»   » ಕನ್ನಡ ಚಿತ್ರ 'ಲೂಸಿಯಾ' ಆನ್ ಲೈನ್ ನಲ್ಲಿ ಬಿಡುಗಡೆ

ಕನ್ನಡ ಚಿತ್ರ 'ಲೂಸಿಯಾ' ಆನ್ ಲೈನ್ ನಲ್ಲಿ ಬಿಡುಗಡೆ

Posted By:
Subscribe to Filmibeat Kannada

ಕನ್ನಡ ಚಿತ್ರ 'ಲೂಸಿಯಾ' ಈಗ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ಈಗಾಗಲೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಲವರು ಚಿತ್ರವನ್ನು ಕೊಂಡಾಡುತ್ತಿದ್ದರೆ ಇನ್ನೂ ಕೆಲವರು ಕೊಸರಾಡುತ್ತಿದ್ದಾರೆ. ಏತನ್ಮಧ್ಯೆ ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಆದರೆ ಈ ಸೇವೆ ಭಾರತದಲ್ಲಿ ಲಭ್ಯವಿಲ್ಲ. ಹೊರ ದೇಶದಲ್ಲಿರುವವರಿಗೆ ಮಾತ್ರ ಆನ್ ಲೈನ್ ನಲ್ಲಿ ಚಿತ್ರವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಈ ಸೇವೆ ಪಡೆಯಲು ಈ ಲಿಂಕ್ http://www.hometalkies.com/lucia/watch/ ಬಳಸಿಕೊಂಡು ಲಾಗಿನ್ ಆಗಬೇಕು.[ಲೂಸಿಯಾ ಚಿತ್ತ್ರ ವಿಮರ್ಶೆ]


ಅಲ್ಲಿನ ಸೂಚನೆಗಳನ್ನು ಫಾಲೋ ಮಾಡಿದರೆ ನೀವು ಕುಳಿತಲ್ಲೆ 'ಲೂಸಿಯಾ' ಚಿತ್ರವನ್ನು ಸವಿಯಬಹುದು. ಈ ಮೂಲಕ ಕನ್ನಡದ ಚಿತ್ರವೊಂದು ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ. ಹೊಸ ಜಮಾನಾ ಹಳೆ ಜಮಾನ ಚಿತ್ರಗಳಿಗೂ ಇದು ದಾರಿದೀಪವಾಗಬಹುದು.

ಇಂಗ್ಲಿಷ್ ಸಬ್ ಟೈಟಲ್ ನಲ್ಲಿರುವ ಆನ್ ಲೈನ್ ಪ್ರಿಂಟ್ ನ ಫೈಲ್ ಶೇರ್ ಮಾಡುವುದು ಶಿಕ್ಷಾರ್ಹ ಅಪರಾಧ. ಯಾವುದೇ ದೇಶದಲ್ಲಿ ನಿಯಮಗಳನ್ನು ಉಲ್ಲಂಟಿಸಿದರೂ ಕಾಪಿರೈಟ್ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಚಿತ್ರತಂಡ ಎಚ್ಚರಿಸಿದೆ.

ಇದೇ ರೀತಿಯ ಉದ್ದೇಶವನ್ನು 'ನಮ್ Life ಅಲ್ಲಿ' ಚಿತ್ರತಂಡವೂ ಹೊಂದಿದೆ. ಅವರು ತಮ್ಮ ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದಾರೆ. ಅಂದಹಾಗೆ 'ಲೂಸಿಯಾ' ಚಿತ್ರ ನಾಲ್ಕು ವಾರಗಳನ್ನು ಪೂರೈಸಿದೆ. (ಒನ್ಇಂಡಿಯಾ ಕನ್ನಡ)

English summary
Kannada film LUCIA released online. A must watch thriller which won Best film in London Film festival. The film is currently available outside India only. The film can be viewed in the theatres in India.
Please Wait while comments are loading...