»   » ಬಾಹುಬಲಿ ಜೊತೆ, ಕನ್ನಡ ಚಿತ್ರಗಳ ಮೇಲೆ ಈ ವಾರ ಎರಡು ಬ್ರಹ್ಮಾಸ್ತ್ರ

ಬಾಹುಬಲಿ ಜೊತೆ, ಕನ್ನಡ ಚಿತ್ರಗಳ ಮೇಲೆ ಈ ವಾರ ಎರಡು ಬ್ರಹ್ಮಾಸ್ತ್ರ

Posted By:
Subscribe to Filmibeat Kannada

ರಂಗಿತರಂಗ ಎನ್ನುವ ಹೊಸಬರ ಪ್ರಯತ್ನದ ಚಿತ್ರಕ್ಕೆ ಜನ ಬೆನ್ನು ತಟ್ಟಿದರೂ ಚಿತ್ರಮಂದಿರದ ಮಾಲೀಕರು ಮತ್ತು ಮಲ್ಟಿಪ್ಲೆಕ್ಸ್ ನವರು ಹೆಚ್ಚಿನ ಪ್ರದರ್ಶನಕ್ಕೆ ಅವಕಾಶ ನೀಡುವ ಮನಸ್ಸು ಮಾಡಲಿಲ್ಲ.

ದುಃಖದ ಸಂಗತಿ ಏನೆಂದರೆ ಕಳೆದ ವಾರ ರಂಗಿತರಂಗ ಚಿತ್ರತಂಡ ಮಲ್ಟಿಪ್ಲೆಕ್ಸ್ ಅಧಿಕಾರಿಗಳ ಬಳಿ ತೆರಳಿ ಹೂಗುಚ್ಚ ನೀಡಿ ನಮ್ಮ ಚಿತ್ರದ ಪೋಸ್ಟರುಗಳನ್ನೂ ಪ್ರದರ್ಶನ ಮಾಡಿ ಸ್ವಾಮೀ ಎಂದು ಮನವಿ ಮಾಡಿಕೊಂಡಿರುವುದು. (ಕೆಜಿ ರಸ್ತೆಯಲ್ಲಿ ಬಾಹುಬಲಿ ದಾಖಲೆ)

ನಮ್ಮ ಚಿತ್ರವನ್ನು ಪರಭಾಷಾ ಚಿತ್ರದ ಹಾವಳಿಯಿಂದ ತಪ್ಪಿಸಿ ಎಂದು ರಂಗಿತರಂಗ ಚಿತ್ರತಂಡ ಕೇಳಿಕೊಂಡರೂ, ಚಿತ್ರೋದ್ಯಮದ, ಕನ್ನಡಪರ ಸಂಘಟನೆಗಳು ಅಥವಾ ಮಂಡಳಿಯ ಯಾರೊಬ್ಬರೂ ಇವರ ಬೆನ್ನಿಗೆ ನಿಲ್ಲದಿರುವುದು ದುರದೃಷ್ಟಕರ.

ಆದರೂ, ಲಭ್ಯವಿರುವ ಚಿತ್ರಮಂದಿರಗಳಲ್ಲಿ ರಂಗಿತರಂಗ ಜೊತೆಗೆ ಮತ್ತೊಂದು ಪ್ರೇಕ್ಷಕರಿಂದ ಪ್ರಶಂಸೆಗೊಳಗಾಗಿರುವ ಗಣಪ ಚಿತ್ರದ ಕಲೆಕ್ಷನ್ ಚೆನ್ನಾಗಿಯೇ ಮುಂದುವರಿದಿದೆ.

ಇರೋ ಬರೋ ಶೋಗಳನ್ನೆಲ್ಲಾ ಬಾಹುಬಲಿ ಚಿತ್ರದ ವಿವಿಧ ಭಾಷೆಯ ಶೋಗಳಿಗೆ ಧಾರೆ ಎರೆದ ಮಲ್ಟಿಪ್ಲೆಕ್ಸ್ ಗಳ ಕನ್ನಡ ಕಡೆಗಣನೆ ಎಂದಿನಂತೆ ಯಥಾಸ್ಥಿತಿ ಮುಂದುವರಿದಿದೆ.

ಈ ವಾರ ರಾಕೇಶ್, ಸೋನಿಯಾ ಗೌಡ ಅಭಿನಯದ 'ಪ್ರೀತಿಯಿಂದ' ಚಿತ್ರ ಕೂಡಾ ತೆರೆ ಕಾಣುತ್ತಿದೆ. ಕಳೆದ ಶುಕ್ರವಾರದಿಂದ ಬಾಹುಬಲಿ ಹೊಡೆತಕ್ಕೆ ಕನ್ನಡ ಚಿತ್ರಗಳು ಅಕ್ಷರಸಃ ತತ್ತರಿಸಿದರೆ ಈ ವಾರ ಬಾಹುಬಲಿ ಜೊತೆಗೆ ಇನ್ನು 2-3 ಪರಭಾಷಾ ಚಿತ್ರಗಳ ಬ್ರಹ್ಮಾಸ್ತ್ರಕ್ಕೆ ಸಜ್ಜಾಗ ಬೇಕಿದೆ. ಮುಂದೆ ಓದಿ..

1-2 ತಮಿಳು, ಒಂದು ಹಿಂದಿ

ಕನ್ನಡ ಚಿತ್ರಗಳು ಈ ವಾರಾಂತ್ಯ ರಮ್ಜಾನ್ ಹಬ್ಬದ ಸಂಭ್ರಮದಲ್ಲಿ ಅಂದರೆ ಶುಕ್ರವಾರಕ್ಕೆ (ಜು 17) ಒಟ್ಟು ಮೂರು ಪರಭಾಷಾ ಚಿತ್ರಗಳನ್ನು ಎದುರಿಸಬೇಕಾಗಿದೆ. ಅದರಲ್ಲಿ ಒಂದು ಅಥವಾ ಎರಡು ತಮಿಳು ಮತ್ತು ಒಂದು ಹಿಂದಿ ಚಿತ್ರಗಳು.

ಮಾರಿ

ಧನುಶ್ ಅಭಿನಯದ ಮಾರಿ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಧನುಶ್ ಗೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಾರುಕಟ್ಟೆ ಇದೆ, ಜೊತೆಗೆ ಹೈಪ್ ಕ್ರಿಯೇಟ್ ಆಗಿರೋ ಸಿನಿಮಾ. ಬಾಲಾಜಿ ಮೋಹನ್ ನಿರ್ದೇಶನದ ಈ ಚಿತ್ರದಲ್ಲಿ ಧನುಶ್, ಕಾಜಲ್, ವಿಜಯ್ ಯೇಸುದಾಸ್ ಪ್ರಮುಖ ಭೂಮಿಕೆಯಲ್ಲಿದ್ದಾರೆ.

ಸಲ್ಲು ಆರಾಹಾಹೇ, ಎಲ್ರೂ ಸೈಲೆಂಟಾಗಿ ಸೈಡ್ ಮೇ ಜಾವೋ.

ಇನ್ನಿಲ್ಲದಂತೆ ಹೈಪ್ ಹುಟ್ಟು ಹಾಕಿರುವ ಭಜರಂಗಿ ಭೈಜಾನ್ ಚಿತ್ರ ಈದ್ ಹಬ್ಬಕ್ಕೆ (ಜು 17) ಬಿಡುಗಡೆಯಾಗುತ್ತಿದೆ. ಇಲ್ಲಿ ಗಮನಿಸ ಬೇಕಾದ ಅಂಶವೇನಂದರೆ ಈ ಚಿತ್ರದ ನಿರ್ಮಾಪಕರಲ್ಲೊಬ್ಬರು ನಮ್ಮ ನಿಮ್ಮಲ್ಲೆರ ರಾಕ್ಲೈನ್ ವೆಂಕಟೇಶ್. ಚಿತ್ರ ಇನ್ನೆಷ್ಟು ಚಿತ್ರಮಂದಿರವನ್ನು ಕಬಳಿಸಲಿದೆಯೋ ಎಂದು ವಿವರಿಸುವ ಅವಶ್ಯಕತೆಯಿಲ್ಲ, ಅನುಮಾನವೂ ಬೇಕಾಗಿಲ್ಲ.

ವಾಲು

ಇದಲ್ಲದೇ, ಸಿಂಬರಸನ್ ಪ್ರಮುಖ ಭೂಮಿಕೆಯಲ್ಲಿರುವ ವಾಲು ಚಿತ್ರ ಕೂಡಾ ಈ ವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. ವಿಜಯ್ ಚಂದರ್ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಸಿಂಬರಸನ್, ಹನ್ಸಿಕಾ ಮೋಟ್ವಾನಿ, ಶೃತಿ ಹಾಸನ್ ಮುಂತಾದವರಿದ್ದಾರೆ. ಪುನೀತ್ ಜೊತೆ ಬಿಂದಾಸ್ ಚಿತ್ರದಲ್ಲಿ ನಟಿಸಿದ ಹನ್ಸಿಕಾ ಪ್ರಮುಖ ಭೂಮಿಕೆಯಲ್ಲಿರುವ 'ವಾಲು' ಚಿತ್ರ ಎಂದು ಜಾಹೀರಾತು ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

ನಮ್ಮ ಚಿತ್ರಗಳ ಕಥೆ ಏನು?

ಒಂದೆಡೆ ಬಾಹುಬಲಿ, ಇನ್ನೊಂದೆಡೆ ಸಲ್ಮಾನ್ ಚಿತ್ರ, ಮತ್ತೊಂದೆಡೆ ಧನುಶ್ ಚಿತ್ರ ಈ ಎಲ್ಲಾ ಹಾವಳಿಗಳ ನಡುವೆ ಕನ್ನಡ ಚಿತ್ರಗಳ ಕಥೆ ಏನು? ಇದಕ್ಕೆ ಉತ್ತರಿಸಬೇಕಾದವರು ಸಿನಿ ಪ್ರೇಕ್ಷಕರಾ ಅಥವಾ ನಮ್ಮ ಚಿತ್ರೋದ್ಯಮದವರಾ?

English summary
Kannada movies has to face tough competition with other language movies again and again. Three big other language movies releasing this weekend (July 17)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada