»   » ಅಮೆರಿಕ ಹುಡುಗಿಯ ಭಾರತದ ಜರ್ನಿ 'ಶುದ್ಧಿ' ಸೆನ್ಸಾರ್ ಆಯ್ತು

ಅಮೆರಿಕ ಹುಡುಗಿಯ ಭಾರತದ ಜರ್ನಿ 'ಶುದ್ಧಿ' ಸೆನ್ಸಾರ್ ಆಯ್ತು

Posted By:
Subscribe to Filmibeat Kannada

ನಟಿ ನಿವೇದಿತಾ ಅಭಿನಯದ 'ಶುದ್ಧಿ' ಚಿತ್ರದ ಟ್ರೈಲರ್ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ನಿಂದ ಉತ್ತಮ ರೆಸ್ಪಾನ್ಸ್ ಪಡೆದಿತ್ತು. ಅಮೆರಿಕ ಹುಡುಗಿಯೊಬ್ಬಳ ಭಾರತದಲ್ಲಿನ ಸ್ಪಿರಿಚುವಲ್ ಜರ್ನಿ ಕುರಿತ ಈ ಚಿತ್ರವು ಈಗ ಸೆನ್ಸಾರ್ ನಿಂದ ಪಾಸ್ ಆಗಿದ್ದು 'A' ಪ್ರಮಾಣ ಪತ್ರ ಪಡೆದುಕೊಂಡಿದೆ.[ಯೂಟ್ಯೂಬ್ ಟ್ರೆಂಡಿಂಗ್ ಟಾಪ್ ನಲ್ಲಿ ಮಹಿಳಾ ಪ್ರಧಾನ 'ಶುದ್ಧಿ' ಟ್ರೈಲರ್]

ಅಮೆರಿಕನ್ ಹುಡುಗಿಯೊಬ್ಬಳು ಭಾರತದಲ್ಲಿನ ಇಬ್ಬರು ಮಹಿಳಾ ಪತ್ರಕರ್ತೆಯರೊಂದಿಗೆ ಸೇರಿ, ಮಹಿಳಾ ಶೋ‍ಷಣೆ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಅಂಶವನ್ನು 'ಶುದ್ಧಿ' ಹೊಂದಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ಲೀಡ್ ರೋಲ್ ನಲ್ಲಿ 'ಯಾರೇ ಕೂಗಾಡಲಿ' ಖ್ಯಾತಿಯ ನಿವೇದಿತಾ, ಲಾರೆನ್ ಸ್ಪಾರ್ಟನೊ, ಅಮೃತಾ ಕರಗದ ಅಭಿನಯಿಸಿದ್ದಾರೆ.[ಕಿಡಿಗೇಡಿಗಳಿಂದ ಕನ್ನಡ ನಟಿ ನಿವೇದಿತಾಗೆ ಗೋವಾದಲ್ಲಿ ಕೆಟ್ಟ ಅನುಭವ.!]

Kannada Movie Censored gets 'A' certificate

'ಶುದ್ಧಿ' ಚಿತ್ರವನ್ನು ಆದರ್ಶ್ ಎಚ್.ಈಶ್ವರಪ್ಪ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಸಾನ್ವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್ ನಿರ್ಮಾಣ ಮಾಡಿದ್ದಾರೆ. ಜೆಸ್ಸಿ ಕ್ಲಿಂಟನ್ ಅವರು ಸಂಗೀತ ಸಂಯೋಜನೆ ನೀಡಿದ್ದು, ಅಂಡ್ರು ಆಯಿಲೋ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರತಂಡ ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದೆ.

English summary
Niveditha, Lauren Spartano, Amrutha Karagada Starrer Kannada Movie 'Shuddhi' Censored gets 'A' Certificate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada