»   » ಈ ವಾರ ಹಾಟ್ & ಸ್ವೀಟ್ ಆಗಿರುವ 3 ಸಿನಿಮಾಗಳು ಬಿಡುಗಡೆ

ಈ ವಾರ ಹಾಟ್ & ಸ್ವೀಟ್ ಆಗಿರುವ 3 ಸಿನಿಮಾಗಳು ಬಿಡುಗಡೆ

Posted By:
Subscribe to Filmibeat Kannada

ಈ ವಾರ ಕನ್ನಡ ಚಿತ್ರ ರಸಿಕರ ಮನರಂಜನೆಗಾಗಿ 3 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ರಿಲೀಸ್ ಆಗುತ್ತಿರುವ ಸಿನಿಮಾಗಳ ಪೈಕಿ 'ಮಠ' ಖ್ಯಾತಿಯ ಗುರುಪ್ರಸಾದ್ ನಿರ್ದೇಶನದ ಚಿತ್ರ ಇರುವುದು ವಿಶೇಷವಾಗಿದೆ.['ಎರಡನೇ ಸಲ' ಚಿತ್ರದ 2ನೇ ಟ್ರೈಲರ್ ನಲ್ಲೂ ಕಾಫಿದ್ದೇ ಕಾರುಬಾರು]

ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯದ 'ಎರಡನೇ ಸಲ', ಮಳೆ ಹುಡುಗಿ ಪೂಜಾ ಗಾಂಧಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಜಿಲೇಬಿ' ಮತ್ತು ಸತ್ಯ ಶೌರ್ಯ ಸಾಗರ್ ನಿರ್ದೇಶನದ 'ಕಾಲ್ ಕೇಜಿ ಪ್ರೀತಿ' ಸಿನಿಮಾ ಗಳು ಈ ವಾರ ತೆರೆ ಮೇಲೆ ಬರುತ್ತಿವೆ.

ಈ ಮೂರು ಸಿನಿಮಾಗಳ ಬಗ್ಗೆ ಒಂದು ಸಣ್ಣ ಪರಿಚಯವನ್ನು ಸಿಂಪಲ್ಲಾಗಿ ನಾವು ಹೇಳ್ತಿವಿ. ಯಾವ ಚಿತ್ರಕ್ಕೆ ಹೋಗಬೇಕು ಎಂಬುದನ್ನ ನೀವೇ ಡಿಸೈಡ್ ಮಾಡಿಕೊಳ್ಳಿ.

ಕಾಫಿಗೆ ಹೊಸ ಅರ್ಥ ಕೊಟ್ಟ 'ಎರಡನೇ ಸಲ'

'ಡೈರೆಕ್ಟರ್ ಸ್ಪೆಷಲ್', 'ಮಠ', 'ಎದ್ದೇಳು ಮಂಜುನಾಥ' ಚಿತ್ರಗಳನ್ನ ನಿರ್ದೇಶನ ಮಾಡಿರುವ ಗುರುಪ್ರಸಾದ್ ಅವರು 'ಎರಡನೇ ಸಲ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸ್ಪೆಷಲ್ ಸ್ಟಾರ್ ಧನಂಜಯ್ ಮತ್ತು ಸಂಗೀತಾ ಭಟ್ ನಾಯಕ-ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಲಕ್ಷ್ಮಿ, ನಟ ಅವಿನಾಶ್, ಕಿರಿಕ್ ಕೀರ್ತಿ, ಅವರು ಅಭಿನಯಿಸಿದ್ದು, ಗುರುಪ್ರಸಾದ್ ಕಥೆ- ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಜೊತೆಗೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಯೋಗೇಶ್ ನಾರಾಯಣ್ 'ಎರಡನೇ ಸಲ' ಚಿತ್ರ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ 'ಎರಡನೇ ಸಲ'

ನಿರ್ದೇಶಕ ಗುರುಪ್ರಸಾದ್ 'ಎರಡನೇ ಸಲ' ಚಿತ್ರದಲ್ಲಿ ಕಾಫಿಗೂ, ಟೀಗೂ ಹೊಸ ಅರ್ಥ ಕೊಟ್ಟಿರುವ ಎರಡೂ ಟ್ರೈಲರ್ ಗಳು ಪಡ್ಡೆ ಹೈಕಳ ಫೇವರೆಟ್ ಆಗಿದ್ದು, ಸಖತ್ ಮನರಂಜನೆ ನೀಡುವ ಸಿನಿಮಾ ಎಂಬ ಭರವಸೆ ನೀಡಿದೆ. ಚಿತ್ರಕ್ಕೆ 'U/A' ಪ್ರಮಾಣ ಪತ್ರ ಸಹ ದೊರೆತಿದೆ. ಕಾಮಿಡಿ ಜೊತೆಗೆ ಸಾವು, ಪ್ರೀತಿಯಲ್ಲಿ ನೋವು, ಪ್ರೇಮ ಕುರುಡ ಅಥವಾ ಅಲ್ಲವಾ ಎಂಬುದನ್ನು ಸಂಭಾಷಣೆಯಲ್ಲಿ ಗುರುಪ್ರಸಾದ್ ಹಿಂದಿನ ಸಿನಿಮಾಗಳ ಶೈಲಿಯಲ್ಲಿ ಹೇಳಿದ್ದು, ಪ್ರೇಕ್ಷಕರಲ್ಲಿ ಕ್ರೇಜ್ ಹೆಚ್ಚಿಸಿದೆ. ಆದರೆ ನಿರ್ದೇಶಕ ಗುರುಪ್ರಸಾದ್ ಅವರು ನಿರ್ಮಾಪಕ ಯೋಗೇಶ್ ನಾರಾಯಣ್ ಸಂಪರ್ಕಕ್ಕೆ ಸಿಗದೇ ಇರುವುದರಿಂದ, ಅವರ ಅನುಪಸ್ಥಿತಿಯಲ್ಲಿ ಚಿತ್ರ ನಾಳೆ (ಮಾರ್ಚ್ 3)ಬಿಡುಗಡೆ ಆಗುತ್ತಿದೆ.

ಹಾಟ್ ಸ್ವೀಟ್ 'ಜಿಲೇಬಿ'

ಈಗಾಗಲೇ ಟ್ರೈಲರ್ ಮೂಲಕ ಸಖತ್ ಹಾಟ್ ಎನಿಸಿರುವ 'ಜಿಲೇಬಿ' ಸಿನಿಮಾ ಈ ವಾರದ ರಿಲೀಸ್ ಚಿತ್ರಗಳ ಲಿಸ್ಟ್ ನಲ್ಲಿದೆ. ಚಿತ್ರದಲ್ಲಿ ಮಳೆ ಹುಡುಗಿ ಪೂಜಾ ಗಾಂಧಿ ಕಾಲ್ ಗರ್ಲ್ ಪಾತ್ರದಲ್ಲಿ ನಟಿಸಿದ್ದು ಪಕ್ಕಾ ಎಂಟರ್ ಟೈನರ್ ಸಿನಿಮಾ ಆಗಿದೆ. ಇವರ ಜೊತೆಗೆ ದತ್ತಣ್ಣ, ರಾಕ್ ಲೈನ್ ಸುಧಾಕರ್, ವಿಜಯ ಚೆಂಡೂರ್, ಯಶಸ್ ಸೂರ್ಯ, ಶೋಭ್ ರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಲಕ್ಕಿ ಶಂಕರ್ ಆಕ್ಷನ್ ಕಟ್ ಹೇಳಿದ್ದು, ಈ ಹಿಂದೆ ಸಿಗರೇಟ್', 'ದೇವ್ರಾಣೆ' ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಶಿವಶಂಕರ್ ಅವರು 'ಜಿಲೇಬಿ'ಯನ್ನ ನಿರ್ಮಾಣ ಮಾಡಿದ್ದಾರೆ.

ತಾಜಾತನದ 'ಕಾಲ್ ಕೇಜಿ ಪ್ರೀತಿ'

ಹೊಸಬರ ತಂಡ ರೂಪಿಸಿರುವ 'ಕಾಲ್ ಕೇಜಿ '1/4 kg ಪ್ರೀತಿ' ವ್ಯಾಲೆಂಟೈನ್ಸ್ ಡೇ ಗೆ ಉಡುಗೊರೆಯ ಸಿನಿಮಾ. ಆದ್ರೆ ಸ್ವಲ್ಪ ಲೇಟ್ ಆಗಿ ಮಾರ್ಚ್ 3 ರಂದು ಬಿಡುಗಡೆ ಆಗುತ್ತಿದೆ. ಪ್ರಯಾಣದೊಂದಿಗೆ ಪ್ರೇಮಕಥೆಯನ್ನು ಹೆಣೆದು ಕಟ್ಟಿರುವ ಈ ಸಿನಿಮಾವನ್ನು ಈ ಹಿಂದೆ 'ಬಾಡಿಗಾರ್ಡ್', ಬಾಂಬೇ ಮಿಠಾಯಿ' ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಸತ್ಯ ಶೌರ್ಯ ಸಾಗರ್ ಆಕ್ಷನ್ ಕಟ್ ಹೇಳಿದ್ದಾರೆ.

English summary
Kannada Actor Dhananjay starrer 'Eradane Sala' , Pooja Gandhi starrer 'Jilebi' and '4/1 kg Preethi' Movies are releasing tomorrow(March 3)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada