For Quick Alerts
  ALLOW NOTIFICATIONS  
  For Daily Alerts

  ಸೋಶಿಯಲ್ ಮೀಡಿಯಾದಲ್ಲಿ 'ಕಂಬ್ಳಿಹುಳ' ಕ್ರೇಜ್: ಬೆಂಬಲಕ್ಕೆ ನಿಂತ ಸ್ಯಾಂಡಲ್‌ವುಡ್‌!

  |

  ಸ್ಯಾಂಡಲ್‌ವುಡ್ ಈಗ ಬದಲಾಗಿದೆ. ರೆಗ್ಯೂಲರ್ ಸ್ಟೋರಿಯನ್ನಿಟ್ಟುಕೊಂಡು ಸಿನಿಮಾ ಮಾಡೋಕೆ ನಿರ್ದೇಶಕರು ಸಿದ್ಧರಿಲ್ಲ. ಹೊಸ ಹೊಸ ಕಂಟೆಂಟ್‌ಗಳನ್ನು ಹುಡುಕಿ ಸಿನಿಮಾ ಮಾಡುತ್ತಿದ್ದಾರೆ. ಇಂತಹ ಸಾಲಿನಲ್ಲಿ ಕನ್ನಡದ ಮತ್ತೊಂದು ಸಿನಿಮಾ ನಿಂತಿದೆ. ಅದುವೇ 'ಕಂಬ್ಳಿ ಹುಳ'.

  ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾ 'ಕಂಬ್ಳಿ ಹುಳ' ಕಳೆದೊಂದು ವಾರದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ರೇಕ್ಷಕರು, ಸೆಲೆಬ್ರೆಟಿಗಳು ಈ ಸಿನಿಮಾ ನೋಡಿ ಕಳೆದು ಹೋಗಿದ್ದಾರೆ. ಇದೇ ಕಾರಣಕ್ಕೆ ಹೊಸಬರ ಸಿನಿಮಾ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಬೆಂಬಲಕ್ಕೂ ನಿಂತಿದ್ದಾರೆ.

  'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!'ಕಾಂತಾರ' ಸಿನಿಮಾ ಕೂಡ ನನ್ನ ಸಿನಿಮಾನೇ': ಶೆಟ್ಟರ ಗ್ಯಾಂಗ್ ಮೇಲೆ ಯಶ್ ಒಲವು!

  'ಕಂಬ್ಳಿ ಹುಳ' ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೊಸಬರ ಹೊಸ ಸಾಹಸಕ್ಕೆ ಭೇಷ್ ಎಂದಿದ್ದಾರೆ. ಮಲೆನಾಡಿನ ಹಿನ್ನೆಲೆಯುಳ್ಳ ಈ ಕಥೆಗೆ ಸಿನಿಪ್ರಿಯರು ಗ್ರಿನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನ ನಿರ್ದೇಶಕರು, ಸ್ಟಾರ್ ನಟರು-ನಟಿಯರು, ನಿರ್ಮಾಪಕರು ಸೇರಿದಂತೆ ಸ್ಯಾಂಡಲ್‌ವುಡ್ ಈಗ ಬೆಂಬಲಕ್ಕೆ ನಿಂತಿದೆ.

  ಸೋಶಿಯಲ್ ಮೀಡಿಯಾದ 'ಕಂಬ್ಳಿ ಹುಳ'

  ಸೋಶಿಯಲ್ ಮೀಡಿಯಾದ 'ಕಂಬ್ಳಿ ಹುಳ'

  'ಕಂಬ್ಳಿ ಹುಳ' ಸಿನಿಮಾ ಕಳೆದ ನವೆಂಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಹೊಸಬರ ಹೊಸತನದ ಸಿನಿಮಾ ನೋಡಿ ಥ್ರಿಲ್ ಆಗಿದ್ದಾರೆ. ಆದರೆ, ಹೊಸಬರ ಸಿನಿಮಾ ಆಗಿರೋದ್ರಿಂದ ಮೌತ್ ಪಬ್ಲಿಸಿಟಿಯಿಂದಲೇ ಪ್ರೇಕ್ಷಕರನ್ನು ತಲುಪಬೇಕು. ಆ ಕೆಲಸ ಈಗ ಸೋಶಿಯಲ್ ಮೀಡಿಯಾ ಮೂಲ ಆಗುತ್ತಿದೆ. ಇದಕ್ಕೆ ಸ್ಯಾಂಡಲ್‌ವುಡ್‌ ತಾರೆಯರೂ ಕೂಡ ಕೈ ಜೋಡಿಸಿದ್ದಾರೆ.

  Exclusive: ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್: ಇಷ್ಟಕ್ಕೆಲ್ಲಾ ಕಾರಣ 'ಕಾಂತಾರ' ಸಕ್ಸಸ್!Exclusive: ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್: ಇಷ್ಟಕ್ಕೆಲ್ಲಾ ಕಾರಣ 'ಕಾಂತಾರ' ಸಕ್ಸಸ್!

  'ಬೇಗ 'ಕಂಬ್ಳಿ ಹುಳ' ನೋಡ್ತೀನಿ-ರಿಷಬ್ ಶೆಟ್ಟಿ'

  'ಬೇಗ 'ಕಂಬ್ಳಿ ಹುಳ' ನೋಡ್ತೀನಿ-ರಿಷಬ್ ಶೆಟ್ಟಿ'

  'ಕಾಂತಾರ' ಸಿನಿಮಾ ಮೂಲಕ ಬೇಜಾನ್ ಸದ್ದು ಮಾಡುತ್ತಿರೋ ರಿಷಬ್ ಶೆಟ್ಟಿ 'ಕಂಬ್ಳಿ ಹುಳ' ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ತಮ್ಮದೇ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವುದರಿಂದ 'ಕಂಬ್ಳಿ ಹುಳ' ನೋಡಿಲ್ಲ ಹೀಗಾಗಿ ಶೀಘ್ರದಲ್ಲಿಯೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. "ಕಂಬ್ಳಿಹುಳ ಚಿತ್ರಕ್ಕೆ ಎಲ್ಲೆಡೆಯಿಂದ ಸಾಕಷ್ಟು ಪ್ರಶಂಸೆ ಕೇಳಿ ಬರುತ್ತಿದೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ. ಒಂದು ಉತ್ತಮ ಚಿತ್ರವನ್ನು ಗೆಲ್ಲಿಸಲು ಇಡೀ ಚಿತ್ರರಂಗ ಒಟ್ಟಾಗಿ ನಿಂತಿರುವುದು ಹೆಮ್ಮೆಯ ವಿಷಯ. ಇದು ಜನತೆಗೂ ತಲುಪಿ ಚಿತ್ರಮಂದಿರಗಳು ಹೌಸ್‌ಫುಲ್ ಆಗಲಿ." ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

  'ನಿಮ್ಮ ಪ್ರಯತ್ನಕ್ಕೆ ಬೆಂಬಲವಿರಲಿ'

  'ನಿಮ್ಮ ಪ್ರಯತ್ನಕ್ಕೆ ಬೆಂಬಲವಿರಲಿ'

  ಸ್ಯಾಂಡಲ್‌ವುಡ್‌ನ ಬ್ಯುಸಿ ಹೀರೊಯಿನ್ ಅದಿತಿ ಪ್ರಭುದೇವ ಕೂಡ 'ಕಂಬ್ಳಿ ಹುಳ' ಸಿನಿಮಾವನ್ನು ಬೆಂಬಲಿಸಿದ್ದಾರೆ. ಹೊಸಬರಸ ವಿನೂತನ ಪ್ರಯತ್ನಕ್ಕೆ ಸಪೋರ್ಟ್ ಮಾಡಿದ್ದಾರೆ. 'ಕಂಬ್ಳಿ ಹುಳ' ಸಿನಿಮಾ ನೋಡಿ ಅಂತ ಕೇಳಿಕೊಂಡಿದ್ದಾರೆ. "ಹೊಸ ಪ್ರತಿಭೆಗಳ ಒಂದೊಳ್ಳೆ ಪ್ರಯತ್ನ. ನಿಮ್ಮೆಲ್ಲರ ಪ್ರೀತಿಯನ್ನು ಈ ಚಿತ್ರಕ್ಕೆ ನೀಡಿ." ಎಂದು ಅದಿತಿ ಪ್ರಭುದೇವ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  'ಮಲೆನಾಡು ಹುಡುಗರ ಗ್ಯಾಂಗ್ ಛಲ'

  'ಮಲೆನಾಡು ಹುಡುಗರ ಗ್ಯಾಂಗ್ ಛಲ'

  "ಸಿನಿಮಾವೆಂದರೆ ನಾಯಕ-ನಾಯಕಿಯರ ಕಥೆ ಎಂದುಕೊಂಡಿರುವ ಹೊತ್ತಿಗೆ ಅದರಾಚೆ ಅಕ್ಕಪಕ್ಕ ಪಾತ್ರಗಳ ಎದೆಯೊಳಗೂ ಇಣುಕಿ ಅವರ ಭಾವನೆಗಳನ್ನು, ತೊಳಲಾಟಗಳನ್ನು ಹೆಕ್ಕಿತಂದು ಹೆಣೆದು ಕಥೆಯಾಗಿಸಿದ್ದಾರೆ ನಿರ್ದೇಶಕ ನವನ್ ಶ್ರೀನಿವಾಸ್. ಮಲೆನಾಡಿನ ಹುಡುಗರ ಗ್ಯಾಂಗ್ ಮೊದಲ ಅವಕಾಶದಲ್ಲೇ ಗೆದ್ದೇ ಗೆಲ್ಲಬೇಕು ಎಂಬ ಛಲದಲ್ಲಿ ತಮ್ಮ ಪ್ರತಿಭೆಯನ್ನೆಲ್ಲಾ ಒತ್ತಿ ಒತ್ತಿ ತುಂಬಿಕೊಟ್ಟಿರುವ ಈ ಪ್ಯಾಕೇಜ್ 'ಕಂಬ್ಳಿ ಹುಳ'." ಎಂದು ಕವಿರಾಜ್ ಮೆಚ್ಚುಗೆ ಸೂಚಿಸಿದ್ದಾರೆ.

  ಬೆಂಬಲಕ್ಕೆ ನಿಂತ ಸ್ಯಾಂಡಲ್‌ವುಡ್

  ಬೆಂಬಲಕ್ಕೆ ನಿಂತ ಸ್ಯಾಂಡಲ್‌ವುಡ್

  'ಕಂಬ್ಳಿ ಹುಳ' ಬೆಂಬಲಕ್ಕೆ ಸ್ಯಾಂಡಲ್‌ವುಡ್‌ ಬೆಂಬಲಕ್ಕೆ ನಿಲ್ಲುತ್ತಿದೆ. ನಟ ಧನ್ವೀರ್, ಪ್ರಮೋದ್, ನಿರ್ದೇಶಕರಾದ ಸಿಂಪಲ್ ಸುನಿ, ಜಯತೀರ್ಥ, ಯೋಗರಾಜ್ ಭಟ್, ಚಾರ್ಲಿ ಕಿರಣ್ ರಾಜ್, ವಿನಯ್ ರಾಜ್ ಕುಮಾರ್ ಈಗಾಗಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೊಸಬರ ಪ್ರಯತ್ನವನ್ನು ಹಾಡಿ ಹೊಗಳಿದ್ದಾರೆ. 'ಕಂಬ್ಳಿ ಹುಳ' ನಿರ್ದೇಶಕ ನವನ್ ಶ್ರೀನಿವಾಸ್‌ಗೆ ಮೊದಲ ಸಿನಿಮಾ. ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆಯ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ.

  English summary
  Kaviraj, Rishab Shetty, Aditi Prabhudeva Come in Support of Kannada Movie Kamblihula, Know More.
  Thursday, November 10, 2022, 9:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X