For Quick Alerts
  ALLOW NOTIFICATIONS  
  For Daily Alerts

  'ಕೈ' ಹಿಡಿದು ರಾಜಕೀಯ ಪ್ರವೇಶಿಸಿದ 'ಚೆಲುವಿನ ಚಿತ್ತಾರ'ದ ನಿರ್ದೇಶಕ ಎಸ್ ನಾರಾಯಣ್

  |

  ರಾಜಕೀಯಕ್ಕೂ ಚಿತ್ರರಂಗಕ್ಕೂ ಬಿಡಿಸಲಾರದ ಹಳೆ ನಂಟಿದೆ. ಸಿನಿಮಾ ಮಂದಿ ರಾಜಕೀಯದಲ್ಲೂ, ರಾಜಕೀಯ ಮುಖಂಡರು ಸಿನಿಮಾದಲ್ಲೂ ಕಾಣಿಸಿಕೊಳ್ಳುವುದು ಹೊಸ ವಿಷಯವೇನಲ್ಲ. ಈಗಾಗಲೇ ಕನ್ನಡ ಚಿತ್ರರಂಗದ ನಟ-ನಟಿಯರು ರಾಜಕೀಯ ಪಕ್ಷಗಳಲ್ಲಿ ತಮ್ಮ ಹೆಸರನ್ನು ಗುರುತಿಸಿಕೊಂಡಿದ್ದಾರೆ. ಈಗ ಆ ಸಾಲಿಗೆ ಸ್ಯಾಂಡ್‌ವುಡ್‌ನ ಹಿರಿಯ ನಿರ್ದೇಶಕ ಎಸ್‌. ನಾರಾಯಣ್ ಕೂಡ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ.

  Recommended Video

  S Narayan | ಸೆಲ್ಫಿ ವೀಡಿಯೊ ಮಾಡುತ್ತಲೇ ತನ್ನ ನೋವು ಹಂಚಿಕೊಂಡ ಎಸ್‌. ನಾರಾಯಣ್ | Filmibeat Kannada

  ಇಂದು(ಮಾರ್ಚ್ 16) 'ಚೆಲುವಿನ ಚಿತ್ತಾರ'ದ ನಿರ್ದೇಶಕ ಎಸ್‌ ನಾರಾಯಣ್ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರೊಂದಿಗೆ ಪಕ್ಷ ಸೇರಿದ್ದಾರೆ. ಈ ಮೂಲಕ ಅಧಿಕೃತವಾಗಿ ಎಸ್ ನಾರಾಯಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಂತಾಗಿದೆ.

  ಕನ್ನಡ ಚಿತ್ರರಂಗದಲ್ಲಿ ಸುಮಾರು 40 ವರ್ಷಗಳಿಂದ ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ ಎಸ್ ನಾರಾಯಣ್ ಗುರುತಿಸಿಕೊಂಡಿದ್ದಾರೆ.

  ಸ್ಯಾಂಡಲ್‌ವುಡ್‌ನಲ್ಲಿ ಶಿಸ್ತಿನ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ಎಸ್‌ ನಾರಾಯಣ್ 'ಚೈತ್ರದ ಪ್ರೇಮಾಂಜಲಿ', 'ಸೂರ್ಯವಂಶ', 'ಚೆಲುವಿನ ಚಿತ್ತಾರ'ದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಗಳಿಸಿರುವ ಎಸ್ ನಾರಾಯಣ್ ರಾಜಕೀಯದಲ್ಲೂ ಯಶಸ್ಸು ಕಾಣುತ್ತಾರಾ? ಅನ್ನುವ ಕುತೂಹಲವಿದೆ.

  Kannada Director S Narayan Joins Congress in Front of DK Shivakumar
  English summary
  Kannada director S Narayan joins congress in front of DK Shivakumar.
  Wednesday, March 16, 2022, 12:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X