»   » ಮನಸ್ತಾಪ ಮರೆತು ಒಂದಾದ ಸುದೀಪ್ ದಂಪತಿಗೆ ಶುಭ ಹಾರೈಸಿದ ಜಗ್ಗೇಶ್

ಮನಸ್ತಾಪ ಮರೆತು ಒಂದಾದ ಸುದೀಪ್ ದಂಪತಿಗೆ ಶುಭ ಹಾರೈಸಿದ ಜಗ್ಗೇಶ್

Posted By:
Subscribe to Filmibeat Kannada

ಎರಡು ವರ್ಷಗಳ ಹಿಂದೆ ವಿಚ್ಛೇದನ ಅರ್ಜಿ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನ ನಟ ಸುದೀಪ್ ಹಾಗೂ ಪತ್ನಿ ಪ್ರಿಯಾ ವಾಪಸ್ ಪಡೆದಿದ್ದಾರೆ. ಆ ಮೂಲಕ, ಸುದೀಪ್-ಪ್ರಿಯಾ ವಿಚ್ಛೇದನ ಪ್ರಕರಣ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಂದು ಸುಖಾಂತ್ಯ ಕಂಡಿದೆ.

ವಿಚ್ಛೇದನದ ಅರ್ಜಿಯನ್ನ ವಾಪಸ್ ಪಡೆದ ಸಂಗತಿಯನ್ನ ಸುದೀಪ್ ಪರ ವಕೀಲ ಖಚಿತ ಪಡಿಸುತ್ತಿದ್ದಂತೆಯೇ, ನಿಮ್ಮ 'ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ' ಈ ಕುರಿತು ''ಮಗಳಿಗಾಗಿ ಒಂದಾದ ಸುದೀಪ್ ದಂಪತಿ: ಕಿಚ್ಚನ ಫ್ಯಾನ್ಸ್ ಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ.?!'' ಶೀರ್ಷಿಕೆ ಅಡಿ ವಿವರವಾಗಿ ವರದಿ ಪ್ರಕಟ ಮಾಡಿತ್ತು.

Kiccha Sudeep-Priya Divorce case solved: Jaggesh reaction

ಈ ವರದಿ ಟ್ವಿಟ್ಟರ್ ಮೂಲಕ ನಟ ಜಗ್ಗೇಶ್ ರವರಿಗೆ ತಲುಪಿದ ಹಾಗೆ, ಟ್ವಿಟ್ಟರ್ ಮೂಲಕವೇ ಸುದೀಪ್ ದಂಪತಿಗೆ ಶುಭ ಹಾರೈಸಿದ್ದಾರೆ.

''ಸುದೀಪ್ ನಿನ್ನ ನಿರ್ಣಯ ನನ್ನ ಹೃದಯ ತುಂಬಿ ಬಂತು. ವಿಶ್ವದಲ್ಲಿ ಇನ್ನು ಮುಂದೆ ಯಾವ ಕಷ್ಟವೂ ನಿನ್ನ ಬಳಿ ಸುಳಿಯಲ್ಲ. ರಾಯರ ಆಣೆ. ನೀನು ನನ್ನ ಶ್ರೇಷ್ಠ ವ್ಯಕ್ತಿಯಾಗಿಬಿಟ್ಟೆ. ಐ ಲವ್ ಯು'' ಎಂದು 'ಒನ್ಇಂಡಿಯಾ ಕನ್ನಡ' ಟ್ವೀಟ್ ಗೆ ರೀಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ರವರಿಗೆ ಜಗ್ಗೇಶ್ ಅಭಿನಂದಿಸಿದ್ದಾರೆ.

ಮನಸ್ತಾಪ ಮರೆತು ಸುದೀಪ್ ದಂಪತಿ ಒಂದಾಗಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ. ಸುದೀಪ್ ದಂಪತಿ ಸದಾ ನಗುನಗುತ್ತಿರಲಿ ಎನ್ನುವುದೇ ನಮ್ಮ ಆಶಯ ಕೂಡ.

English summary
Kannada Actor Jaggesh has taken his twitter account to congratulate Kiccha Sudeep and his wife Priya Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada