For Quick Alerts
  ALLOW NOTIFICATIONS  
  For Daily Alerts

  'ಭಾರತ-ಪಾಕ್' ಗಡಿಭಾಗದಲ್ಲಿ ಕನ್ನಡ ಚಿತ್ರದ ಶೂಟಿಂಗ್

  By Bharath Kumar
  |

  ಕೇವಲ ಪ್ರಿ-ಪ್ರೊಡಕ್ಷನ್ ಮೇಕಿಂಗ್ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿರುವ 'ಪಿರಂಗಿಪುರ' ಈಗ ಮತ್ತೊಂದು ವಿಷಯಕ್ಕೆ ವಿಶೇಷವೆನಿಸಿಕೊಂಡಿದೆ. ಹೌದು, ಭಾರತ ಮತ್ತು ಪಾಕ್ ಗಡಿಭಾಗದಲ್ಲಿ 'ಪಿರಂಗಿಪುರ' ಚಿತ್ರೀಕರಣ ಮಾಡಲು ಸಜ್ಜಾಗಿದೆ.

  ಅಂದ್ಹಾಗೆ, ಇದೊಂದು ಜರ್ನಿ ಸಿನಿಮಾ ಆಗಿರುವುದರಿಂದ ಬೆಂಗಳೂರಿನಿಂದ ರಾಜಸ್ಥಾನದವರೆಗೂ ಕಥೆ ಸಾಗಲಿದೆಯಂತೆ. ರಾಜಸ್ಥಾನದಲ್ಲಿ ಚಿತ್ರಕ್ಕಾಗಿ ಭರ್ಜರಿ ಸೆಟ್ ನಿರ್ಮಾಣ ಮಾಡಲಿದ್ದು, ಈ ಜಾಗ ಪಾಕಿಸ್ತಾನದಿಂದ 40 ಕಿಲೋ ಮೀಟರ್ ದೂರದಲ್ಲಿದೆಯಂತೆ.['ಬಾಹುಬಲಿ'ಯಂತೆ ಮೇಕಿಂಗ್ ಮಾಡುತ್ತಿದೆ ಕನ್ನಡದ ಈ ಚಿತ್ರ!]

  'ಪಿರಂಗಿಪುರ' ಒಂದು ಕಾಲ್ಪನಿಕ ಊರಾಗಿದ್ದು, ಇದಕ್ಕಾಗಿ ರಾಜಸ್ಥಾನದಲ್ಲಿ ಒಂದು ಗ್ರಾಮವನ್ನೇ ಮರು ಸೃಷ್ಟಿಸುವ ಯೋಚನೆ ಚಿತ್ರತಂಡಕ್ಕಿದೆ. ತಮಿಳಿನ ಖ್ಯಾತ ಕಲಾ ನಿರ್ದೇಶ ಬಾಲಚಂದರ್ ಅವರಿಗೆ ಪಿರಂಗಿಪುರ' ಸೃಷ್ಟಿಸುವ ಜವಾಬ್ದಾರಿಯನ್ನು ನೀಡಲಾಗಿದ್ದು, ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.[ಚಿತ್ರದಲ್ಲಿರುವವರು ಯಾರು ಅಂತ ಬೇಗನೇ ಹೇಳಿ...]

  ಜನಾರ್ದನ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಚಿತ್ರೀಕರಣ ಮಾಡಲಿದ್ದಾರಂತೆ. ಇದಕ್ಕಾಗಿ ಸುಮಾರು 2 ವರ್ಷಗಳ ಕಾಲ ತಯಾರಿ ಮಾಡಿಕೊಳ್ಳಲಾಗಿದೆಯಂತೆ. ಶ್ಯಾಮ್ ಎಲ್. ರಾಜ್ ಸಂಗೀತ ನೀಡಿದರೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ. ದಿನೇಶ್ ಸುಬ್ಬರಾಯನ್ ಸಾಹಸ ಚಿತ್ರಕ್ಕಿದೆ.

  ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ 'ಪಿರಂಗಿಪುರ'ದಲ್ಲಿ ನಾಯಕನಾಗಿದ್ದು, ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಯುವಕನಿಂದ ಮುದುಕನವರೆಗೆ ಮೂರು ಬಗೆಯ ಗೆಟಪ್​ಗಳಲ್ಲಿ ವಿಜಯ್ ಬಣ್ಣ ಹಚ್ಚಲಿದ್ದಾರಂತೆ. ಇದು ರಾಜಾರಾಮ್ ಎಂಬ ವ್ಯಕ್ತಿಯ ಬದುಕಿನ ಏರಿಳಿತಗಳನ್ನು ಮನೋ ಸೈದ್ಧಾಂತಿಕ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆಯಂತೆ.

  English summary
  Actor Sanchari Vijay starrer Phirangipura, will be shot at a village near Rajasthan, by erecting a huge set. which is located closely to India-Pakistan border.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X