twitter
    For Quick Alerts
    ALLOW NOTIFICATIONS  
    For Daily Alerts

    Yash About Lagaan: 'ಕೆಜಿಎಫ್ 2' ಪ್ರಚಾರದ ವೇಳೆ ಯಶ್ 'ಲಗಾನ್' ಸಿನಿಮಾ ಎಳೆದು ತಂದಿದ್ದೇಕೆ?

    |

    ಒಂದೆರಡು ವಾರ ಯಾರು ನೋಡಿದರೂ RRR ಬಗ್ಗೆನೇ ಮಾತಾಡುತ್ತಿದ್ದರು. ಈಗ 'KGF 2' ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಎಲ್ಲರ ಕಣ್ಣು ಬಿಟ್ಟಿದ್ದಿದೆ. ಈ ಕಾರಣಕ್ಕೆ ಸಿನಿಮಾ ಯಾವ ಲೆವೆಲ್‌ನಲ್ಲಿ ಇರುತ್ತೆ? ಏನೆಲ್ಲಾ ದಾಖಲೆಗಳನ್ನು ಮಾಡಬಹುದು ಎನ್ನುವುದೇ ಚರ್ಚೆಯಾಗುತ್ತಿದೆ.

    'ಕೆಜಿಎಫ್' ಸಿನಿಮಾ ಬೇಜಾನ್ ಸದ್ದು ಮಾಡಿತ್ತು. ಯಶ್ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನು ಬರೆದಿದ್ದರು. ಈ ಕಾರಣಕ್ಕೆ 'ಕೆಜಿಎಫ್ 2' ಕೂಡ ಬಾಕ್ಸಾಪೀಸ್ ಅನ್ನು ಚಿಂದಿ ಮಾಡುತ್ತೆ ಎಂದು ನಂಬಲಾಗಿದೆ. ಯಶ್ ಕೂಡ ಇಡೀ ದೇಶ ಸುತ್ತಿ ಪ್ರಚಾರ ಮಾಡುತ್ತಿದ್ದಾರೆ.

    Yash: ಬಾಲಿವುಡ್‌ಗೆ ಹೋಗಲ್ವಂತೆ ಯಶ್: ನೀಡಿದ ಕಾರಣ ಬೊಂಬಾಟ್Yash: ಬಾಲಿವುಡ್‌ಗೆ ಹೋಗಲ್ವಂತೆ ಯಶ್: ನೀಡಿದ ಕಾರಣ ಬೊಂಬಾಟ್

    ರಾಕಿಂಗ್ ಸ್ಟಾರ್ ಯಶ್ ಸದ್ಯ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಬಾಲಿವುಡ್ ಮಾರ್ಕೆಟ್ ಲೂಟಿ ಮಾಡುವುದಕ್ಕೆ ಯಶ್ ಸ್ಕೆಚ್ ಹಾಕಿದ್ದಾರೆ. ಇನ್ನೊಂದು ಕಡೆ ಐದೂ ಭಾಷೆಯಲ್ಲೂ 'ಕೆಜಿಎಫ್ 2' ಸಿನಿಮಾ ಹವಾ ಜೋರಾಗೇ ಇದೆ. ಈ ಕಾರಣಕ್ಕೆ ಪ್ರಚಾರ ಜೋರಾಗಿ ಮಾಡುತ್ತಿದ್ದಾರೆ. ಈ ವೇಳೆ ಯಶ್ ಬಾಲಿವುಡ್‌ನ ಸೂಪರ್‌ಸ್ಟಾರ್ ಆಮಿರ್ ಖಾನ್ ಅಭಿನಯದ 'ಲಗಾನ್' ಚಿತ್ರವನ್ನು ಎಳೆದು ತಂದಿದ್ದಾರೆ.

    Yash KGF 2 Remuneration : 'ಕೆಜಿಎಫ್ 2' ಚಿತ್ರಕ್ಕೆ ಯಶ್ ಸಂಭಾವನೆ ಪಡೆದಿಲ್ಲ!Yash KGF 2 Remuneration : 'ಕೆಜಿಎಫ್ 2' ಚಿತ್ರಕ್ಕೆ ಯಶ್ ಸಂಭಾವನೆ ಪಡೆದಿಲ್ಲ!

    ಒನ್ ಲೈನ್ ಕಥೆ ಕೇಳಿ ಥ್ರಿಲ್ ಆಗಿದ್ದ ಯಶ್

    ಒನ್ ಲೈನ್ ಕಥೆ ಕೇಳಿ ಥ್ರಿಲ್ ಆಗಿದ್ದ ಯಶ್

    ಯಶ್ ನ್ಯೂಸ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕುತೂಹಲಕಾರಿ ಅಂಶಗಳನ್ನು ಹೊರ ಹಾಕಿದ್ದಾರೆ. 'ಕೆಜಿಎಫ್' ಸಿನಿಮಾ ಹೇಗೆ ಶುರುವಾಯ್ತು ಅನ್ನುವುದರಿಂದ ಬಿಡುಗಡೆವರೆಗೂ ಮನಬಿಚ್ಚಿ ಮಾತಾಡಿದ್ದಾರೆ. "ಪ್ರಶಾಂತ್ ನೀಲ್ 'ಉಗ್ರಂ' ಸಿನಿಮಾ ನೋಡಿದ್ದೆ. ವಿಜ್ಯೂವಲ್ ಟ್ರೀಟ್ ಅದ್ಭುತವಾಗಿತ್ತು. ಈ ವೇಳೆ ಹೊಂಬಾಳೆ ಫಿಲಂಸ್ ಇನ್ನೊಂದು ಸಿನಿಮಾ ಮಾಡಲು ಹೊರಟಿದ್ದರು. ಆಗ ದೊಡ್ಡ ಸಿನಿಮಾ ಮಾಡಬೇಕು ಅಂತಿತ್ತು. 2013ಕ್ಕೆ ಒಂದು ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿಬಿಟ್ಟೆವು. ಆಗ ಪ್ರಶಾಂತ್ ನೀಲ್ ಒಂದು ಕಥೆಯ ಚಿಕ್ಕ ಪಾರ್ಟ್ ಅನ್ನು ಹೇಳಿದ್ದರು. ಆ ಒಂದು ಲೈನ್ ಕೇಳಿನೇ ನಾನು ಥ್ರಿಲ್ ಆಗಿದ್ದೆ. ಆಗ ಪ್ರಶಾಂತ್ ನೀಲ್‌ಗೆ ಇದನ್ನೇ ಯಾಕೆ ಸಿನಿಮಾ ಮಾಡಬಾರದು ಅಂತ ಹೇಳಿದ್ದೆ. ಆಗ ಅವರು ಕೋಟೆಯ ಎಪಿಸೋಡ್‌ ಅನ್ನು ಡೆವೆಲಪ್ ಮಾಡಿ ತಂದಿದ್ದರು." ಎಂದು ಯಶ್ ನ್ಯೂಸ್ ಚಾನಲ್‌ಗೆ ಹೇಳಿದ್ದಾರೆ.

    'ಕೆಜಿಎಫ್' ಬಗ್ಗೆ ಆತ್ಮವಿಶ್ವಾಸ ಬಂದಿದ್ದೇಗೆ?

    'ಕೆಜಿಎಫ್' ಬಗ್ಗೆ ಆತ್ಮವಿಶ್ವಾಸ ಬಂದಿದ್ದೇಗೆ?

    " ಮೊದಲು 'ಕೆಜಿಎಫ್' ಸಿನಿಮಾ ಕೇವಲ ಕನ್ನಡ ಮಾರುಕಟ್ಟೆಗೆ ಅಂತಲೇ ಮಾಡಲಾಗಿತ್ತು. ಆದರೆ, ನಮ್ಮದೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟಕ್ಕೆ ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದ್ದೆವು. ನನ್ನ ಹಿಂದಿನ ಸಿನಿಮಾ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ'ಗೆ ದೊಡ್ಡ ಸಕ್ಸಸ್ ಸಿಕ್ಕಿತ್ತು. ಆಗ ನನಗೆ ಮತ್ತಷ್ಟು ಕಾನ್ಫಿಡೆನ್ಸ್ ಬಂದಿತ್ತು. ಆಗಲೇ ಕನ್ನಡ ಮಾರ್ಕೆಟ್ ಬೆಳೆಯುತ್ತಿದೆ ಅಂತ ಗೊತ್ತಾಗಿತ್ತು." ಎಂದು ಯಶ್ ಹೇಳಿದ್ದಾರೆ.

    'ಲಗಾನ್' ಟೀಮ್‌ನಂತೆ ದುರ್ಬಲ ಟೀಮ್

    'ಲಗಾನ್' ಟೀಮ್‌ನಂತೆ ದುರ್ಬಲ ಟೀಮ್

    "ಕೆಜಿಎಫ್ ಸಿನಿಮಾ ಒಂದು ಹೋರಾಟ. ನಮ್ಮ ಬಳಿ ಹಣವಿದೆ. ನಾವು ದೊಡ್ಡ ಸಿನಿಮಾ ಮಾಡುತ್ತೇವೆ ಅಂತಲ್ಲ. 'ಕೆಜಿಎಫ್' ಟೀಮ್ ಒಂದು ದುರ್ಬಲ ಟೀಮ್. 'ಲಗಾನ್' ಟೀಮ್ ಇತ್ತಲ್ಲ ಹಾಗೆ. ನಾವು 'ಕೆಜಿಎಫ್' ಮಾಡುವಾಗ ಜನರು ನಮ್ಮ ಚಿತ್ರರಂಗದ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕು ಅಂತಿತ್ತು. ಸಿನಿಮಾ ಮಾಡುತ್ತಾ, ನಮಗೆ ಇದು ಬೇರೆ ಬೇರೆ ಭಾಷೆಯಲ್ಲಿ ಬಂದರೆ ಹೇಗೆ? ಎಂದು ಆಲೋಚನೆ ಮಾಡಿದೆವು. ಆದರೆ, ಪ್ರಶಾಂತ್ ಖುಷಿಯಾಗಿರಲಿಲ್ಲ. ನಾವು ಮಾಡುವ ಕಥೆ ಇನ್ನೂ ದೊಡ್ಡ ಮಟ್ಟದಲ್ಲಿ ಆಗಬೇಕು ಅಂತಿದ್ದರು. ಏನಾಗಲ್ಲ ಹೋಗೋಣ ಅಂತ ನಾನು ಹೇಳಿದೆ." ಎಂದು ಯಶ್ ಪ್ಯಾನ್ ಇಂಡಿಯಾ ಬಗ್ಗೆ ರಿವೀಲ್ ಮಾಡಿದ್ದಾರೆ.

    Recommended Video

    KGF Chapter 2 Mumbai Press Meet LIVE | Yash | Sanjay Dutt | Raveena Tandon | Prashanth Neel
    ಮಲಯಾಳಂ ಕಲಿಯಲು ಆಗಲೇ ಇಲ್ಲ

    ಮಲಯಾಳಂ ಕಲಿಯಲು ಆಗಲೇ ಇಲ್ಲ

    " ನನಗೆ ಒಂದು ಭಾಷೆ ಮಾತ್ರ ಕಲಿಯಲು ಸಾಧ್ಯವಾಗಿಲ್ಲ. ಅದು ಮಲಯಾಳಂ. ನಮ್ಮೂರಿಗೆ ಯಾರಾದರೂ ಬಂದು ಉಳಿದುಕೊಂಡು, ನಮ್ಮದೇ ಭಾಷೆಯಲ್ಲಿ ಮಾತನಾಡಿದರೆ ನಮಗೆ ಖುಷಿಯಾಗುತ್ತೆ. ನಮ್ಮ ಮುಖದಲ್ಲಿ ನಗು ಬರುತ್ತೆ. ಹಾಗೇ ಎಲ್ಲಾ ಭಾಷೆಯಲ್ಲಿ ತಪ್ಪಾದರೂ ಪರವಾಗಿಲ್ಲ ಅಂತ ಡಬ್ ಮಾಡಲು ಪ್ರಯತ್ನ ಪಟ್ಟೆ. ಎಲ್ಲಾ ಡಬ್ಬಿಂಗ್ ಸಿನಿಮಾ ಅಂತಾರೆ. ನಾವು ಕನ್ನಡದಲ್ಲೂ ಡಬ್ ಮಾಡಲೇಬೇಕು. ಆದರೆ, ಕನ್ನಡಕ್ಕಿಂತ ಹೆಚ್ಚು ಬೇರೆ ಭಾಷೆಗೆ ಡಬ್ ಮಾಡಲು ಯತ್ನಿಸಿದ್ದೇನೆ." ಎಂದು ಯಶ್ ಹೇಳಿದ್ದಾರೆ.

    English summary
    KGF was like an underdog team like Lagaan says Yash in Mumbai. Here is details.
    Wednesday, April 6, 2022, 18:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X