twitter
    For Quick Alerts
    ALLOW NOTIFICATIONS  
    For Daily Alerts

    ಸಿಸಿಎಲ್ ಫೈನಲಿಗೆ ಹೆಡ್ ಆಫೀಸಿಂದ ಯಾರೂ ಇಲ್ಲ

    |

    ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಾಚಿಸುವಂತೆ ಸೇರಿದ್ದ ಭಾರೀ ಜನಸ್ತೋಮದ ಮಧ್ಯೆ ನಡೆದ ಸಿಸಿಎಲ್ ಫೈನಲ್ ಪಂದ್ಯದಲ್ಲಿ ಕಿಚ್ಚ ಸುದೀಪ್ ಪಡೆ ಭರ್ಜರಿ ಜಯಭೇರಿ ಬಾರಿಸಿದೆ.

    ಸತತ ಎರಡು ಫೈನಲ್ ಪಂದ್ಯದಲ್ಲಿ ಸೋತಿದ್ದ ಕರ್ನಾಟಕ ಬುಲ್ಡೋಜರ್ಸ್ ಈ ಬಾರಿಯ ಫೈನಲ್ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು 26 ರನ್ ಗಳಿಂದ ಸೋಲಿಸಿ ಇದೇ ಮೊದಲ ಬಾರಿಗೆ ಜಯದ ನಗು ಬೀರಿದೆ.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ ಐದು ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತು. ತಂಡದ ಭರವಸೆಯ ಆಟಗಾರ ಧ್ರುವ್ ಶರ್ಮಾ 54 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ತೆಲುಗು ವಾರಿಯರ್ಸ್ ತಂಡ ನಿಗದಿತ ಇಪ್ಪತ್ತು ಒವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 122 ರನ್ ಗಳಿಸಿ 26 ರನ್ ಮೂಲಕ ಸೋಲೊಪ್ಪಿಕೊಂಡಿತು.

    ಬೆಂಗಳೂರಿನಲ್ಲಿ ನಡೆದ ಈ ಪಂದ್ಯಕ್ಕೆ ತಂಡದ ಸದಸ್ಯರು, ಇತರೇ ಆಟಗಾರರು ಬಿಟ್ಟರೆ ಕನ್ನಡ ಚಿತ್ರರಂಗದ ಹೆಚ್ಚಿನ ಕಲಾವಿದರ ಗೈರು ಹಾಜರು ಎದ್ದು ಕಾಣುತ್ತಿತ್ತು. ದರ್ಶನ್ ಮತ್ತು ಚಿರಂಜೀವಿ ಸರ್ಜಾ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯದಿದ್ದರೂ ತಂಡದ ಯುನಿಫಾರ್ಮ್ ಧರಿಸಿ ಕೂತಿದ್ದರು.ಪಂದ್ಯದ ನೇರಪ್ರಸಾರ ತಾಂತ್ರಿಕವಾಗಿ ಅಷ್ಟೇನೂ ಗುಣಮಟ್ಟವಾಗಿರಲಿಲ್ಲ.

    ನೇರ ಪಂದ್ಯ ವೀಕ್ಷಿಸಲು ಬಂದು ತಂಡಕ್ಕೆ ಹುರುಪು ನೀಡಿದ ಆಟಗಾರರು ಯಾರು ? ಪ್ರಿಯಾಮಣಿ, ಅಂಬರೀಶ್ ಮತ್ತು ಚೆನ್ನೈ ರಿನೋಸ್ ತಂಡದ ನಾಯಕ ಕಿಚ್ಚ ಪಡೆ ಬಗ್ಗೆ ಹೇಳಿದ್ದೇನು? ಸ್ಲೈಡಿನಲ್ಲಿ ನೋಡಿ.

    ಸಿಸಿಎಲ್ ನಲ್ಲಿ ಭರ್ಜರಿ ಜಯ ಸಾಧಿಸಿದ ಕಿಚ್ಚ ಸುದೀಪ್ ಮತ್ತು ಕರ್ನಾಟಕ ಬುಲ್ಡೊಜರ್ಸ್ ತಂಡಕ್ಕೆ ಅಭಿನಂದನೆಗಳು.

    ಸಿಸಿಎಲ್ ಫೈನಲ್ ಗ್ಯಾಲರಿ

    ಯಾರ್ಯಾರು ಬಂದಿದ್ದರು (ಪ್ರಮುಖವಾಗಿ)

    ಯಾರ್ಯಾರು ಬಂದಿದ್ದರು (ಪ್ರಮುಖವಾಗಿ)

    ಶಾಸಕ ಅನಿಲ್ ಲಾಡ್
    ರವಿಚಂದ್ರನ್
    ಮುನಿರತ್ನ ನಾಯ್ಡು
    ಡಾ. ಅಂಬರೀಶ್
    ರಾಕ್ ಲೈನ್ ವೆಂಕಟೇಶ್
    ಸುಮಲತಾ ಅಂಬರೀಶ್
    ಪ್ರಣೀತಾ
    ಐಂದ್ರಿತಾ ರೇ
    ಪ್ರಿಯಾಮಣಿ
    ಬಿಪಾಸ ಬಸು

    ಪ್ರಿಯಾಮಣಿ ಹೇಳಿದ್ದೇನು?

    ಪ್ರಿಯಾಮಣಿ ಹೇಳಿದ್ದೇನು?

    ನಾನು ತೆಲುಗು ಚಿತ್ರದಲ್ಲಿ ಹೆಚ್ಚು ನಟಿಸಿದ್ದೇನೆ, ನಂತರದ ಸ್ಥಾನ ತಮಿಳು ಮತ್ತು ಕನ್ನಡಕ್ಕೆ. ನಾನು ತೆಲುಗು ಮತ್ತು ಕನ್ನಡದ ರಾಯಭಾರಿ. ಯಾವ ತಂಡ ಜಯಿಸಿದರೂ I am happy.

    ಚೆನ್ನೈ ರಿನೋಸ್ ತಂಡದ ನಾಯಕ ವಿಶಾಲ್

    ಚೆನ್ನೈ ರಿನೋಸ್ ತಂಡದ ನಾಯಕ ವಿಶಾಲ್

    ಕರ್ನಾಟಕ ಮತ್ತು ಚೆನ್ನೈ ನಡುವಣ ಪಂದ್ಯ ಇಂಡಿಯಾ ಮತ್ತು ಪಾಕಿಸ್ತಾನ ಪಂದ್ಯದ ಹಾಗೆ. ಸುದೀಪ್ ಪಡೆ ಉತ್ತಮ ಸಮತೋಲನ ಹೊಂದಿದ ತಂಡ. ಕರ್ನಾಟಕ ಮತ್ತು ತೆಲುಗು ತಂಡಕ್ಕೆ ಆಲ್ ದಿ ಬೆಸ್ಟ್.

    ಅಂಬರೀಶ್

    ಅಂಬರೀಶ್

    ನಾವೆಲ್ಲಾ ಕಲಾವಿದರು ಒಟ್ಟು ಸೇರಿ ಆಡುತ್ತಿದ್ದೇವೆ. ಈ ಮೂಲಕ ದೇಶದ ಎಲ್ಲಾ ಕಲಾವಿದರು ಒಂದಾಗುವ ಅವಕಾಶ ನಮಗೆ ಸಿಕ್ಕಿದೆ. ಕರ್ನಾಟಕ ಬುಲ್ಡೊಜರ್ಸ್ ತಂಡವನ್ನು ಹುರಿದುಂಬಿಸಲು ಬಂದಿದ್ದೇನೆ.

    ಮನೀಶ್ ತಿವಾರಿ

    ಮನೀಶ್ ತಿವಾರಿ

    ಸಿಸಿಎಲ್ ಫೈನಲ್ ಪಂದ್ಯ ನೋಡಲು ಬಂದಿದ್ದೇನೆ. ಮುಂದಿನ ಫೈನಲ್ ನಾವು ಆಡಲು ಇದರಿಂದ ಉಪಯೋಗವಾಗಲಿದೆ. ಎರಡೂ ತಂಡಕ್ಕೆ ಆಲ್ ದಿ ಬೆಸ್ಟ್.

    ರಿತೇಶ್ ದೇಶಮುಖ್

    ರಿತೇಶ್ ದೇಶಮುಖ್

    ಈ ಬಾರಿಯ ಸಿಸಿಎಲ್ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಪ್ರದರ್ಶನ ನೀಡುತ್ತೇವೆ.

    ವೆಂಕಟೇಶ್

    ವೆಂಕಟೇಶ್

    ಅಂದ್ರೂ ಬಾಗುನಾರಾ? ಕರ್ನಾಟಕ ಉತ್ತಮ ತಂಡ, ಮುಂದಿನ ಸಿಸಿಎಲ್ ನಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡುತ್ತೇವೆ.

    English summary
    Karnataka Bulldozers have won the Celebrity Cricket League final against Telugu Warriors by 26 runs at Chinnaswamy stadium here Sunday i.e. 10th Mar 2013.
    Monday, March 11, 2013, 11:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X