For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ಗೆ 'ವಿಲನ್' ಎಂಟ್ರಿ: ಇಷ್ಟವಿಲ್ಲದಿದ್ರೂ ಸೆಲ್ಫಿ ಪೋಸ್ಟ್ ಮಾಡಿದ ಸುದೀಪ್

  By Bharath Kumar
  |

  'ಕಾರ್ಪೋರೇಟರ್ ಕ್ರಿಕೆಟ್ ಡೇ ಟೂರ್ನಿ'ಯಲ್ಲಿ ಭಾಗವಹಿಸಲು ಲಂಡನ್ ಗೆ ಹೋಗಿದ್ದ ಸುದೀಪ್ ಭಾರತಕ್ಕೆ ವಾಪಸ್ ಆಗಿದ್ದಾರೆ. ಲಾರ್ಡ್ಸ್ ನಲ್ಲಿ ಟೂರ್ನಿ ಗೆದ್ದು ಬಂದ ಸುದೀಪ್ ನೇರವಾಗಿ 'ದಿ ವಿಲನ್' ತಂಡವನ್ನ ಸೇರಿಕೊಂಡಿದ್ದಾರೆ.

  ಇದಕ್ಕೆ ಸಾಕ್ಷಿ ಸ್ವತಃ ಕಿಚ್ಚ ಸುದೀಪ್ ಅವರೇ ತೆಗೆದುಕೊಂಡಿರುವ ಸೆಲ್ಫಿ. ಸುದೀಪ್ ಅವರಿಗೆ ಸೆಲ್ಫಿ ಅಂದ್ರೆ ಇಷ್ಟವಿಲ್ಲ. ಆದ್ರೂ, ವಿಲನ್ ಸೆಟ್ ನಲ್ಲಿ ತಮ್ಮದೊಂದು ಸೆಲ್ಫಿ ಕ್ಲಿಕ್ಕಿಸಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.['ದಿ ವಿಲನ್' ಅಡ್ಡಾದಲ್ಲಿ ಪ್ರತ್ಯಕ್ಷವಾದ ಬಾಲಿವುಡ್ ನಟ]

  ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಜೊತೆ 10 ದಿನಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿರುವ ಸುದೀಪ್, ಉತ್ತರ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ. ಮುಂದೆ ಓದಿ....

  'ವಿಲನ್' ಟೀಮ್ ಸೇರಿಕೊಂಡ ಸುದೀಪ್

  'ವಿಲನ್' ಟೀಮ್ ಸೇರಿಕೊಂಡ ಸುದೀಪ್

  'ಕಾರ್ಪೋರೇಟರ್ ಕ್ರಿಕೆಟ್ ಡೇ ಟೂರ್ನಿ'ಗಾಗಿ ಲಂಡನ್ ಗೆ ಹೋಗಿದ್ದ ಕಿಚ್ಚ ಸುದೀಪ್, ಈಗ 'ವಿಲನ್' ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಲಂಡನ್ ನಿಂದ ಭಾರತಕ್ಕೆ ಮರಳಿದ ನಂತರ ನೇರವಾಗಿ 'ವಿಲನ್' ತಂಡ ಸೇರಿಕೊಂಡಿದ್ದಾರೆ.

  10 ದಿನಗಳ ಕಾಲ ಶೂಟಿಂಗ್

  10 ದಿನಗಳ ಕಾಲ ಶೂಟಿಂಗ್

  ಸದ್ಯ, ಉತ್ತರ ಕರ್ನಾಟಕದಲ್ಲಿ 'ದಿ ವಿಲನ್' ಶೂಟಿಂಗ್ ನಡೆಯುತ್ತಿದೆ. ಬೆಳಗಾವಿ, ಬಿಜಾಪುರ ಹಾಗೂ ಮಹಾರಾಷ್ಟ್ರದ ಬಾರ್ಡರ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈಗ ಕಿಚ್ಚ ಕೂಡ ಶೂಟಿಂಗ್ ಗೆ ಎಂಟ್ರಿ ಕೊಟ್ಟಿದ್ದು 10 ದಿನಗಳ ಕಾಲ ಸುದೀಪ್ ಅವರ ಶೂಟಿಂಗ್ ನಡೆಯಲಿದೆಯಂತೆ.['ದಿ ವಿಲನ್' ಹೀರೋಯಿನ್ ಬಗ್ಗೆ ಬ್ರೇಕ್ ಆಗಿರುವ ಬ್ಲಾಸ್ಟಿಂಗ್ ನ್ಯೂಸ್ ಇದು.!]

  ಶೂಟಿಂಗ್ ಸೆಟ್ ನಿಂದ ಮೊದಲ ಸೆಲ್ಫಿ

  ಶೂಟಿಂಗ್ ಸೆಟ್ ನಿಂದ ಮೊದಲ ಸೆಲ್ಫಿ

  'ದಿ ವಿಲನ್' ಶೂಟಿಂಗ್ ನಲ್ಲಿ ಸುದೀಪ್ ಭಾಗವಹಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಈ ಸೆಲ್ಫಿ. ಉತ್ತರ ಕರ್ನಾಟದಲ್ಲಿ ನಡೆಯುತ್ತಿರುವ ಶೂಟಿಂಗ್ ಸ್ಥಳದಲ್ಲಿ ಸುದೀಪ್ ತೆಗೆದುಕೊಂಡಿರುವ ಸೆಲ್ಫಿ ಇದು.

  ಮಿಥುನ್ ಚಕ್ರವರ್ತಿ ಜೊತೆ ಅಭಿನಯ

  ಮಿಥುನ್ ಚಕ್ರವರ್ತಿ ಜೊತೆ ಅಭಿನಯ

  ಈಗಾಗಲೇ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ 'ದಿ ವಿಲನ್' ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸುದೀಪ್ ಎಂಟ್ರಿ ಕೊಟ್ಟಿದ್ದು, ಇಬ್ಬರ ನಡುವಿನ ದೃಶ್ಯಗಳನ್ನ ಚಿತ್ರೀಕರಣ ಮಾಡಲಿದ್ದಾರಂತೆ. ಈ ಮೂಲಕ ಮೊದಲ ಬಾರಿಗೆ ಮಿಥುನ್ ಚಕ್ರವರ್ತಿ ಜೊತೆ ಸುದೀಪ್ ತೆರೆ ಹಂಚಿಕೊಳ್ಳಲಿದ್ದಾರೆ.[ಅಂದು 'ಅಪ್ಪು'ಗೆ ಸುದೀಪ್ ಸರ್ಪ್ರೈಸ್, ಇಂದು ಕಿಚ್ಚನಿಗೆ ಪುನೀತ್ ಸರ್ಪ್ರೈಸ್!]

  ಪ್ರೇಮ್ ಸಾರಥ್ಯದ 'ದಿ ವಿಲನ್'

  ಪ್ರೇಮ್ ಸಾರಥ್ಯದ 'ದಿ ವಿಲನ್'

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಒಟ್ಟಾಗಿ ಅಭಿನಯಿಸುತ್ತಿರುವ ಚಿತ್ರ 'ದಿ ವಿಲನ್'. ಈ ಚಿತ್ರವನ್ನ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಆಮಿ ಜಾಕ್ಸನ್ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ನಟಿ ಶ್ರುತಿ ಹರಿಹರನ್ ಕೂಡ ಇರಲಿದ್ದಾರೆ.[ಕ್ರಿಕೆಟ್ ಆಡಲು ಬಂದ ಸುದೀಪ್ ಗೆ ಲಂಡನ್ ನಲ್ಲಿದೆ ಇನ್ನೊಂದು ಕೆಲಸ.!ಏನದು?]

  English summary
  After Participating in London Corporate cricket Tournament, Now Sudeep Joins to The Villain Shooting At North Karnataka For 10 Days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X