ' ರವಿಚಂದ್ರನ್ ರವರಿಗಿಂದು 56ನೇ ಹುಟ್ಟುಹಬ್ಬ ಸಂಭ್ರಮ.[ರವಿಚಂದ್ರನ್ ಅವರನ್ನ 'ಏಕಾಂಗಿ' ಮಾಡಿದ್ದು ದರ್ಶನ್ ಅಂತೆ..!]

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ದಿವಂಗತ ಎನ್ ವೀರಸ್ವಾಮಿ ಮತ್ತು ಪಟ್ಟಮ್ಮಲ್ ರವರ ಮಗನಾಗಿ ರವಿಚಂದ್ರನ್ ಮೇ 30, 1961 ರಲ್ಲಿ ಜನಿಸಿದರು. ಇಂದಿಗೆ ಅವರು 56 ವರ್ಷಗಳನ್ನು ಪೂರೈಸಿದ್ದು 57ನೇ ವಸಂತಕ್ಕೆ ಕಾಲಿಡಲಿದ್ದಾರೆ. 1982 ರಲ್ಲಿ ತೆರೆಕಂಡ 'ಖದೀಮ ಕಳ್ಳರು' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ವಿ.ರವಿಚಂದ್ರನ್ ರವರು 36 ವರ್ಷಗಳನ್ನು ಸಿನಿಮಾ ಕ್ಷೇತ್ರದಲ್ಲಿ ಪೂರೈಸಿದ್ದು, ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ವಿಶೇಷ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.

Kannada Actor Ravichandran celebrates his 56th birthday

ಸ್ಯಾಂಡಲ್ ವುಡ್ ನ 'ಪ್ರೇಮಲೋಕ'ದ ಅಧಿಪತಿ ರವಿಚಂದ್ರನ್ ರವರ ಹುಟ್ಟುಹಬ್ಬದ ಪ್ರಯುಕ್ತ, ಅವರು ಸದ್ಯದಲ್ಲಿ ನಟಿಸುತ್ತಿರುವ 'ಸೀಜರ್', ದಶರಥ' ಮತ್ತು 'ಬಕಾಸುರ' ಚಿತ್ರತಂಡದವರು ವಿಶೇಷ ರೀತಿಯ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಜನುಮದಿನ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೇ ಇತರೆ ಸ್ಯಾಂಡಲ್ ವುಡ್ ತಾರೆಯರು ಶುಭಾಶಯಗಳನ್ನು ತಿಳಿಸಿದ್ದಾರೆ.

Kannada Actor Ravichandran celebrates his 56th birthday 1

ಅಂದಹಾಗೆ 'ಸೀಜರ್' ಚಿತ್ರತಂಡ ರವಿಚಂದ್ರನ್ ರವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಟೀಸರ್ ಸಹ ಬಿಡುಗಡೆ ಮಾಡಲಿದೆ. ತಮ್ಮ ವಿಭಿನ್ನ ಮ್ಯಾನರಿಸಂ ಮತ್ತು ವಿಭಿನ್ನ ಗೆಟಪ್ ಗಳಲ್ಲಿ ಅಭಿನಯಿಸುವ ಮೂಲಕ 'ದಿ ಶೋ ಮ್ಯಾನ್' ಎಂದು ಹೆಸರು ಪಡೆದಿರುವ ವಿ.ರವಿಚಂದ್ರನ್ ರವರಿಗೆ ಫಿಲ್ಮಿಬೀಟ್ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.[ದರ್ಶನ್ 'ಕುರುಕ್ಷೇತ್ರ'ದಲ್ಲಿ ಶ್ರೀ ಕೃಷ್ಣನ ಪಾತ್ರ ಸೇಲ್ ಆಗೋಯ್ತು!]

English summary
Kannada Actor Ravichandran celebrating his 56th birthday today(may 30th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada