»   »  ಶೂಟಿಂಗ್ ವೇಳೆ ಅವಘಡ: ನಟಿ ರಾಗಿಣಿ ಕಣ್ಣಿಗೆ ಪೆಟ್ಟು

ಶೂಟಿಂಗ್ ವೇಳೆ ಅವಘಡ: ನಟಿ ರಾಗಿಣಿ ಕಣ್ಣಿಗೆ ಪೆಟ್ಟು

Posted By:
Subscribe to Filmibeat Kannada

ಚಿತ್ರೀಕರಣದ ವೇಳೆ ಅದೆಷ್ಟೇ ಜಾಗರೂಕತೆ ವಹಿಸಿದರೂ, ಕೆಲವೊಮ್ಮೆ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇರುತ್ತೆ. ದುರ್ಘಟನೆಯಿಂದಾಗಿ ಎರಡು ಜೀವಗಳನ್ನ ಕಳೆದುಕೊಂಡಿರುವ ಉದಾಹರಣೆ ಇನ್ನೂ ಕಣ್ಣು ಮುಂದೆಯೇ ಇರುವಾಗಲೇ ಮತ್ತೊಂದು ಅವಘಡ ಸ್ಯಾಂಡಲ್ ವುಡ್ ನಲ್ಲಿ ನಡೆದಿದೆ.

ನಟಿ ರಾಗಿಣಿ ಅಭಿನಯದ ಹೊಸ ಸಿನಿಮಾ 'ಎಂ.ಎಂ.ಸಿ.ಎಚ್'. ಈ ಚಿತ್ರದ ಚಿತ್ರೀಕರಣದ ವೇಳೆ ನಟಿ ರಾಗಿಣಿ ಕಣ್ಣಿಗೆ ಪೆಟ್ಟಾಗಿ ಚಿತ್ರೀಕರಣವನ್ನ ಸ್ಥಗಿತಗೊಳಿಸಲಾಗಿದೆ.

 Kannada Actress Ragini Dwivedi injured at 'MMCH' shooting place

ನಗರದ ಮಿನರ್ವ ಮಿಲ್ ನಲ್ಲಿ 'ಎಂ.ಎಂ.ಸಿ.ಎಚ್' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಚಿತ್ರೀಕರಣದ ವೇಳೆ ರಾಗಿಣಿ ಕಣ್ಣಿಗೆ ಪೆಟ್ಟಾಗಿದೆ. ಸ್ಟಂಟ್ ಮಾಸ್ಟರ್ ಕೌರವ ವೆಂಕಟೇಶ್ ರವರ ನಿರ್ದೇಶನದಲ್ಲಿ ಇಂದು ಸಾಹಸ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿತ್ತು.

ಫೈಟಿಂಗ್ ಸೀನ್ ನಲ್ಲಿ ರಾಗಿಣಿ ಕೆನ್ನೆಗೆ ಪಂಚ್ ಮಾಡುವ ಸಮಯದಲ್ಲಿ ರಾಗಿಣಿ ಕೆನ್ನೆಗೆ ಪೆಟ್ಟಾಗಿ ಕುಸಿದು ಬಿದ್ದಿದ್ದಾರೆ. ಸದ್ಯ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದುಕೊಳ್ಳುತ್ತಿರುವ ನಟಿ ರಾಗಿಣಿ ಎರಡು ದಿನಗಳ ನಂತರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

 Kannada Actress Ragini Dwivedi injured at 'MMCH' shooting place

'ಎಂ.ಎಂ.ಸಿ.ಎಚ್' ಚಿತ್ರವನ್ನ ಮುಸ್ಸಂಜೆ ಮಹೇಶ್ ನಿರ್ದೇಶನ ಮಾಡುತ್ತಿದ್ದು ರಾಗಿಣಿ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

English summary
Mishap at Kannada Movie 'MMCH' shooting spot. Kannada Actress Ragini Dwivedi gets injured.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada