For Quick Alerts
  ALLOW NOTIFICATIONS  
  For Daily Alerts

  'ಉಳಿದವರು ಕಂಡಂತೆ' ಮುನ್ನ ರೋಲ್ ರಿಷಬ್‌ ಕೈ ತಪ್ಪಿ ಕಿಶೋರ್‌ಗೆ ಹೋಗಿದ್ದೇಗೆ?

  |

  ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಾಂತಾರ'. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ನಾಡ ಹಬ್ಬದಲ್ಲಿ ಏನಾದರೂ ಕಮಾಲ್ ಮಾಡಬಹುದು ಅನ್ನೋ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಎದುರು ನೋಡುತ್ತಿದೆ.

  'ಕಾಂತಾರ' ಕಾಡು ಮತ್ತು ಮನುಷ್ಯನ ನಡುವಿನ ಸಂಘರ್ಷ ಕಥೆಯನ್ನು ತೆರೆಮೇಲೆ ತಂದಿದ್ದಾರೆ. ಇದು ತೆರೆಮೇಲೆ ರಿಷಬ್ ಶೆಟ್ಟಿ ಹಾಗೂ ಕಿಶೋರ್ ನಡುವಿನ ಸಂಘರ್ಷ ಅಂತಲೂ ಹೇಳಬಹುದು. ಆ ಮಟ್ಟಿಗೆ ಸದ್ದು ಮಾಡಿರೋ ಈ ಸಿನಿಮಾ ಭವಿಷ್ಯ ಇನ್ನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ.

  'ಕಾಂತಾರ' ನಟಿ ಸಪ್ತಮಿ ಮೂಗಿನ ಎರಡೂ ಕಡೆ ಬೊಟ್ಟು ಚುಚ್ಚಿಸಿಕೊಂಡಿದ್ದೇಕೆ? ರಿಷಬ್ ಕಣ್ಣಿಗೆ ಬಿದ್ದಿದ್ದೇಗೆ?'ಕಾಂತಾರ' ನಟಿ ಸಪ್ತಮಿ ಮೂಗಿನ ಎರಡೂ ಕಡೆ ಬೊಟ್ಟು ಚುಚ್ಚಿಸಿಕೊಂಡಿದ್ದೇಕೆ? ರಿಷಬ್ ಕಣ್ಣಿಗೆ ಬಿದ್ದಿದ್ದೇಗೆ?

  ಕಿಶೋರ್ ಹಾಗೂ ರಿಷಬ್ ಶೆಟ್ಟಿ ಇಬ್ಬರೂ 'ಕಾಂತಾರ' ಸಿನಿಮಾ ಬಗ್ಗೆ ಮಾತಾಡುವಾಗ 'ಉಳಿದವರು ಕಂಡಂತೆ' ಸಿನಿಮಾವನ್ನು ಎಳೆದು ತಂದಿದ್ದಾರೆ. ಈ ಚಿತ್ರದಲ್ಲಿ ಕಿಶೋರ್ ನಟಿಸಿದ್ದ ಮುನ್ನ ಪಾತ್ರ ಕೈ ತಪ್ಪಿದ್ದೇಗೆ? ಇದು ರಿಷಬ್ ಶೆಟ್ಟಿ ಜೀವನದ ಭಯಂಕರ ಘಟನೆ ಹೇಗೆ? ಇದಕ್ಕೆ ಕಿಶೋರ್ ಪ್ರತಿಕ್ರಿಯೆ ಏನು? ಅಂತ ತಿಳಿಯಲು ಮುಂದೆ ಓದಿ.

  ರಿಷಬ್ ಬದುಕಿನ ಭಯಂಕರ ಘಟನೆಯೇನು?

  ರಿಷಬ್ ಬದುಕಿನ ಭಯಂಕರ ಘಟನೆಯೇನು?

  "ಉಳಿದವರು ಕಂಡಂತೆ ಸಂಪೂರ್ಣ ಪ್ರಕ್ರಿಯೆಯಲ್ಲಿ ನಾನಿದ್ದೆ. ಅದರ ಬರವಣಿಗೆ ಜೊತೆಗೆ ರಕ್ಷಿತ್ ಜೊತೆಗೆ ಇದ್ದೆ. ಅವನಿಗೆ ಸ್ಪೀಡ್‌ ಆಗಿ ಟೈಪ್ ಮಾಡುವುದಕ್ಕೆ ಆಗುತ್ತೆ ಅಂತ ಇಂಗ್ಲಿಷ್‌ನಲ್ಲಿ ಟೈಪ್ ಮಾಡುತ್ತಿದ್ದ. ಅವನು ಕನ್ನಡ ಟ್ರಾನ್ಸ್‌ಲೇಟ್‌ ಮಾಡುವುದಕ್ಕೆ ಕೂತಾಗ ನಾನು ಬರೆಯುವುದಕ್ಕೆ ಕೂರುತ್ತಿದ್ದೆ. ಅಲ್ಲಿಂದ ದೌರ್ಭಾಗ್ಯ ಅಥವಾ ನನ್ನ ಜೀವನದಲ್ಲಿ ಭಯಂಕರವಾದ ಘಟನೆ ನಡೆದು ಬಿಡುತ್ತೆ." ಎಂದು ರಿಷಬ್‌ಗೆ ಮುನ್ನ ಪಾತ್ರದ ಮೇಲೆ ಒಲಿವಿದ್ದಿದ್ದನ್ನು ರಿವೀಲ್ ಮಾಡಿದ್ದಾರೆ.

  'ಕಾಂತಾರ' Vs 'ಪೊನ್ನಿಯಿನ್ ಸೆಲ್ವನ್': ರಿಷಬ್ ಶೆಟ್ಟಿ ಸಿನಿಮಾವನ್ನು ಮೀರಿಸ್ತಿದೆ ತಮಿಳು ಸಿನಿಮಾ ಟಿಕೆಟ್ ಬುಕ್ಕಿಂಗ್!'ಕಾಂತಾರ' Vs 'ಪೊನ್ನಿಯಿನ್ ಸೆಲ್ವನ್': ರಿಷಬ್ ಶೆಟ್ಟಿ ಸಿನಿಮಾವನ್ನು ಮೀರಿಸ್ತಿದೆ ತಮಿಳು ಸಿನಿಮಾ ಟಿಕೆಟ್ ಬುಕ್ಕಿಂಗ್!

  ಕಿಶೋರ್ ಪಾತ್ರದ ಮೇಲೆ ರಿಷಬ್‌ಗೆ ಕಣ್ಣು

  ಕಿಶೋರ್ ಪಾತ್ರದ ಮೇಲೆ ರಿಷಬ್‌ಗೆ ಕಣ್ಣು

  "ನನಗೆ ಮುನ್ನ ಪಾತ್ರದ ಮೇಲೆ ಕಣ್ಣಿತ್ತು. ರಿಚ್ಚಿ ಅಂತೂ ಸಿಗಲ್ಲ ಅಂತ ಗೊತ್ತಿತ್ತು. ಅಜ್ಜು ಜೊತೆಗೆ ಅಲ್ಲಿ ಹೋಗಿ ಕಂಪೋಸ್ ಮಾಡೋದು. ಘಾಟಿಯ ಇಳಿದು ಸಾಂಗ್ ಬೇರೆ ಕಂಪೋಸ್ ಆಗಿತ್ತು. ಸಾಂಗ್ ಕೇಳಿದ ತಕ್ಷಣ ನನಗೆ ಒಂದು ಸ್ಕೀಮ್ ಹೊಳೀತು. ಈ ಸಾಂಗ್ ಬಂದು ಬಿಟ್ಟರೆ, ಗ್ಯಾರಂಟಿ ಇನ್ನೊಂದಿಷ್ಟು ಪಿಚ್ಚರ್ ಸಿಗುತ್ತೆ. ಯಾಕಂದ್ರೆ, ಈ ಸಾಂಗ್ ಪಕ್ಕಾ ಹಿಟ್ ಆಗುತ್ತೆ. ಇದನ್ನು ಗ್ಯಾರಂಟಿ ವಿಜ್ಯೂವಲಿ ಬಿಡುತ್ತಾನೆ. ಒಳ್ಳೆ ಪಬ್ಲಿಸಿಟಿ ಆಗುತ್ತೆ, ಚೆನ್ನಾಗಿ ಆಗುತ್ತೆ ಅಂತ ಫುಲ್ ಸ್ಕೀಮ್‌ನಲ್ಲಿದ್ದೆ." ಅಂತಾರೆ ರಿಷಬ್ ಶೆಟ್ಟಿ.

  ರಿಷಬ್ ಕೈ ತಪ್ಪಿದ ಮುನ್ನ ಪಾತ್ರ

  ರಿಷಬ್ ಕೈ ತಪ್ಪಿದ ಮುನ್ನ ಪಾತ್ರ

  "ರಕ್ಷಿತ್ ಶೆಟ್ಟಿ ಈ ಕ್ಯಾರೆಕ್ಟರ್ ಅನ್ನು ಕಿಶೋರ್‌ಗೆ ಹೇಳೋಣ ಅಂದ. ಒಳಗೊಳಗೆ ನನಗೆ ಸಂಕಟ. ಬೇರೆ ಯೋಚನೆ ಮಾಡೋಕೆ ಆಗಲ್ಲ. ಒಳಗೊಳಗೆ ಅಯ್ಯೋ ಕೈ ತಪ್ಪಿ ಹೋಯ್ತು ಅಂದುಕೊಂಡೆ. ನಿಮಗೆ ಕಥೆ ಹೇಳಿದಾಗ 'ಮುನ್ನ' ಪಾತ್ರ ಲವರ್ ಬಾಯ್. ಬಹುಶ: ಇವರು ಆಗೋದಿಲ್ಲ ಅಂತ ಹೇಳ್ತೀರಾ ಅಂದ್ಕೊಂಡಿದ್ದೆ." ಎಂದು ಅಂದಿನ ಘಟನೆಯನ್ನು ರಿಷಬ್ ಶೆಟ್ಟಿ ನೆನಪಿಸಿಕೊಂಡಿದ್ದಾರೆ."

  ಕಿಶೋರ್ ಮುನ್ನ ಆಗಿದ್ದು ಹೇಗೆ?

  ಕಿಶೋರ್ ಮುನ್ನ ಆಗಿದ್ದು ಹೇಗೆ?

  ರಿಷಬ್ ಶೆಟ್ಟಿ ಉಳಿದವರು ಕಂಡಂತೆ ಸಿನಿಮಾ ಮುನ್ನ ಪಾತ್ರ ಕೈ ತಪ್ಪಿದನ್ನು ಅವರ ಮುಂದೆನೇ ರಿವೀಲ್ ಮಾಡಿದ್ದಾರೆ. ಇತ್ತ ಕಿಶೋರ್ ಕೂಡ ಈ ಪಾತ್ರ ಒಪ್ಪಿಕೊಂಡಿದ್ದೇಕೆ? ಅನ್ನು ಅವರದ್ದೇ ಸ್ಟೈಲ್‌ನಲ್ಲಿ ಹೇಳಿದ್ದಾರೆ. "ಹಾಡು ಕೇಳಿಸಿದ್ರು. ಹಾಡು ಭಯಂಕರ ಇಷ್ಟ ಆಗಿತ್ತು. ನನಗೆ ಮೊದಲಿನಿಂದಲೂ ಅನಿಸುತ್ತಿತ್ತು. ಈಗಲೂ ಸತ್ಯ ಕೂಡ. ಹಾಡಿನ ಜೊತೆ ಸೇರಿಕೊಂಡಿರೋ ನಟರಿಗೆ ಸಾವಿಲ್ಲ. ಯಾಕಂದ್ರೆ ಮ್ಯೂಸಿಕ್‌ಗೆ ಸಾವಿಲ್ಲವಲ್ಲ. ಇವತ್ತಿಗೂ ಯಾರಾದರೂ ನನ್ನನ್ನು ಕನ್ನಡದಲ್ಲಿ ನೋಡಿದ್ದರೆ ಆ ಹಾಡಿನಲ್ಲೇ ನೋಡಿರುತ್ತಾರೆ. ಆದರೆ, ರಿಚ್ಚಿ ಬಗ್ಗೆ ಆಸಕ್ತಿ ಇತ್ತು. ಸರಿ ಇದಾದ್ರೂ ಮಾಡ್ತೀನಿ ಅಂದೆ. " ಎಂದಿದ್ದಾರೆ ನಟ ಕಿಶೋರ್.

  English summary
  Kantara Stars Rishab Shetty And Kishore Revealed About Rakshit Movie Ulidavaru Kandanthe, Know More.
  Wednesday, September 28, 2022, 16:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X