»   » 'ಗಂಡ ಹೆಂಡತಿ' ಸಂಜನಾ ಮಾಲಿವುಡ್ ಎಂಟ್ರಿ

'ಗಂಡ ಹೆಂಡತಿ' ಸಂಜನಾ ಮಾಲಿವುಡ್ ಎಂಟ್ರಿ

Posted By:
Subscribe to Filmibeat Kannada

ಕನ್ನಡದ ಮಾದಕ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ 'ದಂಡುಪಾಳ್ಯ 2' ಚಿತ್ರದಲ್ಲಿ ಡಿಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಬಗ್ಗೆ ಸುದ್ದಿಯಲ್ಲಿದ್ದರು. ಈಗ ಸಡೆನ್ ಆಗಿ ಸಂಜನಾ ಮಾಲಿವುಡ್ ಗೆ ಎಂಟ್ರಿ ಕೊಟ್ಟು ಅಲ್ಲಿ ಮಿಂಚುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.['ಮಂಡ್ಯ ಟು ಮುಂಬೈ' ನಾಯಕಿಯರ ಬೀದಿ ರಂಪಾಟಕ್ಕೆ ಕಾರಣವೇನು!]

ಹೌದು, ಸಂಜನಾ ಗಲ್ರಾನಿ ಮಾಲಿವುಡ್ ಗೆ ಮತ್ತೆ ಎಂಟ್ರಿ ಕೊಟ್ಟು ಮಲಯಾಳಂ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಂಜನಾಗೆ ಅಷ್ಟೊಂದು ಓಪನಿಂಗ್ ಇಲ್ಲದ ಕಾರಣ ಅವರು ಮತ್ತೆ ಮಾಲಿವುಡ್ ನಲ್ಲಿ ನಟಿಸಲು ಕಾರಣವಂತೆ. ಅಂದಹಾಗೆ ಈ ಕನ್ನಡದ ನಟಿ ಮಾಲಿವುಡ್ ನಲ್ಲಿ ನಟಿಸುತ್ತಿರುವ ಚಿತ್ರವಾದರೂ ಯಾವುದು, ಅವರ ಪಾತ್ರ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ..

ಪ್ರೇಮ ಕಥೆಯಲ್ಲಿ ಸಂಜನಾ

ಕನ್ನಡದ ಮಾದಕ ನಟಿ ಸಂಜನಾ ಗಲ್ರಾನಿ ಮಾಲಿವುಡ್ ನಲ್ಲಿ ಪ್ರೇಮ ಕಥೆ ಇರುವ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.['ದಂಡುಪಾಳ್ಯ' ಗ್ಯಾಂಗ್ ನಲ್ಲಿ ಪತ್ತೆಯಾದ ಸಂಜನಾ ಗಲ್ರಾನಿ]

ಸಂಜನಾ ನಟಿಸುತ್ತಿರುವ ಸಿನಿಮಾ ಹೆಸರೇನು?

ನಟಿ ಸಂಜನಾ ಅಭಿನಯಿಸುತ್ತಿರುವ ಮಲಯಾಳಂ ಸಿನಿಮಾ ದ ಹೆಸರು 'ಜನ್ನತ್'. ಈ ಚಿತ್ರಕ್ಕೆ ಆರ್.ಎ.ಶರೀಫ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸಂಜನಾ ನಟಿಸಿದ ಮಲಯಾಳಂ ಸಿನಿಮಾಗಳು

ಅಂದಹಾಗೆ ಸಂಜನಾ ಗಲ್ರಾನಿ ಈ ಹಿಂದೆಯೂ ಸಹ ಮಲಯಾಳಂ ಸಿನಿಮಾ ಗಳಲ್ಲಿ ನಟಿಸಿದ್ದಾರೆ. ಇದಕ್ಕೂ ಮೊದಲು 2012 ರಲ್ಲಿ ಮೋಹನ್ ಲಾಲ್ ಜೊತೆ 'ಕ್ಯಾಸಿನೋವಾ' ಚಿತ್ರದಲ್ಲಿ ನಟಿಸಿದ್ದರು. ಅಲ್ಲದೇ 'ದಿ ಕಿಂಗ್' ಮತ್ತು 'ಕಮಿಷನರ್ ಬ್ಯಾಕ್' ಎಂಬ ಚಿತ್ರಗಳಲ್ಲಿ ಮುಮ್ಮಟ್ಟಿ ಜತೆ ನಟಿಸಿದ್ದಾರೆ.

ಅಲೆಮಾರಿ ಹುಡುಗಿ ಸಂಜನಾ

'ಜನ್ನತ್' ಸಿನಿಮಾ ದಲ್ಲಿ ನಟಿ ಸಂಜನಾ ಅಲೆಮಾರಿ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಬಾರಿ ಯೋಡಿಯ ಮ್ಯುಸಿಕಲ್ ಲವ್ ಸ್ಟೋರಿ ಇರುವ ಈ ಚಿತ್ರದಲ್ಲಿ ಅಬ್ದುಲ್ ಹೀರೊ.

ತೆಲುಗು ಭಾಷೆಯಲ್ಲೂ ಸಂಜನಾ ಆಕ್ಟಿಂಗ್

ಮತ್ತೆ ಮಲಯಾಳಂ ಚಿತ್ರಕ್ಕೆ ಎಂಟ್ರಿ ಕೊಟ್ಟಿರುವುದಕ್ಕೆ ಖುಷಿ ಆಗಿರುವ ಸಂಜನಾ, ಟಾಲಿವುಡ್ ಗೂ ಸಹ ಕಾಲಿಟ್ಟಿದ್ದಾರೆ. ತೆಲುಗಿನ 'ಹ್ಯಾಪಿ ಬರ್ತ್ ಡೇ' ಎಂಬ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

ದಂಡುಪಾಳ್ಯ ಸೀರೀಸ್ ನಲ್ಲಿ ಸಂಜನಾ

ಕನ್ನಡದಲ್ಲಿ ಸಂಜನಾ ದಂಡುಪಾಳ್ಯ 2 ಮತ್ತು ದಂಡುಪಾಳ್ಯ 3 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯದಲ್ಲಿ ಸೆಲೆಬ್ರಿಟಿ ಟೂರ್ನಮೆಂಟ್ ನಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

English summary
Kannada Actress Sanjana Galrani has been acting in Mollywood Movie 'Jannath'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X