»   » 'ವ್ಯಾಲೆಂಟೈನ್ಸ್ ಡೇ' ಗೆ ಕನ್ನಡದ 3 ಚಿತ್ರಗಳು ಬಿಡುಗಡೆ

'ವ್ಯಾಲೆಂಟೈನ್ಸ್ ಡೇ' ಗೆ ಕನ್ನಡದ 3 ಚಿತ್ರಗಳು ಬಿಡುಗಡೆ

Posted By:
Subscribe to Filmibeat Kannada

ಪ್ರೇಮಿಗಳ ದಿನ ಫೆಬ್ರವರಿ 14 ತುಂಬಾ ದೂರವೇನು ಇಲ್ಲ. ಈ ದಿನಕ್ಕೆ ಸ್ಯಾಂಡಲ್ ವುಡ್, ಸಿನಿ ಪ್ರಿಯರಿಗಾಗಿ ಬಿಗ್‌ ಪ್ಲಾನ್ ಮಾಡಿದ್ದು, ಮೂರು ಪ್ರಮುಖ ಚಿತ್ರಗಳನ್ನು ಗ್ರ್ಯಾಂಡ್ ರಿಲೀಸ್ ಮಾಡಲಿದೆ. ವಿಶೇಷ ಅಂದ್ರೆ ಈ ಸಿನಿಮಾ ಗಳ ನಿರ್ಮಾಪಕರು ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಹೆಬ್ಬುಲಿ' ಬಿಡುಗಡೆಗೂ ಮುನ್ನ ತಮ್ಮ ಚಿತ್ರಗಳನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿರುವುದು ವಿಶೇಷವೆನಿಸಿದೆ.[ಬೆಂಗಳೂರು ಚಿತ್ರೋತ್ಸವದಲ್ಲಿ ದರ್ಶನ್, ಸುದೀಪ್, ಪುನೀತ್ ಚಿತ್ರಗಳು!]

ವ್ಯಾಲೆಂಟೈನ್ಸ್ ಡೇ ಗೆ ಬಿಡುಗಡೆ ಆಗುವ ಸಿನಿಮಾ ಗಳ ಜೊತೆಗೆ ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಸಿನಿಮಾ ಗಳಾದ ಹೆಬ್ಬುಲಿ, ಚಕ್ರವರ್ತಿ ಮತ್ತು ರಾಜಕುಮಾರ ಸಿನಿಮಾ ಗಳು ಸಹ ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದಗೊಂಡಿವೆ. ಅಂದಹಾಗೆ ಪ್ರೇಮಿಗಳ ದಿನಕ್ಕೆ ವಿಶೇಷವಾಗಿ ತೆರೆ ಮೇಲೆ ಬರಲು ಸಿದ್ಧವಾದ ಸಿನಿಮಾ ಗಳು ಯಾವುದು ನೋಡೋಣ ಬನ್ನಿ.

'ಮನಸ್ಸು.. ಮಲ್ಲಿಗೆ'

ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ 50 ನೇ ಸಿನಿಮಾ 'ಮನಸ್ಸು ಮಲ್ಲಿಗೆ' ಚಿತ್ರದ ಶೂಟಿಂಟ್ ಕಂಪ್ಲೀಟ್ ಆಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. 'ಮನಸು.. ಮಲ್ಲಿಗೆ' ಮರಾಠಿ ಭಾಷೆಯ ಬ್ಲಾಕ್ ಬಾಸ್ಟರ್ ಸಿನಿಮಾ 'ಸೈರಾಟ್' ಚಿತ್ರದ ಅಫೀಶಿಯಲ್ ರಿಮೇಕ್ ಚಿತ್ರ. ಈ ಚಿತ್ರದ ಆಡಿಯೋ ಭಾಗಶಃ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಆಗಲಿದ್ದು, ಚಿತ್ರವು ಪ್ರೇಮಿಗಳ ದಿನಕ್ಕೆ ಉಡುಗೊರೆಯಾಗಿ ತೆರೆಗೆ ಬರಲು ಸಿದ್ದವಾಗಿದೆ.[ಫೆಬ್ರವರಿ ತಿಂಗಳಲ್ಲಿ 'ಸೈರಾಟ್' ರೀಮೇಕ್ 'ಮನಸು ಮಲ್ಲಿಗೆ' ಬಿಡುಗಡೆ]

ಎರಡನೇ ಸಲ

'ಎರಡನೇ ಸಲ' ಚಿತ್ರತಂಡವು 'ವ್ಯಾಲೆಂಟೈನ್ಸ್ ಡೇ' ಗಿಫ್ಟ್ ಆಗಿ ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಿದೆ ಎಂದು ತಿಳಿಯಲಾಗಿತ್ತು. ಅದರೆ ಚಿತ್ರತಂಡ ಥ್ರಿಯೇಟ್ರಿಕಲ್ ರಿಲೀಸ್ ಅನ್ನು ಮಾರ್ಚ್ ಮೊದಲ ವಾರಕ್ಕೆ ಮುಂದೂಡಿವೆ ಎಂದು ಹಲವು ವರದಿಗಳ ಪ್ರಕಾರ ತಿಳಿಯಲಾಗಿದೆ. ಚಿತ್ರ ಪ್ರೇಮಿಗಳ ದಿನದಂದು ರಿಲೀಸ್ ಆಗುತ್ತೋ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಆಗುತ್ತದೆಯೋ ಕಾದುನೋಡಬೇಕಿದೆ.['ಎರಡನೇ ಸಲ'ದ 'ಆ' ಮಾತುಗಳಲ್ಲಿ 'ಗುರು'ಗಳ ದರ್ಶನ!]

'1/4 kg ಪ್ರೀತಿ'

ಪ್ರೇಮಿಗಳ ದಿನಕ್ಕೆ ಬಿಡುಗಡೆ ಆಗಲಿರುವ ಸಿನಿಮಾಗಳ ಪಟ್ಟಿಯಲ್ಲಿ ಇರುವ ಮೂರನೇ ಸಿನಿಮಾ '1/4 kg ಪ್ರೀತಿ'. ಈ ಸಿನಿಮಾದ ಚಿತ್ರತಂಡ 'ವ್ಯಾಲೆಂಟೈನ್ಸ್ ಡೇ' ದಿನದಂದು ಚಿತ್ರ ಬಿಡುಗಡೆ ಮಾಡುವ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಜಾಹಿರಾತುಗಳ ಮೂಲಕ ತಿಳಿಸಿದೆ.'1/4 kg ಪ್ರೀತಿ' ಚಿತ್ರವನ್ನು ರಾಜ್ಯದಾದ್ಯಂತ ಮೈಸೂರು ಟಾಕೀಸ್ ರಿಲೀಸ್ ಮಾಡುತ್ತಿದೆ.

'ಹೆಬ್ಬುಲಿ'

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ 'ಹೆಬ್ಬುಲಿ ಚಿತ್ರವು ಫೆಬ್ರವರಿ 23 ರಂದು ತೆರೆ ಮೇಲೆ ಅಬ್ಬರಿಸಲಿದೆ.['ಹೆಬ್ಬುಲಿ' ಚಿತ್ರ ನೋಡೋಕು ಮುನ್ನ ಈ ವಿಷ್ಯಾ ತಿಳಿದುಕೊಳ್ಳಿ..!]

English summary
An slew of Kannada films are releasing on the Valentine's day week. Read on to know which are they.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada