»   » ಈ ವಾರ ತೆರೆಗೆ 4 ಚಿತ್ರಗಳು: ಮನರಂಜನೆಗೆ ನಿಮ್ಮ ಆಯ್ಕೆ ಯಾವುದು?

ಈ ವಾರ ತೆರೆಗೆ 4 ಚಿತ್ರಗಳು: ಮನರಂಜನೆಗೆ ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಈ ವಾರ ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗಾಗಿ 4 ಚಿತ್ರಗಳು ತೆರೆ ಮೇಲೆ ಬರುತ್ತಿವೆ. ವಿಶೇಷ ಅಂದ್ರೆ ಈ ನಾಲ್ಕು ಚಿತ್ರಗಳಲ್ಲಿ ಎರಡು ಚಿತ್ರಗಳು ನಗುವವರಿಗಾಗಿ ಮಾತ್ರ ಎಂದು ಹೇಳಿಕೊಂಡಿವೆ.

ಈ ವಾರ ನವರಸ ನಾಯಕ ಜಗ್ಗೇಶ್ ಅಭಿನಯದ 'ಮೇಲುಕೋಟೆ ಮಂಜ' ಮತ್ತು Rank ಸ್ಟಾರ್ ಗುರುನಂದನ್ ನಟಿಸಿರುವ 'ಸ್ಮೈಲ್ ಪ್ಲೀಸ್' ಚಿತ್ರಗಳು ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾಗಳು. ಜೊತೆಗೆ 'ಏನೆಂದು ಹೆಸರಿಡಲಿ' ಮತ್ತು 'ಅಮರಾವತಿ' ಚಿತ್ರಗಳು ತೆರೆ ಮೇಲೆ ಅಪ್ಪಳಿಸಲಿವೆ.[ಸಂದರ್ಶನ: Rank ಸ್ಟಾರ್ ಗುರುನಂದನ್ ಚಿತ್ರಗಳಲ್ಲಿ ಸ್ಮೈಲೇ ಸ್ಪೆಷಲ್..!]

ಈ ನಾಲ್ಕು ಸಿನಿಮಾ ಗಳ ಒಂದು ಸಣ್ಣ ಪರಿಚಯ ಹಾಗೂ ಅವುಗಳ ವಿಶೇಷತೆಗಳನ್ನ ಸಿಂಪಲ್ಲಾಗಿ ನಾವು ಹೇಳ್ತಿವಿ. ಯಾವ ಚಿತ್ರಕ್ಕೆ ಹೋಗಬೇಕು ಎಂಬುದನ್ನು ನೀವೆ ಡಿಸೈಡ್ ಮಾಡಿಕೊಳ್ಳಿ.

ನಗುವವರಿಗಾಗಿ ಮಾತ್ರ 'ಮೇಲುಕೋಟೆ ಮಂಜ'

ಜಗ್ಗೇಶ್ ಅವರು ನಟಿಸಿ ನಿರ್ದೇಶನ ಮಾಡಿರುವ 'ಮೇಲುಕೋಟೆ ಮಂಜ' ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಚೀಟಿ ಹೆಸರಿನಲ್ಲಿ ಜನರಿಗೆ ವಂಚನೆ ಮಾಡಿ ಎಸ್ಕೇಪ್ ಆಗುವವನ ಕಥೆಯನ್ನು ಚಿತ್ರ ಹೊಂದಿದೆ. ಐಂದ್ರಿತಾ ರೇ, ರಂಗಾಯಣ ರಘು ಸೇರಿದಂತೆ ಮುಂತಾದವರು ನಟಿಸಿದ್ದಾರೆ.

Rank ಸ್ಟಾರ್ 'ಸ್ಮೈಲ್ ಪ್ಲೀಸ್'

ಚಿತ್ರದ ಟೈಟಲ್ ನಲ್ಲಿಯೇ ಪ್ಲೀಸ್ ನಗಿ ಅಂತ ಕೇಳುತ್ತ ಸೆನ್ಸೇಷನ್ ಕ್ರಿಯೇಟ್ ಮಾಡಿರುವ 'ಸ್ಮೈಲ್ ಪ್ಲೀಸ್' ನಾಳೆ ಭರ್ಜರಿ ಆಗಿ ತೆರೆ ಮೇಲೆ ಅಪ್ಪಳಿಸುತ್ತಿದೆ. ರಘು ಸಮರ್ಥ್ ಕಥೆ, ಚಿತ್ರಕಥೆ, ಸಂಭಾ‍ಷಣೆ ಬರೆದು ಸ್ವತಂತ್ರ ನಿರ್ದೇಶಕರಾಗಿರುವ ಈ ಚಿತ್ರವನ್ನು ಕೆ.ಮಂಜು ನಿರ್ಮಾಣ ಮಾಡಿದ್ದಾರೆ. Rank ಸ್ಟಾರ್ ಗೆ ಕಾವ್ಯಾ ಶೆಟ್ಟಿ ಜೋಡಿ ಆಗಿದ್ದು, ನೆಹಾ ಪಾಟೀಲ್, ಸುಧಾ ಬೆಳವಾಡಿ, ರಂಗಾಯರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಒತ್ತಡ ಜೀವನದಲ್ಲಿ ಯಾವಾಗಲು ಮುಖ ಗಂಟಾಗಿಕೊಂಡೇ ಇರುವ ಎಲ್ಲರನ್ನೂ ನಗಿಸುವ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ 'ಸ್ಮೈಲ್ ಪ್ಲೀಸ್'.

ಸಸ್ಪೆನ್ಸ್ ಸಿನಿಮಾ 'ಅಮರಾವತಿ'

ಈಗಾಗಲೇ ಟ್ರೈಲರ್ ಮೂಲಕವೇ ಸಖತ್ ಸದ್ದು ಮಾಡಿರುವ 'ಅಮರಾವತಿ' ಚಿತ್ರ ಸಹ ನಾಳೆ(ಫೆ.10) ಬಿಡುಗಡೆ ಆಗುತ್ತಿದೆ. 'ಜಟ್ಟ' ಮತ್ತು 'ಮೈತ್ರಿ' ಯಂತ ಅಪರೂಪದ ಸಿನಿಮಾಗಳನ್ನು ಕೊಟ್ಟಿರುವ ಬಿ.ಎಂ.ಗಿರಿರಾಜ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪೌರಕಾರ್ಮಿಕನ ದುರಂತ ಬುದುಕಿನ ಚಿತ್ರಣವನ್ನು ಹೊಂದಿರುವ ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ನೀನಾಸಂ ಅಶ್ವಥ್, ವಿದ್ಯಾ ವೆಂಕಟರಾಮ್, ಹೇಮಂತ್, ವೈಶಾಲಿ ದೀಪಕ್ ಮುಂತಾದವರು ನಟಿಸಿದ್ದಾರೆ.

'ಏನೆಂದು ಹೆಸರಿಡಲಿ'

ಕಿರುತೆರೆಯ ಹಿಟ್ ಧಾರಾವಾಹಿ 'ಪುಟ್ಟಗೌರಿ' ಮೂಲಕ ಮನೆ ಮಾತಾಗಿರುವ ರವಿ ಬಸಪ್ಪದೊಡ್ಡಿ ಅವರು 'ಏನೆಂದು ಹೆಸರಿಡಲಿ' ಚಿತ್ರ ನಿರ್ದೇಶನ ಮಾಡಿದ್ದು, ಜೋಗಿ ಅವರು ಸಂಭಾಷಣೆ ಬರೆದಿದ್ದಾರೆ. ಪ್ರೀತಿ ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಇರುವ ಈ ಚಿತ್ರದಲ್ಲಿ ಅರುಣ್ ಮತ್ತು ರೋಜಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶೃತಿ ಕುಲಕರ್ಣಿ ಮತ್ತು ಶ್ರೀನಿವಾಸ ಕುಲಕರ್ಣಿ ಚಿತ್ರ ನಿರ್ಮಾಣ ಮಾಡಿದ್ದಾರೆ.

English summary
Kannada Actor Jaggesh starrer 'Melukote Manja' , 'Smile Please', 'Amaravathi', 'Enendu Hesaridali' Movies are releasing tomorrow(Feb,10)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada