»   » ಸೆಕೆಂಡ್ ಹ್ಯಾಂಡ್ ಜಾಹೀರಾತಿನಲ್ಲಿ ಸುದೀಪ್, ಸಾಧು ಕೋಕಿಲ

ಸೆಕೆಂಡ್ ಹ್ಯಾಂಡ್ ಜಾಹೀರಾತಿನಲ್ಲಿ ಸುದೀಪ್, ಸಾಧು ಕೋಕಿಲ

Posted By:
Subscribe to Filmibeat Kannada

ಸೆಲೆಬ್ರಿಟಿಗಳನ್ನು ಜಾಹೀರಾತಿನಲ್ಲಿ ಬಳಸಿಕೊಂಡರೆ ಕಂಪೆನಿಗಳಿಗೆ ಲಾಭವಾಗುತ್ತೋ ಗೊತ್ತಿಲ್ಲ, ಆದರೆ ಪ್ರಮುಖವಾಗಿ ಕ್ರಿಕೆಟಿಗರಿಗೆ ಮತ್ತು ಸಿನಿಮಾ ಸ್ಟಾರುಗಳಿಗೆ ಜಾಹೀರಾತು ಪ್ರಪಂಚ ಎನ್ನುವುದು ಭಾಗ್ಯದ ಬಾಗಿಲು ಇದ್ದಂತೆ.

ಸಿನಿಮಾ ಸ್ಟಾರುಗಳಿಗೆ ತಿಂಗಳಾನುಗಟ್ಟಲೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡು ಅದರಿಂದ ಪಡೆಯುವ ಸಂಭಾವನೆಗಿಂತ, ಜಾಹೀರಾತಿನ ಆರ್ಥಿಕ ಲೆಕ್ಕಾಚಾರ ಸುಲಭ ಮತ್ತು ನಿರಾಳ.

ಡಾ. ರಾಜ್, ಶಿವಣ್ಣ, ಪುನೀತ್, ಉಪ್ಪಿ, ದರ್ಶನ್, ಸುದೀಪ್, ರಾಗಿಣಿ, ರಮ್ಯಾ ಮೇಡಂ ಹೀಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡವರ ಪಟ್ಟಿ ಬಲುದೊಡ್ಡದು. (ರನ್ನ ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ)

Kichcha Sudeep and Sadhu Kokila in OLX ad

ಈ ಸಾಲಿಗೆ ಈಗ ಕನ್ನಡದ ಹಾಸ್ಯ ನಟ ಸಾಧು ಕೋಕಿಲಾ ಕೂಡಾ ಸೇರ್ಪಡೆಯಾಗಿದ್ದಾರೆ. ಸುದೀಪ್ ಜೊತೆ ಸಾಧು ಮಹಾರಾಜ್ OLX ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸೆಕೆಂಡ್ ಹ್ಯಾಂಡ್ ಉತ್ಪನ್ನಗಳ ಆಲ್ಲೈನ್ ಮಾರುಕಟ್ಟೆಯಲ್ಲಿ ಮಂಚೂಣಿಯಲ್ಲಿರುವ ಓಎಲ್ಎಕ್ಸ್ ಸುದೀಪ್ ಮತ್ತು ಸಾಧು ಅವರನ್ನೊಳಗೊಂಡ ಜಾಹೀರಾತನ್ನು ತನ್ನ ಉತ್ಪನ್ನಗಳ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

ಈ ಜಾಹೀರಾತಿನ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿ ತುಂಬಾನೆ ಕ್ಲಿಕ್ಸ್ ಪಡೆಯುತ್ತಿರುವುದು ವಿಶೇಷ. ಕೆಲವೊಮ್ಮೆ ಓವರ್ ಆಕ್ಟಿಂಗ್ ಅನಿಸಿದರೂ, ಸಾಧುಗೆ ನಾಯಕ ನಟರೇ ನಾಚಿಸುವಷ್ಟು ಅಭಿಮಾನಿ ಬಳಗ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಸುದೀಪ್ ಮತ್ತು ಸಾಧು ಜೋಡಿ ಈಗಾಗಲೇ ಮಾಣಿಕ್ಯ, ಕಾಮಣ್ಣನ ಮಕ್ಕಳು ಸೇರಿದಂತೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಜಾಹೀರಾತಿನ ಸರದಿ.. OLX ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Kichcha Sudeep and comedian Sadhu Kokila in OLX advertisement.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada