»   » ಈ ವಾರ ತೆರೆ ಮೇಲೆ ಕನ್ನಡದ ನಾಲ್ಕು ಚಿತ್ರಗಳು

ಈ ವಾರ ತೆರೆ ಮೇಲೆ ಕನ್ನಡದ ನಾಲ್ಕು ಚಿತ್ರಗಳು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಪ್ರಸ್ತುತ 'ಬ್ಯೂಟಿಫುಲ್ ಮನಸ್ಸುಗಳು', 'ಕಿರಿಕ್ ಪಾರ್ಟಿ', ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಅಲ್ಲದೇ ಡಾರ್ಲಿಂಗ್ ಕೃಷ್ಣ ಅಭಿನಯದ 'ಮುಂಬೈ', ಧನಂಜಯ್ ಅಭಿನಯದ 'ಅಲ್ಲಮ' ಚಿತ್ರ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿದ್ದು, ರೇಸ್ ನಲ್ಲಿರುವಾಗಲೇ 4 ಚಿತ್ರಗಳು ಈ ವಾರ ಬಿಡುಗಡೆಗೆ ಸಿದ್ದವಾಗಿವೆ.['ವ್ಯಾಲೆಂಟೈನ್ಸ್ ಡೇ' ಗೆ ಕನ್ನಡದ 3 ಚಿತ್ರಗಳು ಬಿಡುಗಡೆ]

ಹೌದು, ಈ ವಾರ(ಫೆಬ್ರವರಿ 3) ಗಾಂಧಿನಗರದಲ್ಲಿ ಕನ್ನಡದ ನಾಲ್ಕು ಸಿನಿಮಾ ಗಳು ತೆರೆ ಮೇಲೆ ಬರಲಿದ್ದು, ಅವುಗಳಲ್ಲಿ ಪ್ರೇಕ್ಷಕರಿಗೆ ಹೆಚ್ಚು ಕುತೂಹಲ ಮೂಡಿಸಿರುವ ದ್ವಾರಕೀಸ್ ಅವರ 50 ನೇ ಸಿನಿಮಾ ಸಹ ಇದೆ. ಈ ವಾರ ರಿಲೀಸ್ ಆಗಲಿರುವ ಸಿನಿಮಾಗಳ ಲೀಸ್ಟ್ ಇಲ್ಲಿದೆ.

'ಚೌಕ'

ಕರ್ನಾಟಕದ ಕುಳ್ಳ ದ್ವಾರಕೀಶ್ ನಿರ್ಮಾಣದ 50 ನೇ ಸಿನಿಮಾ 'ಚೌಕ' ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ 'ಚೌಕ' ಹಲವು ರೀತಿಯಿಂದ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾ.['ಚೌಕ' ಚಿತ್ರದ ನಾಲ್ವರು ಹೀರೋಯಿನ್ ಗಳು 'ಈ' ನಟಿಯರೇ.!]

ಯೋಗೀಶ್ ದ್ವಾರಕೀಶ್ ನಿರ್ಮಾಣದ 'ಚೌಕ' ಮಲ್ಟಿಸ್ಟಾರ್, ಟ್ರೇಲರ್, ಯೋಗರಾಜ ಭಟ್ ಬರೆದಿರುವ 'ಅಲ್ಲಾಡ್ಸು ಅಲ್ಲಾಡ್ಸು' ಹಾಡು, ನಾಗೇಂದ್ರ ಪ್ರಸಾದ್ ಅವರು ಬರೆದಿರುವ 'ಅಪ್ಪ ಐ ಲವ್ ಯೂ ಪಾ' ಹಾಡು ಸೇರಿದಂತೆ ಹಲವು ವಿಶೇಷತೆಗಳಿಂದ ಸಿನಿಮಾ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

'ಜಲ್ಸಾ'

ಖ್ಯಾತ ನಿರ್ದೇಶಕ ಶಶಾಂಕ್ ಅವರೊಂದಿಗೆ ಸಹ ನಿರ್ದೇಶಕರಾಗಿದ್ದ ಕಾಂತ ಕನ್ನಲ್ಲಿ ಅವರ ಚೊಚ್ಚಲ ನಿರ್ದೇಶನದ 'ಜಲ್ಸಾ' ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಸಿಲ್ವರ್ ಸ್ಕ್ರೀನ್ ಟಾಕೀಸ್ ಲಾಂಛನದಲ್ಲಿ ಎನ್.ಸರೋಜದೇವಿ ಹಾಗೂ ಬಸವರಾಜು ಅವರು ನಿರ್ಮಿಸಿದ್ದು, ನಿರಂಜನ್ ಒಡೆಯರ್, ಆಕಾಂಕ್ಷ, ಅನೂಶ, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಶೋಬ್ ರಾಜ್, ರಾಜೇಶ್ ನಟರಂಗ ಅವರ ತಾರಬಳಗವಿದೆ. ಈ ಹೊಸಬರ ಸಿನಿಮಾ ಈಗಾಗಲೇ ಯು/ಎ ಸರ್ಟಿಫಿಕೇಟ್ ಪಡೆದಿದ್ದು, ಬಿಡುಗಡೆ ದಿನಕ್ಕಾಗಿ ಕಾಯುತ್ತಿದೆ.

'ಸ್ಟೈಲ್ ರಾಜ'

ಭೂಮಿಕ ಪ್ರೊಡಕ್ಷನ್ ಲಾಂಛನದಲ್ಲಿ ರೂಪ ಸುರೇಶ್ ಹಾಗೂ ರಮೇಶ್ ಆರ್ ಅವರು ನಿರ್ಮಿಸಿರುವ 'ಸ್ಟೈಲ್ ರಾಜ' ಸಿನಿಮಾ ಫೆಬ್ರವರಿ 3 ರಂದು ಬಿಡುಗಡೆ ಆಗುತ್ತಿದೆ. ಗಿರೀಶ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ, ಕಾಮಿಡಿ ಕಿಂಗ್ ಚಿಕ್ಕಣ್ಣ, ಶೋಭ್ ರಾಜ್, ಗಿರಿಜಾ ಲೋಕೇಶ್ ಮುಂತಾದವರು ಅಭಿನಯಿಸಿದ್ದಾರೆ. ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

'ಹಾಯ್'

ರಾಘವೇಂದ್ರ ಕಠಾರೆ, ಸಿ.ರಾಜೇಶ್ ಅವರು ಸೆವೆನ್ ಕೋರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ 'ಹಾಯ್' ಚಿತ್ರವು ತೆರೆಗೆ ಮೇಲೆ ಬರುತ್ತಿದೆ. ಈ ಚಿತ್ರಕ್ಕೆ ಜಿ.ಎನ್.ರುದ್ರೇಶ್ ಅವರು ಕಥೆ, ಚಿತ್ರಕಥೆ ಬರೆದು ಆಕ್ಷನ್ ಹೇಳಿದ್ದು, ಜೆ.ಸಿ.ಗಿಫ್ಟ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ.


'ಹಾಯ್' ಚಿತ್ರದಲ್ಲಿ ಯಶ್ ರಾಜ್, ಸಾನಿಯಾ, ಜೈಜಗದೀಶ್, ವಿಜಯಕಾಶಿ, ಸಂಗೀತ, ಸಾಧುಕೋಕಿಲ, ಕಿಲ್ಲರ್ ವೆಂಕಟೇಶ್ ಅವರು ತಾರಾಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

English summary
In Sandalwood This Friday (February 3) Dwarakish's most Antisipated Film 'Chauka' and other 3 Kannada Movies are Set to Release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada