Don't Miss!
- Sports
ಭಾರತ vs ನ್ಯೂಜಿಲೆಂಡ್: ನಿರ್ಣಾಯಕ ಟಿ20 ಪಂದ್ಯಕ್ಕೆ ಅಡ್ಡಿಯಾಗಲಿದೆಯಾ ಮಳೆ?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ನೋಡಿ ಸೆಲೆಬ್ರೆಟಿಗಳ ಪ್ರತಿಕ್ರಿಯೆ ಏನು?
ಸ್ಯಾಂಡಲ್‌ವುಡ್‌ನಲ್ಲಿ ಬೆರಗು ಮೂಡಿಸುವ ಸಿನಿಮಾ ರಿಲೀಸ್ ಆಗುತ್ತಿವೆ. ಫಿಲ್ಮ್ ಮೇಕರ್ಸ್ ಟೈಟಲ್‌ನಿಂದಲೇ ಸಿನಿಪ್ರಿಯರನ್ನು ಹಿಡಿದಿಡೋಕೆ ಮುಂದಾಗುತ್ತಿದ್ದಾರೆ. ಅದರಲ್ಲೊಂದು ಸಿನಿಮಾ 'ಧರಣಿ ಮಂಡಲ ಮಧ್ಯದೊಳಗೆ'. ಅಪ್ಪಟ ಕನ್ನಡ ಶೀರ್ಷಿಕೆಯ ಇರುವ ಈ ಸಿನಿಮಾ ಇಂದು (ಡಿಸೆಂಬರ್ 02) ರಿಲೀಸ್ ಆಗಿದೆ.
'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಸದ್ಯ ರಿಲೀಸ್ ಆಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹೊಸ ತಂಡ. ಹೊಸ ಕಥೆ, ಹೊಸ ಸ್ಕ್ರೀನ್ ಪ್ಲೇ ಎಲ್ಲವೂ ಸಹಜವಾಗಿಯೇ ಗಮನ ಸೆಳೆಯುತ್ತಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಹೊಸ ಪ್ರಯತ್ನ ಎಂದೇ ಹೇಳಲಾಗುತ್ತಿದೆ.
ದಾವಣಗೆರೆಯಲ್ಲಿ
'ತ್ರಿಬಲ್
ರೈಡಿಂಗ್'
ತಂಡ:
ಪ್ರೇಕ್ಷಕರಲ್ಲಿ
ಮಾಡಿದರು
ಮನವಿ
ಈ ವಿಶಿಷ್ಟ ಸಿನಿಮಾವನ್ನು ನೋಡಿದ ಸೆಲೆಬ್ರೆಟಿಗಳು ಏನಂದ್ರು? 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾದ ಹೈಲೈಟ್ ಏನು? ಯಾರಿಗೆ ಸಿನಿಮಾದೊಳಗೆ ಏನೇನು ಇಷ್ಟ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಪ್ರಮೋದ್ ಶೆಟ್ಟಿ ಹೇಳಿದ್ದೇನು?
"ನಾನು ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಏನೂ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಬಂದ ಸಿನಿಮಾ. ನನಗೆ ಉಳಿದರು ಕಂಡಂತೆ ಆದ್ಮೇಲೆ ಇಷ್ಟು ಅದ್ಭುತವಾದ ಒಂದು ಸ್ಕ್ರೀನ್ ಪ್ಲೇಯನ್ನು ನಾನು ನೋಡಿರಲಿಲ್ಲ. ಇಂತಹ ಟ್ವಿಸ್ಟ್ ಅಂಡ್ ಟರ್ನ್ ಇರುವ ಸಿನಿಮಾನೂ ನೋಡಿಲ್ಲ. ಡೈರೆಕ್ಟರ್ ಶ್ರೀಧರ್ ಉತ್ತಂಡ ನಮಸ್ಕಾರ ಹೇಳುತ್ತೇನೆ. ಇವತ್ತು ನಾವು ಮಾತಾಡುತ್ತಿದ್ದೇವೆ ಅಂತ ಸಿನಿಮಾಗೆ ಬರಬೇಡಿ. ಸಿನಿಮಾಗೆ ಬಂದ್ಮೇಲೆ ಅದರ ಬೆಲೆ ಗೊತ್ತಾಗುತ್ತೆ." ಪ್ರಮೋದ್ ಶೆಟ್ಟಿ ಹೇಳಿದ್ದಾರೆ.

ದಿಲೀಪ್ ರಾಜ್ ಪ್ರತಿಕ್ರಿಯೆ ಏನು?
" ಮಾರ್ಕ್ಸ್ ಕೊಡಬೇಕು ಅಂದರೆ, ಫಸ್ಟ್ ಸ್ಕ್ರೀನ್ ಪ್ಲೇಗೆ ಕೊಡುತ್ತೇನೆ. ತುಂಬಾ ಇಂಟಲಿಜೆಂಟ್ ಆಗಿ ಮಾಡಿದ್ದಾರೆ. ಎಷ್ಟೇ ಇಂಟಲಿಜೆಂಟ್ ಆಗಿ ಮಾಡಿದರೂ ನೋಡುಗರಿಗೆ ತುಂಬಾ ಸಿಂಪಲ್ ಆಗಿ ಅರ್ಥ ಆಗುವಂತಹ ಕಥೆಗಳನ್ನು ಇಟ್ಕೊಂಡು ಹೆಣೆದು ಟ್ವಿಸ್ಟ್ ಅಂಡ್ ಟರ್ನ್ ಕೊಟ್ಟಿದ್ದಾರೆ. ಸಿನಿಮಾ ಬೇಕಿರೋದು ಅದೇನೆ. ನಾವು ನೀರಿಕ್ಷೆ ಮಾಡಿದ್ದು ಅಲ್ಲಿ ಇರಬಾರದು. ಆ ವಿಚಾರದಲ್ಲಿ ಸ್ಟೋರಿ ಹಾಗೂ ಸ್ಕ್ರೀನ್ ಪ್ಲೇನಲ್ಲಿ ಗೆದ್ದಿದ್ದಾರೆ. ಡೈರೆಕ್ಷನ್ ನೀಟ್ ಆಗಿದೆ." ದಿಲೀಪ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಜೇಶ್ ನಟರಂಗ ರಿಯಾಕ್ಷನ್ ಏನು?
"ಹೊಸಬರ ಕಂಟೆಂಟ್. ಹೊಸ ತರಹದ ಕಂಟೆಂಟ್. ಹೊಸ ರೀತಿ ಕಥೆ ಹೇಳೋದು ಎಲ್ಲಾ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದೆ. ಸಕ್ಸಸ್ ಅನ್ನೋ ಕೋ ಇನ್ಸಿಡೆನ್ಸ್ ಆಗದೆ ಇರಲಿ. ಆರ್ಗಾನಿಕ್ ಆಗಿಯೇ ಗೆಲ್ಲಲಿ. ನನಗೆ ಮುಖ್ಯವಾಗಿ ನವೀನ್ ತುಂಬಾ ಅದ್ಭುತವಾಗಿ ನಟಿಸಿದ್ದಾನೆ ಅಂತ ಅನಿಸಿತು. ಶ್ರೀಧರ್ ಅವರು ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಏನೇ ಓರೆ ಕೊರೆಗಳಿದ್ದರೂ ಬಹಳ ಒಳ್ಳೆ ಸಿನಿಮಾ ಆಗಿದೆ ಅನ್ನೋದು ಅಚಲವಾದ ನಂಬಿಕೆ." ಅನ್ನೋದ ರಾಜೇಶ್ ನಟರಂಗ.

ಪಾವನಾ ಗೌಡ ಪ್ರತಿಕ್ರಿಯೆ
"ಟೈಟಲ್ ಕೇಳಿದಾಗಲೇ ತುಂಬಾ ಇಂಟ್ರೆಸ್ಟಿಂಗ್ ಅಂತ ಅನಿಸಿತ್ತು. ಇನ್ನು ಪೋಸ್ಟರ್ ನೋಡಿದಾಗಲೂ ಇಂಟ್ರೆಸ್ಟಿಂಗ್ ಅನಿಸಿತ್ತು. ಟ್ರೈಲರ್, ಟೀಸರ್ ಎಲ್ಲವೂ ನೋಡಿದಾಗ ಪ್ರಾಮಿಸಿಂಗ್ ಆಗಿದೆ ಅನ್ನೋ ಭರವಸೆ ಮೂಡಿಸಿತ್ತು. ಸಿನಿಮಾ ನೋಡಿ ಪರ್ಫಾಮೆನ್ಸ್ ಬಗ್ಗೆ ಮಾತಾಡೋದಾ, ಸ್ಕ್ರೀನ್ ಪ್ಲೇ ಬಗ್ಗೆ ಮಾತಾಡೋದಾ? ಕ್ಲೈಮ್ಯಾಕ್ಸ್ ಬಗ್ಗೆ ಮಾತಾಡೋದಾ? ಸಿನಿಮಾ ತುಂಬಾನೇ ಇತ್ತು. ಒಂದು ಕಂಪ್ಲೀಟ್ ಸಿನಿಮಾವಿದು. " ಎಂದು ಪಾವನಾ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.