For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!

  |

  ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳದ್ದೇ ಸದ್ದು. ಒಂದು ಕಡೆ 'ಕಾಂತಾರ' ರಿಲೀಸ್ ಆದ ಎಲ್ಲಾ ಭಾಷೆಯಲ್ಲೂ ಬಾಕ್ಸಾಫೀಸ್‌ ಲೂಟಿ ಮಾಡುತ್ತಿದೆ. ಇನ್ನೊಂದು ಕಡೆ ಯಶ್ ಮುಂದಿನ ಸಿನಿಮಾ ಯಾವುದು ಅಂತ ಎದುರು ನೋಡುತ್ತಿದೆ.

  ಸದ್ಯ ಭಾರತೀಯ ಚಿತ್ರರಂಗದಲ್ಲಿ 'ಕಾಂತಾರ' ಹಾಗೂ ಯಶ್ ಬಗ್ಗೆನೇ ಹೆಚ್ಚು ಚರ್ಚೆಯಾಗುತ್ತಿದೆ. 'ಕೆಜಿಎಫ್ 2' ಅಂತಹ ಬ್ಲಾಕ್‌ ಬಸ್ಟರ್ ಸಿನಿಮಾ ನೀಡಿದ ಬಳಿಕವೂ ಯಶ್ ಸೈಲೆಂಟ್‌ ಆಗಿದ್ದಾರೆ. ಮುಂದಿನ ಸಿನಿಮಾ ಯಾವುದು ಅನ್ನೋದನ್ನು ಇನ್ನೂ ಅನೌನ್ಸ್ ಮಾಡಿಲ್ಲ.

  'ಕಾಂತಾರ' ವಿತರಿಸಿದ್ದ ಅಲ್ಲು ಅರವಿಂದ್ ಜೇಬು ಸೇರಿದ್ದು ಬರೀ ₹4 ಕೋಟಿ ಅಷ್ಟೇನಾ? ಲೆಕ್ಕ ಮಿಸ್ ಆಗಿದ್ದೆಲ್ಲಿ?'ಕಾಂತಾರ' ವಿತರಿಸಿದ್ದ ಅಲ್ಲು ಅರವಿಂದ್ ಜೇಬು ಸೇರಿದ್ದು ಬರೀ ₹4 ಕೋಟಿ ಅಷ್ಟೇನಾ? ಲೆಕ್ಕ ಮಿಸ್ ಆಗಿದ್ದೆಲ್ಲಿ?

  ಈ ಮಧ್ಯೆ ಯಶ್ ಖಾಸಗಿ ಮಾಧ್ಯಮವೊಂದರ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗ, ಕಾಂತಾರ ಹಾಗೂ ಕನ್ನಡದ ಸಿನಿಮಾಗಳ ಬಗ್ಗೆಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ ಯಶ್ ಸಂವಾದದಲ್ಲಿ 'ಕಾಂತಾರ' ಬಗ್ಗೆ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಕಾಂತಾರ ಕೂಡ ನನ್ನ ಸಿನಿಮಾನೇ'

  'ಕಾಂತಾರ ಕೂಡ ನನ್ನ ಸಿನಿಮಾನೇ'

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ' ಇನ್ನೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. ದೂ ಭಾಷೆಗಳಲ್ಲಿ 'ಕಾಂತಾರ' ಸದ್ದು ಮಾಡುತ್ತಿದೆ. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಕೂಡ ಈ ಸಿನಿಮಾ ಬಗ್ಗೆನೇ ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಇಂಡಿಯಾ ಟುಡೇ ನ್ಯೂಸ್‌ ಚಾನೆಲ್ ಹಮ್ಮಿಕೊಂಡಿದ್ದ ಸಂವಾದದಲ್ಲಿ 'ಕಾಂತಾರ' ಸಿನಿಮಾ ಕೂಡ ನನ್ನದೇ ಸಿನಿಮಾ ಎಂದಿದ್ದಾರೆ. ಯಶ್ ಹೇಳಿದ ಈ ಮಾತೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಹೊಂಬಾಳೆ ನಿರ್ಮಿಸಿದ 7 ಸಿನಿಮಾಗಳ ಕಲೆಕ್ಷನ್ ₹2000 ಕೋಟಿ: ಯಾವ್ಯಾವ ಸಿನಿಮಾ ಗಳಿಕೆ ಎಷ್ಟೆಷ್ಟು?ಹೊಂಬಾಳೆ ನಿರ್ಮಿಸಿದ 7 ಸಿನಿಮಾಗಳ ಕಲೆಕ್ಷನ್ ₹2000 ಕೋಟಿ: ಯಾವ್ಯಾವ ಸಿನಿಮಾ ಗಳಿಕೆ ಎಷ್ಟೆಷ್ಟು?

  ಯಶ್ ಹೇಳಿದ್ದೇನು?

  ಯಶ್ ಹೇಳಿದ್ದೇನು?

  ಯಶ್‌ಗೆ ಪ್ರಶ್ನೆ ಮಾಡುವಾಗ ನಿರೂಪಕ ಕಾಂತಾ ನಿಮ್ಮ ಸಿನಿಮಾ ಅಲ್ಲ. ಕನ್ನಡ ಸಿನಿಮಾ ಅದೂ ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದೆಯಲ್ಲ ಎಂಬ ಅರ್ಥದಲ್ಲಿ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಯಶ್ ತಿರುಗೇಟು ನೀಡಿದ್ದರು. "ಸರ್ ಕಾಂತಾರ ಕೂಡ ನನ್ನ ಸಿನಿಮಾನೇ.. ನೀವು ನನ್ನ ಸಿನಿಮಾ ಅಲ್ಲ ಅಂತ ಹೇಳಿದ್ರಿ. ಆದರೆ ಅದು ಕೂಡ ನನ್ನ ಸಿನಿಮಾನೇ. ಕಾಂತಾರ ಸಿನಿಮಾ ಕರ್ನಾಟಕದ ಸಿನಿಮಾ. ಇದು ತುಂಬಾನೇ ಚೆನ್ನಾಗಿ ಗಳಿಕೆ ಮಾಡುತ್ತಿದೆ. ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಕಡೆಯಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ." ಎಂದು ಕಾಂತಾರ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಶೆಟ್ಟರ ಸಿನಿಮಾಗಳ ಮೇಲೆ ಯಶ್ ಆಸಕ್ತಿ!

  ಶೆಟ್ಟರ ಸಿನಿಮಾಗಳ ಮೇಲೆ ಯಶ್ ಆಸಕ್ತಿ!

  'ಕಾಂತಾರ' ಬಗ್ಗೆ ಅಷ್ಟೇ ಅಲ್ಲ. ಶೆಟ್ಟರ ಬತ್ತಳಿಕೆಯಿಂದ ಬಂದ ಮತ್ತೆರಡು ಸಿನಿಮಾಗಳ ಬಗ್ಗೆನೂ ಮಾತಾಡಿದ್ದಾರೆ. " ಗರುಡ ಗಮನ ವೃಷಭ ವಾಹನ ಅಂತ ಒಂದು ಸಿನಿಮಾವಿದೆ. ಇದು ಕೂಡ ಕನ್ನಡ ಸಿನಿಮಾ, 'ಚಾರ್ಲಿ 777' ಅದೂ ಕೂಡ ನಮ್ಮ ಕನ್ನಡ ಸಿನಿಮಾನೇ." ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಈ ಮಧ್ಯೆ 'ಕೆಜಿಎಫ್ 2' ಸಕ್ಸಸ್ ಬಳಿಕ ಯಶ್ ಏನು ಮಾಡುತ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಯಾವ ಸಿನಿಮಾ ಮಾಡುತ್ತಾರೆ? 'ಕೆಜಿಎಫ್ 3'ಗೆ ಜೈ ಅಂತಾರಾ? ಅನ್ನೋ ನಿರೀಕ್ಷೆಯಿತ್ತು. ಆದರೆ, ಯಶ್ ಅವೆಲ್ಲವನ್ನೂ ನಿಗೂಢವಾಗಿಯೇ ಇಟ್ಟಿದ್ದಾರೆ. ತಾನು ಹೇಳುವವರೆಗೂ ಯಾವುದೂ ಅಧಿಕೃತವಲ್ಲ ಎಂದು ಯಶ್ ಹೇಳಿದ್ದಾರೆ. ಹೀಗಾಗಿ 'ಕೆಜಿಎಫ್ 3' ಹಾಗೂ ಹೊಸ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

  ರಿಷಬ್‌ ಮೊದಲು ವಿಶ್ ಮಾಡಿದ್ಯಾರು?

  ರಿಷಬ್‌ ಮೊದಲು ವಿಶ್ ಮಾಡಿದ್ಯಾರು?

  'ಕಾಂತಾರ' ಸಿನಿಮಾ ಬಿಡುಗಡೆಯಾಗುವ ಹೊಸ್ತಿಲ್ಲಿ ರಿಷಬ್ ಶೆಟ್ಟಿ ಫುಲ್ ಟೆನ್ಷನ್ ಆಗಿದ್ದರು. ಈ ವೇಳೆ ಮೊದಲ ರಿಷಬ್ ಶೆಟ್ಟಿಗೆ ವಿಶ್ ಮಾಡಿ ಧೈರ್ಯ ತುಂಬಿದ್ದು ರಾಕಿಂಗ್ ಸ್ಟಾರ್ ಯಶ್. ಈ ಮಾತನ್ನು ಸ್ವತ: ರಿಷಬ್ ಶೆಟ್ಟಿನೇ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾ ಬಿಡುಗಡೆಯಾದಲ್ಲಿಂದ ಬಾಕ್ಸಾಫೀಸ್‌ನಲ್ಲಿ ಭರ್ಜರಿಯಾಗಿ ಲೂಟಿ ಮಾಡುತ್ತಿದೆ. ಅಲ್ಲದೆ ಕೆಜಿಎಫ್ ದಾಖಲೆಯನ್ನೇ ಉಡೀಸ್ ಮಾಡುತ್ತಿದೆ.

  English summary
  Rishab Shetty Starrer Kantara Is Also My Film Says Yash In An Interview With Rajdeep Sardesai, Know More.
  Sunday, November 6, 2022, 12:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X