twitter
    For Quick Alerts
    ALLOW NOTIFICATIONS  
    For Daily Alerts

    ಜಾನಿ ಲಿವರ್ ಕನ್ನಡಕ್ಕೆ ಕರೆತಂದಿದ್ದ ನಿರ್ದೇಶಕ ಇನ್ನಿಲ್ಲ: ಬ್ರೈನ್ ಟ್ಯೂಮರ್ ಶಸ್ತ್ರ ಚಿಕಿತ್ಸೆ ಬಳಿಕ ಹೃದಯಾಘಾತ!

    |

    ಕೆ ಆರ್ ಮುರಳಿ ಕೃಷ್ಣ ವೃತ್ತಿಯಲ್ಲಿ ವಕೀಲರಾಗಿದ್ದರೂ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು. ಕನ್ನಡದಲ್ಲಿ 'ಗರ' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಕೆಲವು ದಿನಗಳ ಹಿಂದೆ ಸಿಟಿ ಸ್ಕ್ಯಾನ್ ಮಾಡಿದಾಗ ಬ್ರೈನ್ ಟ್ಯೂಮರ್ ಇರೋದು ಬೆಳಕಿಗೆ ಬಂದಿತ್ತು.

    ಬ್ರೈನ್ ಟ್ಯೂಮರ್ ಇರೋದು ತಡವಾಗಿ ಬೆಳಕಿಗೆ ಬಂದಿತ್ತು. ಕೂಡಲೇ ಬೆಂಗಳೂರಿನ ಲಾಲ್‌ಬಾಗ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆ ಫಲಕಾರಿಯಾಗಿದ್ದರೂ, ಕೆ ಆರ್ ಮುರಳಿ ಕೃಷ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ (ನವೆಂಬರ್ 14) ಸಂಜೆ 7.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

    Kannada Director K R Murali Krishna Diagnosed Brain Tumor Died Due To Heart Attack

    ಕೆ ಆರ್‌ ಮುರಳಿ ಕೃಷ್ಣ ಅವರ ಪಾರ್ಥೀವ ಶರೀರವನ್ನು ಅವರ ಸಹಕಾರ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಕೆಆರ್ ಮುರಳಿ ಕೃಷ್ಣ ಇಬ್ಬರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.

    Kannada Director K R Murali Krishna Diagnosed Brain Tumor Died Due To Heart Attack

    ಕೆ ಆರ್ ಮುರಳಿ ಕೃಷ್ಣ ವೃತ್ತಿಯಲ್ಲಿ ವಕೀಲರಾಗಿದ್ದರೂ, ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. 'ಗರ' ಸಿನಿಮಾಗಾಗಿ ಬಾಲಿವುಡ್‌ನ ಹಾಸ್ಯ ದಿಗ್ಗಜ ಜಾನಿ ಲಿವರ್ ಅನ್ನು ಅನ್ನು ಕನ್ನಡಕ್ಕೆ ಕರೆದುಕೊಂಡು ಬಂದಿದ್ದರು. 'ಸಣ್ಣ ಸತ್ಯ', 'ಗರ' ಸಿನಿಮಾ ನಿರ್ದೇಶಿಸಿದ್ದರೆ, 'ಬಾಳನೌಕೆ', 'ಕರ್ಣನ ಸಂಪತ್ತು', 'ಹೃದಯ ಸಾಮ್ರಾಜ್ಯ', 'ಮರಳಿ ಗೂಡಿಗೆ' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

    English summary
    Kannada Director K R Murali Krishna Diagnosed Brain Tumor Died Due To Heart Attack, Know More.
    Tuesday, November 15, 2022, 10:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X