For Quick Alerts
  ALLOW NOTIFICATIONS  
  For Daily Alerts

  ಕಾಸರಗೋಡಿನಲ್ಲಿ ನಡೆಯುವ ಕಥೆ 'ಅಟ್ಲಿ'ಗೆ ರಿಷಬ್ ಶೆಟ್ಟಿ ಸಾಥ್!

  |

  ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮ ಜೋರಾಗಿದೆ. ದೀಪಾವಳಿ ಹಬ್ಬಕ್ಕೆ ಕನ್ನಡ ಸಿನಿಮಾವೊಂದು ಬೇರೆ ಚಿತ್ರರಂಗಕ್ಕೂ ಲಗ್ಗೆ ಇಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದೆ. ರಿಷಬ್ ಶೆಟ್ಟಿ ಹಾಗೂ ಅವರ 'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿರೋದು ನೋಡಿದ್ರೆ, ಹೊಸ ದಾಖಲೆ ಬರೋದು ಕನ್ಫರ್ಮ್ ಎನಿಸುತ್ತಿದೆ.

  ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾ ಅಷ್ಟೇ ಅಲ್ಲ, ಸ್ಮಾಲ್ ಬಜೆಟ್ ಸಿನಿಮಾಗಳೂ ದೇಶಾದ್ಯಂತ ಸದ್ದು ಮಾಡಲಿವೆ ಅನ್ನೋ ಪ್ರೂವ್ ಆಗಿದೆ. ಈ ಜೋಷ್‌ನಲ್ಲೇ ಸಾಕಷ್ಟು ಸಿನಿಮಾಗಳು ಸೆಟ್ಟೇರುತ್ತಿವೆ.

  ಹೊಸ ಬರ ತಂಡವೊಂದು ಕಾಸರಗೋಡಿನ ಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದೆ. ಈಗಾಗಲೇ ರಿಷಬ್ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಮಾಡಿ ಗೆದ್ದಿದ್ದರು. ಆ ಬೆನ್ನಲ್ಲೇ ಕಾಸರಗೋಡಿನ ಕಥೆ ತೆರೆಮೇಲೆ ಬರುವುದಕ್ಕೆ ಸಜ್ಜಾಗಿದೆ. ಅಂದ್ಹಾಗೆ ಈ ಸಿನಿಮಾ 'ಅಟ್ಲಿ'.

  'ಅಟ್ಲಿ'ಗೆ ನಿರ್ದೇಶಕ ರಂಗನಾಥ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಸಿನಿಮಾ ಮುನ್ನ ಇವರು 'ಅರಿವು', 'ಪ್ರಭುತ್ವ' ಅನ್ನುವ ಸಿನಿಮಾಗಳನ್ನು ನಿರ್ದೇಶಿಸಿದ್ದರು. ರಂಗನಾಥ್ ಅವರಿಗೆ 'ಅಟ್ಲಿ' ಮೂರನೇ ಸಿನಿಮಾ.

  ಅಂದ್ಹಾಗೆ ಈ ಸಿನಿಮಾದ ಶೂಟಿಂಗ್ ಇದೇ 27ರಿಂದ ಆರಂಭವಾಗುತ್ತಿದೆ. ತುಮಕೂರಿನ ಶ್ರೀಸಿದ್ದಗಂಗಾ ಮಠದಲ್ಲಿ ಮೂರುದಿನಗಳ ಕಾಲ ಚಿತ್ರೀಕರಣ ಮಾಡಲಿದೆಯಂತೆ ಚಿತ್ರತಂಡ. ಹೊಸಬರ ಈ ತಂಡಕ್ಕೆ 'ಕಾಂತಾರ' ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ. 'ಅಟ್ಲಿ' ಟೈಟಲ್‌ ಅನ್ನು ರಿಷಬ್ ಶೆಟ್ಟಿನೇ ರಿಲೀಸ್ ಮಾಡಿದ್ದಾರೆ.

  ಕಾಸರಗೋಡಿನಲ್ಲಿ ನಡೆಯುವ ಕಥೆಯಾಗಿದ್ದರೂ 'ಅಟ್ಲಿ'ಯಲ್ಲಿ ಲವ್, ಕ್ರಾಂತಿ ಪೊಲಿಟಿಕಲ್ ಡ್ರಾಮಾದಂತಹ ಅಂಶಗಳಿವೆ. ಇದೊಂದು ಮಾಸ್ ಸಿನಿಮಾ ಆಗಿದ್ದು, ಸುಮಾರು ಅರವತ್ತು ದಿನಗಳ ಕಾಲ ಮೂರು ಹಂತಗಳಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ.‌

  ಪೂಜಾ ಜನಾರ್ದನ್ ನಾಯಕಿಯಾಗಿದ್ದರೆ, ಕೆ.ಜಿ.ಎಫ್ ಅನ್ ಮೋಲ್, ಶೃತಿ, ಅಭಿಜಿತ್, ಅತುಲ್ ಕುಲಕರ್ಣಿ, ರವಿಕಾಳೆ, ನಾಜರ್, ಸುಪ್ರೀತ್, ಮನು ಮಯೂರ,ಲಲಿತಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  'ಅಟ್ಲಿ' ಸಿನಿಮಾದಲ್ಲಿ ಸುಮಾರು ಮೂರು ಹಾಡುಗಳಿದ್ದು, ಯೋಗರಾಜ್ ಭಟ್, ಡಾ|ವಿ.ನಾಗೇಂದ್ರಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ.

  English summary
  Kasaragodu Based Kannada Movie Atlee Title Announced By Rishab Shetty, Know More.
  Saturday, October 22, 2022, 21:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X