»   » ಗಂಡುಮಗುವಿಗೆ ತಂದೆಯಾದ ಅಣ್ಣಾಬಾಂಡ್ ಸೂರಿ

ಗಂಡುಮಗುವಿಗೆ ತಂದೆಯಾದ ಅಣ್ಣಾಬಾಂಡ್ ಸೂರಿ

Posted By:
Subscribe to Filmibeat Kannada
Kannada movie director Soori
ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಉತ್ತಮ ಗಳಿಕೆ ಕಾಣುತ್ತಿರುವ ಅಣ್ಣಾಬಾಂಡ್ ಚಿತ್ರದ ನಿರ್ದೇಶಕ ಸೂರಿ ಇನ್ನಷ್ಟು ಸಂಭ್ರಮಪಡುವಂತ ಬೆಳವಣಿಗೆಯೊಂದು ಅವರ ಬಾಳಿನಲ್ಲಿ ನಡೆದಿದೆ. ಅದೇನಂದರೆ ಈಗ್ಗೆ ವರ್ಷದ ಹಿಂದೆ ಮದುವೆಯಾಗಿದ್ದ ಸೂರಿಗೀಗ ಒಂದು ಗಂಡು ಮಗುವಾಗಿದೆ.

ಅವರ ಧರ್ಮಪತ್ನಿ ಪಲ್ಲವಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದು, ಸೂರಿ ದಾಂಪತ್ಯ ಜೀವನಕ್ಕೀಗ ಇದರಿಂದ ಒಂದು ಹೊಸ ಮೆರುಗು. ಡಿಸೆಂಬರ್ 8, 2010ರಂದು ಉಡುಪಿ ಜಿಲ್ಲೆ ಕೊಲ್ಲೂರಿನ ಮೂಕಾಂಬಿಕ ದೇವಸ್ಥಾನದಲ್ಲಿ ಸೂರಿ ಗೃಹಸ್ಥಾಶ್ರಮ ಪ್ರವೇಶಿಸಿದ್ದರು. ಆಗಷ್ಟೇ ಅವರ ಜಾಕಿ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿತ್ತು.

ಈಗ ಕಾಕತಾಳಿಯವೇನೋ ಎಂಬಂತೆ ಅವರ ಅಣ್ಣಾಬಾಂಡ್ ಚಿತ್ರ ರಾಜ್ಯಾದ್ಯಂತ ಪ್ರದರ್ಶನ ಕಂಡು ಉತ್ತಮ ಗಳಿಕೆ ದಾಖಲಿಸುತ್ತಿರುವ ಬೆನ್ನಲ್ಲೇ ಅವರಿಗೀಗ ಪುತ್ರಸಂತಾನದ ಯೋಗ.

ಕರ್ನಾಟಕ ಮಾತ್ರವಲ್ಲ ಹೈದರಾಬಾದ್, ಚೆನ್ನೈನಗರಗಳಲ್ಲೂ ಮತ್ತು ವಿದೇಶಗಳಲ್ಲೂ ಅಣ್ಣಾಬಾಂಡ್ ಚಿತ್ರ ತೃಪ್ತಿದಾಯಕ ಗಳಿಕೆ ಕಾಣುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಸೂರಿ ಕಡ್ಡಿಪುಡಿ ಎಂಬ ಚಿತ್ರಕ್ಕೆ ಚಿತ್ರಕಥೆ ಹಣೆಯುವುದರಲ್ಲಿ ಮಗ್ನರಾಗಿದ್ದಾರೆ. ಶಿವರಾಜ್ ಕುಮಾರ್ ಈ ಚಿತ್ರಕ್ಕೆ ನಾಯಕ.

English summary
Kannada movie director Soori becomes proud father. His wife Pallavi delivers baby boy. 
Please Wait while comments are loading...