»   » ಡಬ್ಬಿಂಗ್ ವಿರುದ್ಧ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ

ಡಬ್ಬಿಂಗ್ ವಿರುದ್ಧ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಯಾವುದೇ ಕಾರಣಕ್ಕೂ ಡಬ್ಬಿಂಗ್ ಮಾಡಲು ಅವಕಾಶ ನೀಡುವುದಿಲ್ಲ, ನಾವು ಶತಯಾ ಗತಯಾ ಡಬ್ಬಿಂಗ್ ತಡೆಯುತ್ತೇವೆ ಎಂದು ಚಲನಚಿತ್ರ ನಿರ್ದೇಶಕರ ಸಂಘ ಹಾಗೂ ಡಾ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಯಶಸ್ವಿಯಾಗಿ ಮೌನ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಡಾ.ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಸಮಾಧಿ ಬಳಿಯಲ್ಲೇ ಕುಳಿತು ಧರಣಿ ಸತ್ಯಾಗ್ರಹ ಆರಂಭಿಸಿದರು.[ಡಬ್ಬಿಂಗ್, ಪೂರಕವೇ ಮಾರಕವೇ ಜನರೇ ನಿರ್ಧರಿಸಲಿ]

ಸಾ.ರಾ.ಗೋವಿಂದು ಮಾತನಾಡಿ, ಡಬ್ಬಿಂಗ್ ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ಚಲನಚಿತ್ರ ಕಾರ್ಮಿಕರ ಒಕ್ಕೂಟ, ಕಿರುತೆರೆ ಕಲಾವಿದರು, ಹಲವು ನಟರು ಕೈಜೋಡಿಸಿದ್ದು, ಚಳವಳಿಗೆ ಹೆಚ್ಚಿನ ಬಲ ಬಂದಿದೆ. [ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದಕ್ಕೆ ತೆರೆ]

ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಸುವ ಡಬ್ಬಿಂಗ್ ಸಂಸ್ಕೃತಿ ಕನ್ನಡ ಚಿತ್ರರಂಗಕ್ಕೆ ಸರಿಯಲ್ಲ. ಯಾವುದೇ ಕಾರಣಕ್ಕೂ ನಾಡಿನಲ್ಲಿ ಡಬ್ಬಿಂಗ್‌ಗೆ ಅವಕಾಶ ನೀಡುವುದಿಲ್ಲ ಎಂದರು.

ಡಾ.ರಾಜ್ ಕುಮಾರ್ ಸಮಾಧಿಯಿಂದ ಆರಂಭವಾಗಿರುವ ಡಬ್ಬಿಂಗ್ ಸಂಸ್ಕೃತಿ ವಿರೋಧದ ಮೌನ ಪ್ರತಿಭಟನೆ ಉತ್ತರಹಳ್ಳಿ ಬಳಿಯ ಮೈಲಸಂದ್ರದಲ್ಲಿರುವ ಡಾ.ವಿಷ್ಣುವರ್ಧನ್ ಸಮಾಧಿಗೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡವರು

ನಿರ್ದೇಶಕ ಪಿ ಶೇಷಾದ್ರಿ, ಹುಣಸೂರ್ ಯೋಗೇಶ್, ನಟ, ನಿರ್ದೇಶಕ ರವಿ ಶ್ರೀವತ್ಸ, ಸಾಹಿತಿಗಳಾದ ಮಳವಳ್ಳಿ ಸಾಯಿಕೃಷ್ಣ, ಡಾ.ವಿ.ನಾಗೇಂದ್ರ ಪ್ರಸಾದ್, ನಟ ಶರಣ್, ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್, ನಿರ್ಮಾಪಕ ಉಮೇಶ್ ಬಣಕಾರ್ ಮುಂತಾದವರು.

ಬಾಹುಬಲಿ ಅಪ್ಪನಂಥಾ ಚಿತ್ರ ಮಾಡ್ತೀವಿ

ಬಾಹುಬಲಿ ಅಪ್ಪನಂಥಾ ಚಿತ್ರ ಮಾಡ್ತೀವಿ. ಆದರೆ ನಮಗೆ ಅವು ಎಟುಕಲ್ಲಾ. ಮೊದಲು ಬೇರೆ ಭಾಷೆ ಚಿತ್ರಗಳು ಇಲ್ಲಿಗೆ ಬರೋದನ್ನು ನಿಲ್ಲಿಸಿ.

ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಯ ಸಂಖ್ಯೆಯ ಮೇಲಿದ್ದ ನಮ್ಮ ನಿಯಂತ್ರಣ ತಪ್ಪಿಸಿದ ಸಿಸಿಐ ಗೆ ನಮ್ಮ ಮಾರುಕಟ್ಟೆ ಎಷ್ಟು ಚಿಕ್ಕದು ಎನ್ನುವ ಅರಿವಿಲ್ಲಾ... ಇವರ ತೀರ್ಪನ್ನು ಒಪ್ಪಲ್ಲಾ..

ಮೇಲಿನ ನ್ಯಾಯಾಲಯಕ್ಕೆ ಹೋಗ್ತೀವಿ

ಮೇಲಿನ ನ್ಯಾಯಾಲಯಕ್ಕೆ ಹೋಗ್ತೀವಿ. ನಾವು ಸಂವಿಧಾನಕ್ಕೆ ಬದ್ಧರಾಗಿರ್ತೀವಿ. ಡಬ್ಬಿಂಗ್ ನ ಯಾವ ಕಾರಣಕ್ಕೂ ಬಿಡಲ್ಲಾ.. ಆಗಸ್ಟ್ 8ನೇ ತಾರೀಕು ಮುಂದಿನ ಹೋರಾಟ ತಿಳುಸ್ತೀವಿ... ಅವತ್ತು ನಾವು ಏನು ಮಾಡಕ್ಕೂ ಸಿದ್ಧರಾಗ್ತೀವಿ... ನೋಡ್ತಾಯಿರಿ.. -ಸಾರಾ ಗೋವಿಂದು

ಸಂಸ್ಕೃತಿಯ ಮೇಲೆ ದಬ್ಬಾಳಿಕೆ

ಕನ್ನಡ ಚಿತ್ರರಂಗ ಮತ್ತು ಕಲಾವಿದರು,ತಂತ್ರಜ್ಞರು ಸೇರಿದಂತೆ ನಾಡಿನ ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಸುವ ಡಬ್ಬಿಂಗ್ ಸಂಸ್ಕೃತಿ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಚಿತ್ರಕೃಪೆ: ಡಾ. ನಾಗೇಂದ್ರ ಪ್ರಸಾದ್, ಸ್ಥಳ :ಡಾ. ವಿಷ್ಣುವರ್ಧನ್ ಸಮಾಧಿ

English summary
Kannada Film Directors protest against Dubbing and CCI decision. Dr Rajkumar Fans Association and Karnataka Television Association (KTVA) and Kannada Film Producers Association (KFPA), cine artists observe silent protest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada